ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಸಂಸದರ ಸಂಖ್ಯೆ ಮಾತ್ರ ವ್ಯತ್ಯಾಸದಿಂದ ಕೂಡಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ೧೦ ಲPಕ್ಕಿಂತಲೂ ಹೆಚ್ಚು ಜನಸಂಖ್ಯೆ ಇರುವ ಕ್ಷೇತ್ರಗಳಲ್ಲೂ ಒಬ್ಬ ಸಂಸದನಿzನೆ. ಹೀಗಾಗಿ, ಆಡಳಿತ ನಡೆಸುವುದು ತುಂಬಾ ಕಷ್ಟಕರವಾಗಿದೆ. ಆದ್ದರಿಂದ ಸರ್ಕಾರವು 2026 ರಲ್ಲಿ ಕ್ಷೇತ್ರ ಮರು ವಿಂಗಡನೆ ಮಾಡಲು ಯೋಜನೆ ರೂಪಿಸಿಕೊಂಡಿದೆ. ಆದರೆ, ದಕ್ಷಿಣಭಾರತದ ರಾಜ್ಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ. ಈ ಕ್ಷೇತ್ರ ಮರುವಿಂಗಡಣೆ ಯಾವ ರೀತಿ ಮಾಡುತ್ತಾರೆ ಎನ್ನುವುದು ಮುಂಬರುವ ವರ್ಷಗಳಲ್ಲಿ ತಿಳಿಯಲಿದೆ….
ನೂತನ ಸಂಸತ್ ಭವನದಲ್ಲಿನ ಸಂಸದರ ಆಸನಗಳ ವ್ಯವಸ್ಥೆಯು ೮೮೮ ಸೀಟು ಹೊಂದಿದ್ದು, 2026ರ ಬಳಿಕ ನಡೆಯಲಿರುವ ಲೋಕಸಭಾ ಕ್ಷೇತ್ರಗಳ ಡಿಲಿಮಿಟೇಶನ್ (ಕ್ಷೇತ್ರ ಮರುವಿಂಗಡಣೆ) ಅನ್ವಯವಾಗಿ ಇದನ್ನು ರೂಪಿಸಲಾಗಿದೆ. ಪ್ರತಿ 10 ಲಕ್ಷ ಜನರಿಗೆ ಒಬ್ಬ ಸಂಸದ ಎನ್ನುವುದು ಡಿಲಿಮಿಟೇಶನ್ ಸೂತ್ರ. ಆದರೆ, ಈ ಸೂತ್ರದಿಂದ ಉತ್ತರ ಭಾರತಕ್ಕೆ ಹೆಚ್ಚು ಲಾಭ. ದಕ್ಷಿಣ ಭಾರತಕ್ಕೆ ದೊಡ್ಡ ಹಿನ್ನಡೆ ಎಂಬ ಕೂಗು ಎದ್ದಿದೆ. ಪ್ರಸ್ತುತ ಲೋಕಸಭಾ ಸ್ಥಾನಗಳ ಸಂಖ್ಯೆ ೫೪೫. ಇದನ್ನು ೧೯೭೧ರ ಜನಗಣತಿ ಆಧಾರದ ಮೇಲೆ ನಿಗದಿಪಡಿಸಲಾಗಿದೆ. ಈ ಸೀಟುಗಳ ಸಂಖ್ಯೆ ೨೦೨೬ರವರೆಗೂ ಇರಲಿದ್ದು, ಆ ನಂತರದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಈಗಾಗಲೇ ತಮಿಳುನಾಡು ಸರ್ಕಾರ ಡಿಲಿಮಿಟೇಶನ್ ಕುರಿತಂತೆ ಕ್ಯಾತೆ ತೆಗೆದಿದ್ದು, ನಮ್ಮ ರಾಜ್ಯ ೯ ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುತ್ತದೆ ಎಂದು ಹೇಳುತ್ತಿದೆ. ಅದು ಯಾವ ರೀತಿ ಎಂದು ಈವರೆಗೂ ಆ ರಾಜ್ಯ ತಿಳಿಸಿಲ್ಲ. ಕರ್ನಾಟಕ ಸಹ ಡಿಲಿಮಿಟೇಶನ್ ಕುರಿತಂತೆ ಖ್ಯಾತೆ ತೆಗೆಯುತ್ತಿದೆ.
1971ರ ನಂತರ ಡಿ-ಲಿಮಿಟೇಷನ್ ಏಕೆ ಮಾಡಲಿಲ್ಲ?
ಸ್ವಾತಂತ್ರ್ಯ ನಂತರ ೧೯೫೧ರಲ್ಲಿ ಮೊದಲ ಜನಗಣತಿ ನಡೆದಾಗ ದೇಶದ ಜನಸಂಖ್ಯೆ ೩೬ ಕೋಟಿಯಷ್ಟಿತ್ತು. ೧೯೭೧ರ ಹೊತ್ತಿಗೆ ಜನಸಂಖ್ಯೆಯು ಸುಮಾರು ೫೫ ಕೋಟಿಗೆ ಏರಿಕೆಯಾಯಿತು. ಆದರೆ, 70ರ ದಶಕದಲ್ಲಿ ಸರ್ಕಾರ ಕುಟುಂಬ ಯೋಜನೆಗೆ ಒತ್ತು ನೀಡಿತು. ದಕ್ಷಿಣದ ರಾಜ್ಯಗಳು ಇದನ್ನು ಕಡ್ಡಾಯವಾಗಿ ಅಳವಡಿಸಿಕೊಂಡವು. ಜನಸಂಖ್ಯೆ ನಿಯಂತ್ರಿಸುವಲ್ಲಿ ಸಫಲತೆ ಕಂಡಿವೆ. ಆದರೆ, ಉತ್ತರ ಭಾರತದ ರಾಜ್ಯಗಳಲ್ಲಿ ಕುಟುಂಬ ಯೋಜನೆ ಅಷ್ಟು ಸಮರ್ಪಕವಾಗಿ ಅನುಷ್ಠಾನಗೊಳ್ಳಲೇ ಇಲ್ಲ. ಜನಸಂಖ್ಯೆಯು ಅಲ್ಲಿ ವೇಗವಾಗಿ ಬೆಳೆಯುತ್ತಲೇ ಇದೆ. ಉತ್ತರ ಭಾರತದಲ್ಲಿನ ಜನಸಂಖ್ಯಾ ಬೆಳವಣಿಗೆ ವಿರುದ್ಧ ವಾಗ್ವಾದಗಳು ಅಂದು ಕೂಡಾ ಎದ್ದಿದ್ದರಿಂದ ಇಂದಿರಾಗಾಂಧಿ ಸರ್ಕಾರವು ೧೯೭೬ರಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂವಿಧಾನವನ್ನು ತಿದ್ದುಪಡಿ ಮಾಡುವ ಮೂಲಕ ೨೦೨೬ರವರೆಗೆ ಹೊಸ ಸೀಮಾ ನಿರ್ಣಯ ನಿರ್ಬಂಧಿಸಿತು. ೨೦೨೬ರ ವೇಳೆಗೆ ಎ ರಾಜ್ಯಗಳಲ್ಲಿ ಜನಸಂಖ್ಯೆಯ ಬೆಳವಣಿಗೆ ದರ ಒಂದೇ ಆಗಲಿದೆ ಎಂದು ಸರ್ಕಾರ ನಂಬಿದೆಯಾದರೂ, ಅಂಕಿ-ಅಂಶಗಳು ಇದಕ್ಕೆ ಪೂರಕವಾಗಿಲ್ಲ. ಉತ್ತರ ಭಾರತಕ್ಕೆ ಹೋಲಿಸಿದರೆ ಈಗಲೂ ದಕ್ಷಿಣ ಭಾರತದ ಜನಸಂಖ್ಯೆ ಕಡಿಮೆ ಇದೆ.
ದಕ್ಷಿಣ ರಾಜ್ಯಗಳಿಗೆ ಡಿಲಿಮಿಟೇಷನ್ ಹಿನ್ನಡೆಯೇ?
ಜನಸಂಖ್ಯೆ ಕಡಿಮೆ ಇರುವ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಲಿದೆ. ಜನಸಂಖ್ಯೆ ಹೆಚ್ಚಾಗಿರುವ ರಾಜ್ಯಗಳಲ್ಲಿ ಸೀಟುಗಳ ಸಂಖ್ಯೆಯು ಸಹಜವಾಗಿ ಹೆಚ್ಚಲಿದೆ. ಉದಾಹರಣೆಗೆ ಕರ್ನಾಟಕದ ಅಂದಾಜು 6.11 ಕೋಟಿ (2011ರ ಜನಗಣತಿ) ಜನಸಂಖ್ಯೆ ಹೊಂದಿದ್ದು, 28 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಆದರೆ, ಮಧ್ಯಪ್ರದೇಶವು ೮.೬೫ ಕೋಟಿ ಜನಸಂಖ್ಯೆಯ ಜೊತೆಗೆ 29 ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಒಂದು ವೇಳೆ ಡಿಲಿಮಿಟೇಶನ್ ನಡೆದರೆ ಪ್ರಸ್ತುತ ಜನಸಂಖ್ಯೆಯ ಪ್ರಕಾರ ಮಧ್ಯಪ್ರದೇಶವು ಕನಿಷ್ಠ ೮೬ ಲೋಕಸಭಾ ಸ್ಥಾನಗಳನ್ನು ಮತ್ತು ಕರ್ನಾಟಕ 41 ಸ್ಥಾನಗಳನ್ನು ಒಳಗೊಳ್ಳುವ ಸಾಮರ್ಥ್ಯ ಇದೆ. ಪ್ರತಿ 10 ಲಕ್ಷ ಜನಸಂಖ್ಯೆಗೆ ಒಬ್ಬ ಸಂಸದರ ಸೂತ್ರದ ಪ್ರಕಾರ ಈ ಸಂಖ್ಯೆ ಹಂಚಿಕೆಯಾಗಲಿದೆ.
ಹಾಗೆಯೇ, ಇನ್ನೊಂದು ಉದಾಹರಣೆ ಗಮನಿಸಿದರೆ ಕೇರಳದ ಅಂದಾಜು ಜನಸಂಖ್ಯೆ 3.57 ಕೋಟಿ. ಪ್ರಸ್ತುತ ಅಲ್ಲಿ ೨೦ ಲೋಕಸಭಾ ಸ್ಥಾನಗಳಿವೆ. ಉತ್ತರಪ್ರದೇಶ ೨೩.೫೬ ಕೋಟಿ ಜನಸಂಖ್ಯೆಯೊಂದಿಗೆ ೮೦ ಸಂಸದರನ್ನು ಹೊಂದಿದೆ. ಇದೇ 10 ಲಕ್ಷ ಸೂತ್ರ ಜಾರಿಯಾದರೆ, ಕೇರಳದ ಲೋಕಸಭಾ ಸ್ಥಾನಗಳ ಸಂಖ್ಯೆ 20 ಸ್ಥಾನಗಳೇ ಕಾಯ್ದುಕೊಳ್ಳುವ ಸಾಧ್ಯತೆ ಇದೆ. ಆದರೆ, ಉತ್ತರ ಪ್ರದೇಶದಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆ 143 ಅಥವಾ ಅದಕ್ಕಿಂತಲೂ ಹೆಚ್ಚಾಗಲೂಬಹುದು. ಈ ಕಾರಣಕ್ಕೆ ದಕ್ಷಿಣದ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿವೆ. ನಾವು ಜನಸಂಖ್ಯೆ ನಿಯಂತ್ರಿಸಿವೆ, ಕೇಂದ್ರದ ಯೋಜನೆಗಳನ್ನು ಜಾರಿಗೆ ತಂದಿವೆ. ಆದಾಗ್ಯೂ, ಲೋಕಸಭೆಯಲ್ಲಿ ನಮ್ಮ ಸ್ಥಾನ ಕುಗ್ಗಲಿದೆ ಎನ್ನುವುದು ದಕ್ಷಿಣ ಭಾರತದ ರಾಜ್ಯಗಳ ವಾದ. ಉತ್ತರ ಭಾರತದ ರಾಜ್ಯಗಳ ಸೀಟುಗಳ ಸಂಖ್ಯೆ ಎರಡು, ಮೂರು ಅಥವಾ ನಾಲ್ಕು ಪಟ್ಟು ಹೆಚ್ಚಾಗುವ ಎ ಸಾಧ್ಯತೆಗಳು ಇವೆ ಎಂದೇ ರಾಜಕೀಯ ವಿಶ್ಲೇಷಕರು ಅಂದಾಜಿಸುತ್ತಿzರೆ.
ಪ್ರತಿ 10 ಲಕ್ಷ ಜನರಿಗೆ ಒಬ್ಬ ಸಂಸದ
ಸಂವಿಧಾನದ ೮೧ನೇ ವಿಧಿಯು ದೇಶದಲ್ಲಿ ಲೋಕಸಭಾ ಸದಸ್ಯರ ಸಂಖ್ಯೆ 550 ಮೀರಬಾರದು ಎಂದು ಹೇಳುತ್ತದೆ. ಆದರೆ, ಪ್ರತಿ 10 ಲಕ್ಷ ಜನಸಂಖ್ಯೆಗೆ ಒಬ್ಬ ಸಂಸದರಿರಬೇಕು ಎನ್ನುತ್ತದೆ ಸಂವಿಧಾನ. ರಾಜ್ಯದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಸ್ಥಾನಗಳ ಸಂಖ್ಯೆ ಎಷ್ಟಿರಬೇಕು ಎನ್ನುವುದನ್ನು ಸೀಮಾ ನಿರ್ಣಯ ಆಯೋಗ ಸ್ಪಷ್ಟಪಡಿಸುತ್ತದೆ. ಮೊದಲ ಸಾರ್ವತ್ರಿಕ ಚುನಾವಣೆಯ ವೇಳೆ ಲೋಕಸಭಾ ಸ್ಥಾನಗಳ ಸಂಖ್ಯೆ ೪೮೯ ಇತ್ತು. 1971ರ ಜನಗಣತಿಯ ಆಧಾರದ ಮೇಲೆ ಕೊನೆಯ ಡಿಲಿಮಿಟೇಶನ್ ಮಾಡಲಾಯಿತು. ನಂತರ ಲೋಕಸಭಾ ಕ್ಷೇತ್ರಗಳ ಸಂಖ್ಯೆ 543ಕ್ಕೆ ಏರಿಕೆಯಾಯಿತು.
ಯಾವ ದೇಶದಲ್ಲಿ ಎಷ್ಟು ಜನರಿಗೆ ಒಬ್ಬ ಸಂಸದನಿದ್ದಾನೆ?
1. ಭಾರತ: ಭಾರತದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ ಒಬ್ಬ ಸಂಸದರಿರಬೇಕು. ಆದರೆ, ಭಾರತದಲ್ಲಿ ಈಗ ಆ ರೀತಿ ಇಲ್ಲ. ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಒಟ್ಟು 793 ಸಂಸದರಿದ್ದಾರೆ. ಪ್ರಸ್ತುತ ದೇಶದ ಜನಸಂಖ್ಯೆ ೧೩೮ ಕೋಟಿಗೂ ಅಧಿಕವಿದೆ. ಈ ಲೆಕ್ಕಾಚಾರ ನೋಡಿದರೆ ಪ್ರತಿ 25.5 ಲಕ್ಷ ಜನರಿಗೆ ಒಬ್ಬ ಸಂಸದರಿದ್ದಾರೆ.
2. ಚೀನಾ: ಭಾರತದೊಂದಿಗಿನ ಜನಸಂಖ್ಯಾ ಹೋಲಿಕೆಯಲ್ಲಿ ಕೂದಲೆಳೆ ಅಂತರ ಕಾಯ್ದುಕೊಂಡಿರುವ ಚೀನಾದಲ್ಲಿ ೪.೫ ಲಕ್ಷ ಜನರಿಗೆ ಒಬ್ಬ ಸಂಸದರಿzರೆ. ಪ್ರಸ್ತುತ ಚೀನಾದಲ್ಲಿ ಸುಮಾರು ೩೦೦೦ ಸಂಸದರಿದ್ದಾರೆ.
3. ಅಮೇರಿಕಾ: ಅಮೇರಿಕಾದಲ್ಲೂ ಉಭಯ ಸದನಗಳು ಸೇರಿ ಒಟ್ಟು ೫೩೫ ಸಂಸದರಿzರೆ. ಪ್ರತಿ ೭.೩೩ ಲಕ್ಷ ಜನಸಂಖ್ಯೆಗೆ ಒಬ್ಬ ಸಂಸದರಿರುವ ಕಾರಣ ಅಲ್ಲಿ ಅಭಿವೃದ್ಧಿ ವೇಗದಲ್ಲಿದೆ.
4. ಇಂಗ್ಲೆಂಡ್: ಇಂಗ್ಲೆಂಡಿನಲ್ಲಿ ಒಟ್ಟು ೬೫೦ ಸಂಸದರು ಸಂಸತ್ತನ್ನು ಪ್ರವೇಶಿಸುತ್ತಾರೆ. ಒಂದು ಲಕ್ಷ ಜನಸಂಖ್ಯೆಗೂ ಕಡಿಮೆ ಒಬ್ಬ ಸಂಸದ ಬರುತ್ತಾರೆ.
ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಸಂಸದರ ಸಂಖ್ಯೆ ಮಾತ್ರ ವ್ಯತ್ಯಾಸದಿಂದ ಕೂಡಿದೆ. ಉತ್ತರ ಭಾರತದ ರಾಜ್ಯಗಳಲ್ಲಿ 10 ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆ ಇರುವ ಕ್ಷೇತ್ರಗಳಲ್ಲೂ ಒಬ್ಬ ಸಂಸದನಿzನೆ. ಹೀಗಾಗಿ, ಆಡಳಿತ ನಡೆಸುವುದು ತುಂಬಾ ಕಷ್ಟಕರವಾಗಿದೆ. ಆದ್ದರಿಂದ ಸರ್ಕಾರವು ೨೦೨೬ರಲ್ಲಿ ಕ್ಷೇತ್ರ ಮರು ವಿಂಗಡನೆ ಮಾಡಲು ಯೋಜನೆ ರೂಪಿಸಿಕೊಂಡಿದೆ. ಆದರೆ, ದಕ್ಷಿಣಭಾರತದ ರಾಜ್ಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ. ಈ ಕ್ಷೇತ್ರ ಮರುವಿಂಗಡಣೆ ಯಾವ ರೀತಿ ಮಾಡುತ್ತಾರೆ ಎನ್ನುವುದು ಮುಂಬರುವ ವರ್ಷಗಳಲ್ಲಿ ತಿಳಿದು ಬರುತ್ತದೆ.
– ಶಿವಕುಮಾರ್ ಕೆ., ಲೇಖಕ