Menu
12

ಅಕ್ಸರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಪ್ಟನ್ ಆಗಿ ನೇಮಕ!

axar patel

ಸ್ಪಿನ್ ಆಲ್ ರೌಂಡರ್ ಅಕ್ಸರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ.

2019ರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡುತ್ತಿರುವ ಅಕ್ಷರ್, 2024 ರ ಮೆಗಾ ಹರಾಜಿಗೆ ಮುನ್ನ 16.50 ಕೋಟಿ ರೂ.ಗೆ ತಂಡದ ಗರಿಷ್ಠ ಮೊತ್ತಕ್ಕೆ ತಂಡದಲ್ಲಿ ಉಳಿದುಕೊಂಡಿದ್ದರು.

ಅಕ್ಸರ್ ಪಟೇಲ್ ನೇಮಕದೊಂದಿಗೆ ಎಲ್ಲ ೧೦ ಐಪಿಎಲ್ ತಂಡಗಳ ನಾಯಕರ ಘೋಷಣೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ರಿಷಭ್ ಪಂತ್ ತಂಡದಿಂದ ಹೊರಬಿದ್ದ ನಂತರ ಡೆಲ್ಲಿ ತಂಡದ ನಾಯಕನ ಜವಾಬ್ದಾರಿ ಅಕ್ಸರ್ ಗೆ ಒಲಿದಿದೆ.
ಹರಾಜಿನಲ್ಲಿ ತಂಡವನ್ನು ಮುನ್ನಡೆಸುವ ಉದ್ದೇಶದಿಂದಲೇ ಕೆಎಲ್ ರಾಹುಲ್ ಅವರನ್ನು ದೊಡ್ಡ ಮೊತ್ತದ ಬಿಡ್ ಮಾಡಿ ಖರೀದಿಸಲಾಗಿತ್ತು. ನಾಯಕ ಸ್ಥಾನಕ್ಕೆ ರಾಹುಲ್ ಮತ್ತು ಅಕ್ಸರ್ ಎರಡು ಹೆಸರು ಚಾಲ್ತಿಯಲ್ಲಿತ್ತು. ಆದರೆ ಅಂತಿಮವಾಗಿ ಅಕ್ಸರ್ ಗೆ ನಾಯಕ ಪಟ್ಟ ಒಲಿದಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಜವಾಬ್ದಾರಿ ವಹಿಸಿಕೊಳ್ಳಲು ಕೆಎಲ್ ರಾಹುಲ್ ನಿರಾಕರಿಸಿದ ಹಿನ್ನೆಲೆಯಲ್ಲಿ ಅಕ್ಸರ್ ಪಟೇಲ್ ಗೆ ಹೊಸ ಜವಾಬ್ದಾರಿ ಒಲಿದು ಬಂದಿದೆ. ಇತ್ತೀಚೆಗೆ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಕ್ಸರ್ ಉತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದ ನಂತರ ಬ್ಯಾಟಿಂಗ್ ಆಧಾರಸ್ತಂಭವಾಗಿಯೂ ಮಿಂಚುತ್ತಿದ್ದಾರೆ.

ನಾಯಕತ್ವದ ಅನುಭವವಿಲ್ಲದಿದ್ದರೂ, 2025ರ ಜನವರಿಯಲ್ಲಿ ಅವರು ಭಾರತದ T20 ಉಪನಾಯಕರಾಗಿದ್ದರು. ಸೈಯದ್ ಮುಷ್ತಾಕ್ ಅಲಿ ಮತ್ತು ವಿಜಯ್ ಹಜಾರೆ ಟ್ರೋಫಿಗಳು ಸೇರಿದಂತೆ 23 ಪಂದ್ಯಗಳಲ್ಲಿ ಗುಜರಾತ್ ಅನ್ನು ಮುನ್ನಡೆಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುವುದು ನನಗೆ ಅತ್ಯಂತ ಗೌರವದ ಸಂಗತಿ. ನಾನು ಒಬ್ಬ ಕ್ರಿಕೆಟಿಗನಾಗಿ ಬೆಳೆದಿದ್ದೇನೆ. ಈ ತಂಡವನ್ನು ಮುನ್ನಡೆಸಲು ನಾನು ಸಿದ್ಧ. ಆತ್ಮವಿಶ್ವಾಸವನ್ನು ಹೊಂದಿದ್ದೇನೆ ಎಂದು ನಾಯಕನಾಗಿ ನೇಮಕಗೊಂಡ ಅಕ್ಷರ್ ಹೇಳಿದ್ದಾರೆ.
ಭಾರತದ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ನಂತರ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ಐಪಿಎಲ್ 2025 ಕ್ಕೆ ಪ್ರವೇಶಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮಾರ್ಚ್ 24 ರಂದು ವಿಶಾಖಪಟ್ಟಣಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ. ಕಳೆದ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಂಕಪಟ್ಟಿಯಲ್ಲಿ ಆರನೇ ಸ್ಥಾನದೊಂದಿಗೆ 14 ಅಂಕಗಳನ್ನು ಗಳಿಸಿತ್ತು. ತನ್ನ ತಂಡವನ್ನು ಬಲಪಡಿಸುವ ಉದ್ದೇಶದಿಂದ, ಫ್ರಾಂಚೈಸಿ ಹರಾಜಿನಲ್ಲಿ ಕೆಎಲ್ ರಾಹುಲ್ ಅವರನ್ನು 14 ಕೋಟಿ ರೂ.ಗೆ ಮತ್ತು ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು 11.75 ಕೋಟಿ ರೂ.ಗೆ ಖರೀದಿಸಿದೆ.

Related Posts

Leave a Reply

Your email address will not be published. Required fields are marked *