Menu
12

ಪಕ್ಕದ ಮನೆಯ ಸ್ನೇಹಿತೆಯನ್ನೇ ಕೊಲೆಗೈದು ಚಿನ್ನ ಎಗರಿಸಿದ ಮಹಿಳೆ

ಮೈಸೂರಿನ ಕೆಸಿ.ಬಡಾವಣೆಯಲ್ಲಿ ಚಿನ್ನದ ಸರಕ್ಕಾಗಿ ತನ್ನ ಸ್ನೇಹಿತೆಯನ್ನೇ ಮಹಿಳೆ ಕೊಂದ ಘಟನೆ ಮಾ.5 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕೆಸಿ ಬಡಾವಣೆಯ ಸುಲೋಚನಾ (62) ಕೊಲೆಯಾದವರು. ಅದೇ ಬಡವಾಣೆಯ ಶಕುಂತಲಾ (42) ಕೊಲೆ ಆರೋಪಿ. ಕೊಲೆಯಾದ ಸುಲೋಚನಾ ಪೊಲೀಸ್ ಇಲಾಖೆ ನಿವೃತ್ತ ನೌಕರ ಗಂಗಣ್ಣ ಎಂಬವರ ಪತ್ನಿ.

ಮಾ.5 ರಂದು ಮನೆಗೆ ಬಂದಿದ್ದ ಶಕುಂತಲಾ ಸುಲೋಚನಾರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಚಿನ್ನದ ಸರ ತೆಗೆದುಕೊಂಡಿದ್ದು, ನಂತರ ಪ್ರಜ್ಞೆ ತಪ್ಪಿ ಬಿದ್ದು ಹೋದರೆಂದು ಸುತ್ತಲ ಮನೆಯವರನ್ನು ನಂಬಿಸಿದ್ದಳು. ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಶಕುಂತಲಾ ಸತ್ಯ ಬಾಯ್ಬಿಟ್ಟಿದ್ದಾಳೆ.

ಶಕುಂತಲಾ ಕುಟುಂಬ ಅಡುಗೆ ಕೆಲಸ ಮಾಡಿಕೊಂಡಿತ್ತು. ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲು ಈ ಕೃತ್ಯ ಎಸಗಿದ್ದಾಳೆ. ಸುಲೋಚನಾರನ್ನು ಸಾಯಿಸಿ ಎಗರಿಸಿದ್ದ ಸರವನ್ನು 1.5 ಲಕ್ಷಕ್ಕೆ ಶಕುಂತಲಾ ಗಿರವಿ ಇಟ್ಟಿದ್ದಳು. ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *