ಬೆಂಗಳೂರಿನಲ್ಲಿ ಇಂದು ಆಟೋ ದರ ಪರಿಷ್ಕರಣೆಯ ಬಗ್ಗೆ ಸಭೆ ನಡೆಯುತ್ತಿದ್ದು, ದರ ಪರಿಷ್ಕರಣೆ ಬಹುತೇಕ ಫೈನಲ್ ಆಗುವ ಸಾಧ್ಯತೆ ಇದೆ. ಸಾರಿಗೆ ಇಲಾಖೆ ಯು ಆಟೋ ಚಾಲಕ ಸಂಘಟನೆಯ ಈ ಸಭೆ ಕರೆದಿದೆ. ಇನ್ ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಸಭೆ ನಡೆಯುತ್ತಿದೆ.
ಈಗ 2 ಕಿಮೀಗೆ ಮಿನಿಮಮ್ ದರ 30 ರೂ. ಇದ್ದು, 40 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ. ಸಾರಿಗೆ ಇಲಾಖೆ ಅಧಿಕಾರಿಗಳು ಆಟೊ ಚಾಲಕ ಸಂಘಟನೆ ಮುಖ್ಯಸ್ಥರ ಅಭಿಪ್ರಾಯ ಪಡೆದು ದರ ಏರಿಕೆ ನಿರ್ಧಾರ ಕೈಗೊಳ್ಳಲಿದ್ದಾರೆ. ಸಭೆಯಲ್ಲಿ ದರ ಏರಿಕೆಯ ಪ್ರಸ್ತಾಪವನ್ನು ಸಿದ್ಧಮಾಡಿ ಜಿಲ್ಲಾಧಿಕಾರಿಗೆ ಕಳುಹಿಸಿದ ಒಂದು ವಾರದಲ್ಲಿ ಬಹುತೇಕ ಪರಿಷ್ಕೃತ ದರ ಪ್ರಕಟವಾಗಲಿದೆ. 2021 ರಲ್ಲಿ ದರ ಪರಿಷ್ಕರಣೆ ಆಗಿತ್ತು.
ಇಂದಿನ ಸಭೆಯಲ್ಲಿ ದರ ಏರಿಕೆ ಸಂಬಂಧ ವಿರೋಧ ವ್ಯಕ್ತವಾಗುವ ಸಾಧ್ಯತೆಯೂ ಇದೆ. ಸಂಘಟನೆಗಳ ಅಭಿಪ್ರಾಯದ ಆಧಾರದ ಮೇಲೆ ಅಂತಿಮವಾಗಿ ಸಾರಿಗೆ ಇಲಾಖೆ ನಿರ್ಧರಿಸಬಹುದು.