Menu

ಕರ್ನಾಟಕ ಬಜೆಟ್: ಅಲ್ಪಸಂಖ್ಯಾತ ಸಮುದಾಯಕ್ಕೆ ಭರಪೂರ ಯೋಜನೆ ಘೋಷಣೆ

siddaramiah

ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪ ಸಂಖ್ಯಾತ ಸಮುದಾಯಗಳಿಗೆ ಭರಪೂರ ಯೋಜನೆಗಳನ್ನು ಘೋಷಿಸಿದ್ದು, ಬಿಜೆಪಿಯ ತೀವ್ರ ವಿರೋಧದ ನಡುವೆಯೂ ಗುತ್ತಿಗೆಯಲ್ಲಿ ಶೇ.20ರಷ್ಟು ಮೀಸಲಾತಿ ಘೋಷಣೆ ಮಾಡಿದ್ದಾರೆ.

ಬುಧವಾರ ಮಂಡಿಸಿದ ದಾಖಲೆಯ ೧೬ನೇ ಬಜೆಟ್ ನಲ್ಲಿ ಬಿಜೆಪಿ ಸದಸ್ಯರ ವಿರೋಧದ ನಡುವೆಯೂ ಮುಸ್ಲಿಮರಿಗೆ ಶೇ.20ರಷ್ಟು ಮೀಸಲಾತಿ ಘೋಷಿಸಿದರು.

ಪ್ರವರ್ಗ 2ಎ, 2ಬಿ ವರ್ಗದವರಿಗೆ ಶೇ.4ರಷ್ಟು ಮೀಸಲಾತಿ ಘೋಷಣೆ ಮಾಡಲಾಗಿದ್ದು, ಸರ್ಕಾರ ಹಾಗೂ ನಿಗಮಗಳಲ್ಲಿ ಗುತ್ತಿಗೆ ಪಡೆಯಬಹುದು ಎಂದು ಸಿದ್ದರಾಮಯ್ಯ ಘೋಷಿಸಿದರು.

ಇದೇ ವೇಳೆ ವಕ್ಫ್ ಆಸ್ತಿಗಳ ದುರಸ್ತಿ ಮತ್ತು ನವೀಕರಣ, ಮುಸ್ಲಿಂ ಸ್ಮಶಾನಗಳ ರಕ್ಷಣೆಗಾಗಿ ಮೂಲಸೌಕರ್ಯ ಒದಗಿಸಲು 150 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ  (Siddaramaiah) ಬಜೆಟ್​​ನಲ್ಲಿ (Karnataka Budget 2025) ಘೋಷಣೆ ಮಾಡಿದರು.

100 ಉರ್ದು ಶಾಲೆಗಳ ಅಭಿವೃದ್ಧಿಗೆ 100 ಕೋಟಿ ರೂ. ನೀಡಲಾಗುವುದು, 25000 ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಆತ್ಮರಕ್ಷಣೆ ಕಲೆ ತರಬೇತಿ ನೀಡಲಾಗುವುದು, ಅಲ್ಪ ಸಂಖ್ಯಾತರ ಶೈಕ್ಷಣಿಕ ಅಭಿವೃದ್ಧಿಗೆ ಕೆಎಸ್ ಒಯು ಕೇಂದ್ರ ಸ್ಥಾಪಿಸಲಾಗುವುದು. ಬೆಂಗಳೂರಿನಲ್ಲಿ ಹಜ್ ಯಾತ್ರಿಕರಿಗಾಗಿ ಹೆಚ್ಚುವರಿ ಕಟ್ಟಡ ಸ್ಥಾಪಿಸಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದರು.

Related Posts

Leave a Reply

Your email address will not be published. Required fields are marked *