Menu

ಮಾತಾ ಮಾಣಿಕೇಶ್ವರಿ ದೇವಸ್ಥಾನ ಪ್ರವಾಸಿ ತಾಣವಾಗಿ ಅಭಿವೃದ್ಧಿ: ಸಚಿವ ಎಚ್.ಕೆ.ಪಾಟೀಲ್

hk patil

ಬೆಂಗಳೂರು: ಗುರಮಿಟಕಲ್ಲಿನ ಯಾಣಗುಂದಿಯಲ್ಲಿರುವ ಮಾತಾ ಮಾಣಿಕೇಶ್ವರಿ ದೇವಸ್ಥಾನವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಸರ್ಕಾರದಿಂದ ಅಗತ್ಯ ಕ್ರಮ ವಹಿಸಲಾಗುವುದು ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವ ಎಚ್. ಕೆ. ಪಾಟೀಲ್ ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು ಇದು ಗುಡಿ ಅಲ್ಲ, ಮಠ ಅಲ್ಲ, ದೇವಸ್ಥಾನವಲ್ಲ ಇದೊಂದು ಸುಂದರವಾದ ಸ್ಥಳ. ಓರ್ವ ಯೋಗಿನಿ ಅನ್ನ ನೀರು ಇಲ್ಲದೆ ಸುಮಾರು 40 ವರ್ಷಗಳ ಕಾಲ ಬದುಕಿದ್ದಾರೆ. ಅವರೇ ಮಾತಾ ಮಾಣೀಕೇಶ್ವರಿ.

ಒಂದೇ ದಿನ ಯಾಣಗುಂದಿಯಲ್ಲೇ ಇದ್ದು, ಶೀಶೈಲ ಯಾಣಗುಂದಿಯಲ್ಲಿ ಇವರ ದರ್ಶನ ನೀಡುತ್ತಿದ್ದ ಮಾತೆ. ಶಕ್ತಿ ಸ್ವರೂಪಿಣಿ. ಇವರು ದೈವಾಧೀನರಾಗಿ ಎರಡು ಮೂರು ವರ್ಷಗಳಾಗಿವೆ. ಇಂತಹ ಮಹತ್ವದ ದೇವಸ್ಥಾನ ಇನ್ನೂ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಆಗಿಲ್ಲ. ಇದಕ್ಕೆ ವಿಶೇಷ ಒತ್ತು ನೀಡಿ ಮುಂದಿನ ದಿನಗಳಲ್ಲಿ ಈ ಸ್ಥಳವನ್ನು ಪ್ರವಾಸಿ ತಾಣವಾಗಿ ರೂಪಿಸಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಅಲ್ಲದೆ ಸರ್ಕಾರದಿಂದ ಸೂಕ್ತ ಹಣಕಾಸಿನ ನೆರವನ್ನು ಸಹ ಒದಗಿಸಲಾಗುವುದು ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *