ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಮೇಲೆ ಖಲಿಸ್ತಾನಿ ಉಗ್ರರು ಲಂಡನ್‌ನಲ್ಲಿ ದಾಳಿಗೆ ಯತ್ನಿಸಿರುವ ಘಟನೆ ನಡೆದಿದೆ. ಚಾಥಮ್ ಹೌಸ್ ಚಿಂತಕರ ಚಾವಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಕಾರಿನಿಂದ ಇಳಿಯುತ್ತಿದ್ದ ಜೈಶಂಕರ್ ಅವರ ಮೇಲೆ ಹಲ್ಲೆಗೆ ಯತ್ನ ನಡೆದಿದೆ.
ಚಾಥಮ್ ಹೌಸ್ ನಲ್ಲಿ ನಡೆಸಿದ ಚರ್ಚೆಯಲ್ಲಿ ಜೈಶಂಕರ್ ಭಾಗವಹಿಸಿದ್ದಾಗ ಹೊರಗೆ ಖಲಿಸ್ತಾನ್ ಪರ ಬೆಂಬಲಿಗರು ಧ್ವಜಗಳನ್ನು ಪ್ರತಿಭಟನೆ ನಡೆಸಿದರು.
ಲಂಡನ್ ಪೊಲೀಸ್ ಅಧಿಕಾರಿಗಳ ಮುಂದೆಯೇ ವ್ಯಕ್ತಿಯೊಬ್ಬ ಜೈಶಂಕರ್ ಅವರ ವಾಹನದ ಕಡೆಗೆ ನುಗ್ಗಿ ಭಾರತದ ರಾಷ್ಟ್ರಧ್ವಜವನ್ನು ಹರಿದು ಹಾಕುತ್ತಿರುವುದು ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿರುವ ವೀಡಿಯೊದಲ್ಲಿ ಕಂಡುಬಂದಿದೆ.
ಪ್ರತಿಭಟನಾನಿರತ ಖಲಿಸ್ತಾನಿಗಳನ್ನು ಪೊಲೀಸರು ವಶಕ್ಕೆ ಪಡೆದರು. ಆಸ್ಟ್ರೇಲಿಯಾ, ಕೆನಡಾ ಮತ್ತು ಬ್ರಿಟನ್ ದೇಶಗಳು ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಲವು ವರ್ಷಗಳಿಂದ ಭಾರತ ಆಗ್ರಹಿಸುತ್ತ ಬಂದಿದೆ.