Wednesday, October 15, 2025
Menu

ಬೆಂಗಳೂರಿನಲ್ಲಿ ಲಿವಿಂಗ್ ಟುಗೆದರ್‌ನಲ್ಲಿದ್ದ ಯುವಕ ಮಹಡಿಯಿಂದ ಜಿಗಿದು ಆತ್ಮಹತ್ಯೆ

ಬೆಂಗಳೂರಿನ ಹರಳೂರು ಕೂಡ್ಲು ರಸ್ತೆಯ ಎಸ್ಎನ್ಎನ್ ರಾಜ್ ಎಟರ್ನಿಯ ಅಪಾರ್ಟ್ಮೆಂಟ್‌ನಲ್ಲಿ ಯುವತಿಯೊಬ್ಬಳ ಜೊತೆ ಲಿವಿಂಗ್ ಟುಗೆದರ್‌ನಲ್ಲಿದ್ದ ಯುವಕನೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತಪಟ್ಟ ಯುವಕನನ್ನು ಉತ್ತರ ಪ್ರದೇಶ ಮೂಲದ ಮಾಯಾಂಕ್ ರಜನಿ ಎಂದು ಗುರುತಿಸಲಾಗಿದೆ.

ಎರಡು ದಿನದ ಹಿಂದೆ ನಸುಕಿನಲ್ಲಿ ಮಯಾಂಕ್ ರಜನಿ ಅಪಾರ್ಟ್ಮೆಂಟ್​ನ 12ನೇ ಮಹಡಿಯಿಂದ ಕೆಳಗೆ ಹಾರಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ಸೆಕ್ಯೂರಿಟಿ ಗಾರ್ಡ್​ಗೆ ಯುವಕನ ಮೃತದೇಹ ಕಾಣಿಸಿದೆ. ಆತ 12ನೇ ಮಹಡಿಯಲ್ಲಿರುವ ಯುವಕನ ಕೊಠಡಿಗೆ ತೆರಳಿ ಅಲ್ಲಿದ್ದ ಯುವತಿಗೆ ವಿಚಾರ ತಿಳಿಸಿದ್ದಾನೆ.

ಉತ್ತರ ಪ್ರದೇಶದ ಮಯಾಂಕ್ 4 ವರ್ಷಗಳಿಂದ ಬೆಂಗಳೂರಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ಎರಡು ವರ್ಷಗಳಿಂದ ಯುವತಿ ಜೊತೆ ಲಿವ್ ಇನ್ ರಿಲೇಷನ್​ಶಿಪ್​​ನಲ್ಲಿದ್ದ .ಮೃತ ಯುವಕ ಕೆಲವು ಸಮಯದಿಂದ ಬೆಂಗಳೂರಿನಲ್ಲಿ ಸ್ಟಾರ್ಟ್​ ಅಪ್ ನಡೆಸುತ್ತಿದ್ದು ನಷ್ಟವಾದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *