ಬೆಂಗಳೂರಿನಲ್ಲಿ ಸರಣಿ ಕಳ್ಳತನ ಮಾಡುತ್ತಿದ್ದ ಇಬ್ಬರು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದ್ದ ಮಹಾ ಕುಂಭಮೇಳಕ್ಕೆ ಹೋಗಿ ಬಂದ ಬಳಿಕ ಕೆ.ಪಿ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಕಳ್ಳರಲ್ಲಿ ಒಬ್ಬ ಅಪ್ರಾಪ್ತ ವಯಸ್ಕನಾಗಿದ್ದಾನೆ. ಆರೋಪಿಗಳು ಫೆಬ್ರವರಿ 6ರಂದು ರಾತ್ರಿ ಅಂಗಡಿಗಳ ಶೆಟರ್ ಮುರಿದು ಸರಣಿ ಕಳ್ಳತನ ಮಾಡಿದ್ದರು. ಬೇಕರಿ, ಮೆಡಿಕಲ್, ನಂದಿನಿ ಪಾರ್ಲರ್ ಸೇರಿದಂತೆ ಹಲವು ಕಡೆಗಳಲ್ಲಿ ಕಳವುಗೈದಿದ್ದರು. ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಗಳ ತನಿಖೆ ನಡೆಸಿದ್ದ ಪೊಲೀಸರಿಗೆ ಕಳವು ಮಾಡಿದ್ದ ನಾಲ್ವರಲ್ಲಿ ಇಬ್ಬರು ಪ್ರಯಾಗ್‌ರಾಜ್‌ಗೆ ಹೋಗಿರುವುದು ತಿಳಿದು ಬಂದಿತ್ತು. ವಾಪಸಾಗಿರುವ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.