ಇಡ್ಲಿ ಬೇಯಿಸುವಾಗ ಪ್ಲಾಸ್ಟಿಕ್ ಬಳಕೆಯಿಂದ ಕ್ಯಾನ್ಸರ್ ಮತ್ತು ಟ್ಯಾಟೊ ಹಾಕಿಸಿಕೊಳ್ಳುವುದರಿಂದ ಎಚ್ ಐವಿ, ಚರ್ಮರೋಗ ಮುಂತಾದ ಮಾರಕ ಕಾಯಿಲೆಗಳು ಬರುವ ಅಪಾಯವಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡ್ಲಿ ಬೇಯಿಸುವಾಗ ಪ್ಲಾಸ್ಟಿಕ್ ಹೊದಿಕೆ ಬಳಸುತ್ತಿದ್ದಾರೆ. ಪ್ಲಾಸ್ಟಿಕ್ ನಲ್ಲಿರುವ ರಾಸಾಯನಿಕಗಳು ದೇಹದಲ್ಲಿ ಸೇರುತ್ತವೆ. ಇದು ಸಾಯುವವರೆಗೂ ಮನುಷ್ಯರ ದೇಹದಲ್ಲಿ ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದರು.
ಟ್ಯಾಟೊ ಹಾಕಲು ಬಳಸುವ ಇಂಕ್ ಗಳಲ್ಲಿ ಮೆಟಲ್ ಅಂಶಗಳು ಪತ್ತೆಯಾಗಿವೆ. ಟ್ಯಾಟೊಗೆ ಬಳಸುವ ಇಂಕ್ ಗೆ ಬಳಸುವ ರಿಂಗರ್ ಲ್ಯಾಕ್ಟೇಟ್ ದ್ರಾವಣದಲ್ಲಿ 246 ಬ್ಯಾಚ್ ಮಾದರಿಗಳಿವೆ. ಈ ಪೈಕಿ 113 ಮಾದರಿಗಳು ಕಳಪೆ ಗುಣಮಟ್ಟ ಹೊಂದಿವೆ ಎಂದರು.
ಗುಂಡೂರಾವ್ ಕುಡಿಯುವ ನೀರಿನ ಬಾಟಲ್ ಬಗ್ಗೆಯೂ ವಿಶ್ಲೇಷಣೆ ಮಾಡಲಾಗಿದೆ. ಕುಡಿಯುವ ನೀರಿನ 288 ಬಾಟಲ್ಗಳನ್ನು ಲ್ಯಾಬ್ಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಲ್ಯಾಬ್ನಿಂದ ವರದಿ ಬರಬೇಕಿದೆ ಎಂದು ಅವರು ತಿಳಿಸಿದ್ದಾರೆ. ಇದರೊಂದಿಗೆ, ಕುಡಿಯುವ ನೀರು ಕೂಡ ಸುರಕ್ಷಿತವಲ್ಲವೇ ಎಂಬ ಅನುಮಾನ ಸೃಷ್ಟಿಯಾಗಿದೆ.
1133 ಔಷಧ ಮಾದರಿ ತಪಾಸಣೆಗೆ ಕಳುಹಿಸಲಾಗಿದ್ದು, ಇದರಲ್ಲಿ 938 ಉತ್ತಮ ಗುಣಮಟ್ಟ ಹೊಂದಿದ್ದು, 113 ಮಾದರಿ ಔಷಧಗಳು ಕಳಪೆ ಗುಣಮಟ್ಟದ್ದಾಗಿವೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಫಾರ್ಮಾಸ್ಯುಟಿಕಲ್ ಕಂಪನಿ ವಿರುದ್ಧ 9 ಪ್ರಕರಣ ದಾಖಲಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.