ಬೆಂಗಳೂರು: ರಾಜ್ಯದ ವಿವಿಧ ಯೋಜನೆಗಳಲ್ಲಿ ವಿವಿಧ ಅನುಷ್ಠಾನ ಇಲಾಖೆ, ಸಂಸ್ಥೆಗಳಿಂದ 1472 ಕೃಷಿ ಉತ್ಪಾದಕ ಸಂಸ್ಥೆಗಳನ್ನು ರಚಿಸಲಾಗಿದ್ದು, ಒಟ್ಟು 8.26 ಲಕ್ಷ ರೈತ ಷೇರುದಾರರನ್ನು ಸಂಘಟಿಸಲಾಗಿದೆ. ಆ ಮೂಲಕ ಒಟ್ಟಾರೆ 1073 ಕೋಟಿ ರೂ. ವಹಿವಾಟು ನಡೆಸಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರು ತೋಟಗಾರಿಕಾ ಮಹಾವಿದ್ಯಾಲಯದ ಆವರಣದಲ್ಲಿ ಜಲಾನಯನ ಇಲಾಖೆ ಸಹಯೋಗದೊಂದಿಗೆ ಶುಕ್ರವಾರ ನಡೆದ ಕೃಷಿ ಉತ್ಪಾದಕ ಸಂಸ್ಥೆಗಳ ಮೇಳ ಉದ್ಘಾಟಿಸಿ ಸಚಿವರು ಮಾತನಾಡಿದರು.
ಸರ್ಕಾರವು ಪ್ರತಿ ರೈತ ಉತ್ಪಾಕದಕರ ಸಂಸ್ಥೆಗಳ ನಿರ್ವಹಣಾ ವೆಚ್ಚಕ್ಕಾಗಿ ಮೂರು ವರ್ಷಗಳಿಗೆ ಗರಿಷ್ಠ ರೂ.18 ಲಕ್ಷಗಳನ್ನು ನೀಡಲಾಗುತ್ತಿದೆ. ಸಂಸ್ಥೆಗಳ ರಚನೆ ಮತ್ತು ಉತ್ತೇಜನಕ್ಕಾಗಿ ಸಮುದಾಯ ಆಧಾರಿತ ವ್ಯವಹಾರ ಸಂಸ್ಥೆಗಳಿಗೆ ಐದು ವರ್ಷಗಳ ಅವಧಿಗೆ ಗರಿಷ್ಠ ರೂ. 25 ಲಕ್ಷಗಳನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಪ್ರತಿ ಷೇರುದಾರರಿಗೆ/ರೈತ ಸದಸ್ಯರಿಗೆ ಗರಿಷ್ಠ ರೂ.2000 ಮೀರದಂತೆ ಪ್ರತಿ ರೈತ ಉತ್ಪಾದಕರ ಸಂಸ್ಥೆಗೆ ಗರಿಷ್ಠ ರೂ.15 ಲಕ್ಷ ಇಕ್ವಿಟಿ ಅನುದಾನವನ್ನು ವ್ಯವಹಾರ ಬಂಡವಾಳವಾಗಿ ನೀಡಲಾಗುತ್ತಿದೆ ಎಂದು ಕೃಷಿ ಸಚಿವರ ಹೇಳಿದರು.
ಕೃಷಿ ಹಾಗೂ ಕೃಷಿಕರು ಅಭ್ಯುಧ್ಯುಯದ ಹಾದಿಯಲ್ಲಿ ಸಾಗುವ ಸುದಿನಗಳು ಪ್ರಾರಂಭವಾಗಿವೆ. ಕೃಷಿಕ ಎಲ್ಲಾ ರೀತಿಯಲ್ಲೂ ಸಬಲನಾಗಬೇಕು ಎಂಬುದು ಸರ್ಕಾರದ ಆಶಯ. ಅದಕ್ಕಾಗಿ ಕೃಷಿ ಉತ್ಪಾದಕ ಸಂಸ್ಥೆಗಳನ್ನು ರಚಿಸಿ ಸಂಘಟಿಸಿ ಉತ್ಪಾದಕರ ಸರಪಳಿಯನ್ನು ಸದೃಡಗೊಳಿಸಲಾಗುತ್ತಿದೆ ಎಂದರು.
ಸಂಪೂರ್ಣ ಸಹಕಾರಿ ತತ್ವದಡಿಯಲ್ಲಿ ಕೃಷಿ ಉತ್ಪಾದಿತಕರ ಸಂಘಗಳು ಕಾರ್ಯ ನಿರ್ವಹಿಸುತ್ತಿದೆ. ರೈತರನ್ನು ಆರ್ಥಿಕ ಹಾಗೂ ಸಾಮಾಜಿಕವಾಗಿ ಸಮರ್ಥರನ್ನಾಗಿಸಲು ರೈತರಿಂದ ರೈತರಿಗಾಗಿ ರೈತರಿಗೋಸ್ಕರ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಅವರು ಹೇಳಿದರು.
FPO ಗಳ ಸ್ಥಾಪನೆಯಿಂದ ಮಧ್ಯವರ್ತಿಗಳ ಹಾವಳಿ ತಡೆಯಲು ಸಾಧ್ಯ. FPO ಗಳ ಸ್ಥಾಪನೆಯಿಂದ ಸ್ಥಳೀಯ ರೈತ ಸಮೂದಾಯದ ಸಾಮರ್ಥ್ಯ, ಅಭಿವೃದ್ಧಿ ಮತ್ತು ವ್ಯವಹಾರಿಕ ಪಾಲುದಾರಿಕೆ ಸಾಧ್ಯ ಎಂದು ಚಲುವರಾಯಸ್ವಾಮಿ ತಿಳಿಸಿದರು.
ಮಾರುಕಟ್ಟಿಯಲ್ಲಿನ ಬೇಡಿಕೆ, ಪೂರೈಕೆ, ಮಾಹಿತಿ ವಿನಿಮಯ ಇದರ ಜೊತೆಗೆ ಮೌಲ್ಯ ಸರಪಳಿ ಹೆಚ್ಚಿಸಲು ನೆರವಾಗುತ್ತಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಅನುದಾನ ನೀಡಿದೇ, 486 ಅಮೃತ ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸಲಾಗಿತ್ತು. ನಮ್ಮ ಸರ್ಕಾರ ಈ ಈPಔ ಗಳಿಗೆ 2024-25ನೇ ಸಾಲಿನಲ್ಲಿ ರಾಜ್ಯ ಸರ್ಕಾರ 21 ಕೋಟಿ ರೂಪಾಯಿ ಸಹಾಯಧನ ನೀಡಿದೆ ಎಂದು ಅವರು ತಿಳಿಸಿದರು.
ಭಾರತ ಸರ್ಕಾರದ 10 ಸಾವಿರ ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆ ಮತ್ತು ಪ್ರೋತ್ಸಾಹ ಯೋಜನೆಯಡಿ ರಾಜ್ಯದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯ 100 FPO ಗಳು ಸೇರಿದಂತೆ 351 FPo ಗಳನ್ನ ರಚಿಸಲಾಗಿದೆ.
ಇವು ಕೃಷಿ ಪರಿಕರ ವ್ಯವಹಾರಗಳ (Input business) ಜೊತೆಗೆ ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆಗೊಳಿಸಿ ಮಾರಾಟ ಮಾಡುತ್ತಿರುವುದು (out put business ) ನಡೆಸುತ್ತಿರುವುದು ಸ್ವಾಗತಾರ್ಹ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ 10 ಸಾವಿರ ಈPಔ ಗಳ ಸ್ಥಾಪನೆ ಯೋಜನೆಯಡಿ ರಚಿಸಲಾದ ರೈತ ಉತ್ಪಾದಕ ಸಂಸ್ಥೆಗಳನ್ನು ಸುಸ್ಥಿರ ಮತ್ತು ದೀರ್ಘಾವಧಿಯಲ್ಲಿ ಕಾರ್ಯ ಸಾಧಿಸುವಂತೆ ಮಾಡಲು ಭಾರತ ಸರ್ಕಾರದ SFAC ಸಂಸ್ಥೆಯ ಜಲಾನಯನ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ರಾಜ್ಯದಲ್ಲಿ FPO ಮೇಳ ಆಯೋಜಿಸಿರುವುದು ಒಳ್ಳೆಯ ಕಾರ್ಯವಾಗಿದೆ ಎಂದು ಅವರು ಶ್ಲಾಘಿಸಿದರು.
ಎಫ್.ಪಿ.ಒ ಗಳಿಗೆ ಸಹಾಯಧನ ಬಿಡುಗಡೆ:- ಕರ‍್ಯಕ್ರಮದಲ್ಲಿ ಕೃಷಿ ಸಚಿವರು ಕೃಷಿ ಉತ್ಪಾದಕರ ಸಂಸ್ಥೆಗಳಿಗೆ ರ‍್ಕಾರದ ನೆರವನ್ನು ಹಸ್ತಾಂತರಿಸಿದರು.
ಕರ‍್ಯಕ್ರಮದಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ವಿಷ್ಣುವರ್ಧನ್, ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಮಹೇಶ್ ಶಿರೂರು, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕರಾದ ಬಂಥನಾಳ್, ಕೃಷಿ ಇಲಾಖೆ ನಿರ್ದೇಶಕರಾದ ಡಾ.ಜಿ.ಟಿ.ಪುತ್ರ, ವಿಸ್ತಾರಣಾ ನಿರ್ದೇಶಕರಾದ ಡಾ.ಶಿವಲಿಂಗಯ್ಯ, ತೋಟಗಾರಿಕೆ ಕಾಲೇಜು ಡೀನ್ ಜಿ.ಎಸ್ ಸ್ವಾಮಿ, ಸಹಾಯಕ ಸಂಶೋಧನಾಕಾರಿ ಜಗದೀಶ್, ಎಸ್.ಎಫ್.ಎ.ಸಿ ಪ್ರತಿನಿಧಿ ಉತ್ತಮ್ ಕುಮಾರ್, ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು
ಆಕರ್ಷಕ ಮೆರವಣಿಗೆ:- ಕಾರ್ಯಕ್ರಮಕ್ಕೂ ಮುನ್ನ ಕೃಷಿ ಸಚಿವರನ್ನು ಎತ್ತಿನ ಬಂಡಿ ಮೇಲೆ ಕರತರಲಾಯಿತು. ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು.
ಮಾರಾಟ ಮಳಿಗೆ ಉದ್ಘಾಟನೆ:- ಇದೇ ವೇಳೆ ಕೃಷಿ ಸಚಿವರು ವಿವಿಧ ಎಫ್.ಪಿ.ಒ ಗಳ ಮೌಲ್ಯರ‍್ಧಿತ ಕೃಷಿ ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ಉದ್ಘಾಟಿಸಿದರು.