Thursday, February 27, 2025
Menu

ಪರಿಶಿಷ್ಟ ಜಾತಿ, ಪಂಗಡದ ಹಣ ಬಜೆಟ್ ನಲ್ಲಿ‌ಮೀಸಲಿಡಿ: ಶ್ರೀರಾಮುಲು

sriramulu

ಮೈಸೂರು: ಬಜೆಟ್ ನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಶೇ24.10ರಷ್ಟು ಹಣ ಮೀಸಲಾಗಿರಿ ಇರಿಸಿ ಎಂದು ಮಾಜಿ ಸಚಿವ ಶ್ರೀರಾಮುಲು ಆಗ್ರಹಿಸಿದರು.

ಮೈಸೂರು ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಗೆ ಎಸ್ ಇಪಿ, ಟಿಎಸ್ ಪಿ ಅನುದಾನ ಬಳಕೆ ಕಾನೂನು ಹಾಗೂ ಸಂವಿಧಾನಕ್ಕೂ ವಿರುದ್ಧವಾಗಿದೆ. ಸರ್ಕಾರದ ಗ್ಯಾರಂಟಿ ವಿರೋಧ ಮಾಡುತ್ತಿಲ್ಲ. ಗ್ಯಾರಂಟಿ ಯೋಜನೆಗಳ ಜತೆಗೆ ಹಿಂದುಳಿದ ಸಮುದಾಯಕ್ಕೂ ಕಾನೂನು ಪ್ರಕಾರ ನೀಡಬೇಕಾದ ಮೀಸಲು ಹಣ ನೀಡಿ ಎಂದು ಒತ್ತಾಯಿಸುತ್ತಿರುವುದಾಗಿ ಹೇಳಿದರು.

ಬಿಜೆಪಿ 20 ತಂಡ ಮಾಡಿಕೊಂಡು ಎರಡು ಅಥವಾ ಮೂರು ಜಿಲ್ಲೆಗೆ ಹೋಗಿ ಪರಿಶಿಷ್ಟ ಜಾತಿ, ಪಂಗಡಗಳ ಸಮುದಾಯವನ್ನು ಭೇಟಿ ಮಾಡಿ ಈ ಸರ್ಕಾರ ಎಸ್ ಇಪಿ, ಟಿಎಸ್ ಪಿ ಹಣವನ್ನು ದುರುಪಯೋಗ ಮಾಡಕೊಳ್ಳುತ್ತಿರುವ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಮಾಡಲಾಗುತ್ತಿದೆ. ಅದರಂತೆ ಸಿ.ಟಿ.ರವಿ, ಚಂದ್ರ ಲಂಬಾಣಿ, ಶಾಸಕ ಶ್ರೀವತ್ಸ, ಮಾಜಿ ಶಾಸಕ ನಾಗೇಂದ್ರ, ಮುನಿಸ್ವಾಮಿ, ರೇವಣ್ಣ, ಛಲವಾದಿ ಚಿದಾನಂದ ನಾವೆಲ್ಲರೂ ಸೇರಿ ಇಂದು ಮೈಸೂರು, ನಾಳೆ ಚಾಮರಾಜನಗರ ಜಿಲ್ಲೆಯಲ್ಲಿ ಅರಿವು ಮಾಡಿಕೊಡಲಾಗುವುದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ ಗೆ ಬಜೆಟ್ ಮಂಡಿಸಲಿದ್ದು, ಪರಿಶಿಷ್ಟ ಜಾತಿ, ಪಂಗಡದ ಮೂವತ್ತು ಇಲಾಖೆಯಿಂದ 24.10 ರಷ್ಟು ಹಣ ಮೀಸಲಿಟ್ಟ ಹಣವಾಗಿದೆ. 2013 ರಲ್ಲಿ ಬಿಜೆಪಿ ಕಾಯಿದೆ ಜಾರಿಗೆ ತಂದೆವೂ ಎಂದು ಕಾಂಗ್ರೆಸ್ ಬೆನ್ನು ತಟ್ಟಿಕೊಳ್ಳುತ್ತದೆ. ಆದರೆ, 2010-11 ರಲ್ಲಿ ಬಿಜೆಪಿ ಎಸ್ ಇಪಿ, ಟಿಎಸ್ ಪಿ ಹಣ ತಳ ಸಮುದಾಯದ ಜನಾಂಗಕ್ಕೆ ಸೇರಬೇಕೆಂದು ನಾವು ಮಾಡಿದ್ದು ನಾವು ಎಂದು ತಿಳಿಸಿದರು.

2013 ರಿಂದ ಪ್ರಾರಂಭವಾದ ಬಳಿಕ ಈವರೆಗೆ 2023ರವರೆಗೆ ಸುಗಮವಾಗಿ ನಡೆಯುತ್ತಿತ್ತು. ಕಾಂಗ್ರೆಸ್ ರಾಜಕೀಯಕ್ಕಾಗಿ ಬಡವರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೊಕ್ಕದ ಮೇಲೆ ಚೆಲ್ಲಾಟ ಆಡುತ್ತಿರುವುದು ನಮಗೆ ನೋವಿದೆ. ಕಾಂಗ್ರೆಸ್ ಸರ್ಕಾರದಿಂದ 54 ಸಾವಿರ ಕೋಟಿ ರೂ. ಹಣ ತಳ‌ ಸಮುದಾಯಕ್ಕೆ ಬಾಕಿ ಬರಬೇಕಿದೆ. ಆದರೆ, ಗ್ಯಾರಂಟಿ ಯೋಜನೆಗೆ ಅಷ್ಟು ಹಣ ಹಿಡಿದಿಟ್ಟು ಕೊಂಡಿದ್ದಾರೆ. ಅದರಲ್ಲೂ ಶೇ.24.10 ರಷ್ಟು ಲೆಕ್ಕ ಹಾಕಿದರೂ 34 ಸಾವಿರ ಕೋಟಿ‌ಹಣ ಬರಬೇಕಿದೆ.

ಬಾಬಾ ಸಾಹೇಬ್ ಅಂಬೇಡ್ಕರ್ ನಮಗೆ‌ ಸಂವಿಧಾನದ ಅಡಿ ಹಕ್ಕು ನೀಡಿದ್ದರು. ಆ ಬಗ್ಗೆ ರಾಜಕೀಯಕ್ಕಾಗಿ ಭಾಷಣ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸಮುದಾಯ ಮರೆತಂತಿದೆ. 2014 ರಲ್ಲಿ 11 ಸಾವಿರ ಕೋಟಿ‌ರೂ. ಹಣ ಬೇರೆ ವಿಚಾರಕ್ಕೆ ಬಳಕೆ‌ ಮಾಡಿಕೊಂಡಿದ್ದಾರೆ.‌ ನಾವು ಗ್ಯಾರಂಟಿ ವಿರುದ್ಧವಾಗಿಲ್ಲ. ಆದರೆ, 11 ಸಾವಿರ ಬಳಕೆ ಮಾಡಿಕೊಂಡಿದ್ದಿರಿ.‌ ತಳ ಸಮುದಾಯ ಎನಾಗಿದೆ ಎಂಬುದನ್ನು ಹೇಳಬೇಕಿದೆ.

14285 ಕೋಟಿ ಹಣ ಬಳಕೆ

ಎರಡು ವರ್ಷದಲ್ಲಿ 25 ಸಾವಿರ ಕೋಟಿ‌‌ ಬಳಕೆ‌ ಮಾಡಿಕೊಂಡಿದ್ದಿರಿ. ಮತ್ತೆ 14486 ಕೋಟಿ‌ ತೆಗೆದು ಇಡಲು ಸಿದ್ದತೆ ಮಾಡಿದ್ದಿರಿ. ಇದೆಲ್ಲವನ್ನೂ ಜನರಿಗೆ ತಿಳಿಸಿ, ಸರ್ಕಾರ ಹಿಂದುಳಿದ ವರ್ಗದ ವಿರುದ್ಧವಾಗಿದೆ ಎಂಬುದನ್ನು ಮನದಟ್ಟು ಮಾಡಿಸುವ ಜನಾಂದೋಲನ ನಡೆಸುತ್ತಿರುವುದಾಗಿ ಹೇಳಿದರು. ಶಾಸಕ ಶ್ರೀವತ್ಸ, ಮಾಜಿ ಶಾಸಕ ಎಲ್.ನಾಗೇಂದ್ರ, ವಕ್ತಾರ ಮಹೇಶ್ ರಾಜೇ ಅರಸ್ ಇನ್ನಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *