Thursday, February 27, 2025
Menu

ಚಾಂಪಿಯನ್ಸ್ ಟ್ರೋಫಿ: ಇಂಗ್ಲೆಂಡ್ ಎದುರು ಗೆದ್ದು ಬೀಗಿದ ಅಫ್ಘಾನಿಸ್ತಾನ

ಲಾಹೋರ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ತಂಡ 8 ರನ್ ಗಳಿಂದ ಪ್ರಬಲ ಇಂಗ್ಲೆಂಡ್ ತಂಡವನ್ನು ಸೋಲಿಸಿ ಇತಿಹಾಸ ಬರೆದಿದೆ.

ಆರಂಭಿಕ ಇಬ್ರಾಹಿಂ ಜರ್ದಾರ್ ದಾಖಲೆಯ ಶತಕ ಹಾಗೂ ಅಜಮತ್ತುಲ್ಲಾ ಓಮರಾಜಿ ಅವರ ಮಾರಕ ದಾಳಿ ನೆರವಿನಿಂದ ಆಫ್ಘಾನಿಸ್ತಾನ ತಂಡ 8 ರನ್ ಗಳಿಂದ ಪ್ರಬಲ ಇಂಗ್ಲೆಂಡ್ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಬೀಗಿದೆ.

ಲಾಹೋರ್ ನಲ್ಲಿ ನಡೆದ ಬಿ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ ತಂಡ 7 ವಿಕೆಟ್ ಕಳೆದುಕೊಂಡು 325 ರನ್ ಗಳಿಸಿತು.  ಕಠಿಣ ಗುರಿ ಬೆಂಬತ್ತಿದ ಇಂಗ್ಲೆಂಡ್ ತಂಡ 49.5 ಓವರ್ ಗಳಲ್ಲಿ 217 ರನ್ ಗೆ ಆಲೌಟಾಯಿತು.
ಈ ಗೆಲುವಿನೊಂದಿಗೆ ಆಫ್ಘಾನಿಸ್ತಾನ ಬಿ ಗುಂಪಿನಲ್ಲಿ 3ನೇ ಸ್ಥಾನಕ್ಕೆ ಜಿಗಿದಿದ್ದೂ ಅಲ್ಲದೇ ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಂಡರೆ, ಕೊನೆಯ ಸ್ಥಾನಕ್ಕೆ ಕುಸಿದ ಇಂಗ್ಲೆಂಡ್ ಟೂರ್ನಿಯಿಂದ ಬಹುತೇಕ ಹೊರಬಿದ್ದಂತೆ ಆಗಿದೆ.

ಬೃಹತ್ ಮೊತ್ತ ಬೆಂಬತ್ತಿದ ಇಂಗ್ಲೆಂಡ್ ತಂಡಕ್ಕೆ ಜೋ ರೂಟ್ ಶತಕದ ಆಸರೆ ನೀಡಿದರೂ ಮತ್ತೊಂದು ಕಡೆ ವಿಕೆಟ್ ಗಳು ಪತನಗೊಳ್ಳುತ್ತಿದ್ದಂತೆ ಗೆಲುವಿನ ಹೊಸ್ತಿಲಲ್ಲಿ ಎಡವಿತು. ರೂಟ್ 111 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 120 ರನ್ ಗಳಿಸಿದರು.

ಬೆನ್ ಡುಕೆಟ್ (38), ನಾಯಕ ಜೋಸ್ ಬಟ್ಲರ್ (38), ಜೇಮಿ ಓವರ್ಟನ್ (32) ಮತ್ತು ಹ್ಯಾರಿ ಬ್ರೂಕ್ (25) ತಕ್ಕಮಟ್ಟಿಗೆ ಹೋರಾಟ ನಡೆಸಿದರೂ ಫಲ ನೀಡಲಿಲ್ಲ. ಆಫ್ಘಾನಿಸ್ತಾನ ಪರ ಅಜಮತುಲ್ಲಾ ಓಮರಾಜಿ 58 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರೆ, ಮೊಹಮದ್ ನಬಿ 2 ವಿಕೆಟ್ ಗಳಿಸಿದರು. ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆಫ್ಘಾನಿಸ್ತಾನ ತಂಡ 37 ರನ್ ಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಯಿತು. ಆದರೆ ಆರಂಭಿಕ ಇಬ್ರಾಹಿಂ ಸರ್ದಾನ್ 146 ಎಸೆತಗಳಲ್ಲಿ 12 ಬೌಂಡರಿ ಮತ್ತು 6 ಸಿಕ್ಸರ್ ಸೇರಿದಂತೆ 177 ರನ್ ಸಿಡಿಸಿ ಜೀವನಶ್ರೇಷ್ಠ ಸಾಧನೆ ಮಾಡಿದರು.

ಇಬ್ರಾಹಿಂ ಸರ್ದಾನ್ ಗೆ ಉತ್ತಮ ಬೆಂಬಲ ನೀಡಿದ ನಾಯಕ ಹಜಮತುಲ್ಲಾಹ್ ಶಾಹಿದಿ (40), ಅಜಮತುಲ್ಲಾ ಓಮರಾಜಿ (41) ಮತ್ತು ಮೊಹಮದ್ ನಬಿ (40) ನಿರೀಕ್ಷೆಗೂ ಮೀರಿ ಹೋರಾಟ ನಡೆಸಿ ತಂಡವನ್ನು ಬೃಹತ್ ಮೊತ್ತದ ಕನಸು ನನಸು ಮಾಡಿದರು.

Related Posts

Leave a Reply

Your email address will not be published. Required fields are marked *