Wednesday, February 26, 2025
Menu

20 ವರ್ಷದಿಂದ ನಾನು ಸಂಭಾವನೆಯೇ ಪಡೆದಿಲ್ಲ ಅಂತ ಯಾಕಂದ್ರು ನಟ ಆಮೀರ್‌ ಖಾನ್‌

ನಟ ಆಮಿರ್ ಖಾನ್, ತಾವು ಕಳೆದ 20 ವರ್ಷದಿಂದ ಸಂಭಾವನೆಯನ್ನೇ ಪಡೆದಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ. 20 ವರ್ಷದಲ್ಲಿ ಅವರು ಯಾವ ಸಿನಿಮಾಕ್ಕೂ ಸಂಭಾವನೆಯನ್ನೇ ಪಡೆದಿಲ್ಲವಂತೆ. ಹಾಗೆಂದು ಆಮಿರ್ ಖಾನ್ ಇಷ್ಟು ವರ್ಷ ಸಿನಿಮಾಗಳಲ್ಲಿ ಉಚಿತವಾಗಿ ನಟಿಸಿಲ್ಲ, ಬದಲಿಗೆ ಲಾಭದಲ್ಲಿ ಭಾಗ ಪಡೆದಿದ್ದಾರೆ. ಇದರಿಂದಾಗಿ ಸಿನಿಮಾಗಳ ಬಜೆಟ್ ಮಿತಿಯಲ್ಲಿ ಇರುತ್ತವೆ ಮತ್ತು ಸಿನಿಮಾಗಳು ಲಾಭ ಮಾಡುವ ಸಾಧ್ಯತೆ ಬಹಳ ಹೆಚ್ಚಾಗುತ್ತದೆ. ಆಮಿರ್ ಖಾನ್​ಗೂ ಲಾಭವೇ ಆಗುತ್ತದೆ.

ನನಗೆ ‘ತಾರೇ ಜಮೀನ್ ಪರ್’ ಕತೆ ಬಹಳ ಇಷ್ಟವಾಗಿತ್ತು, ಆ ಸಿನಿಮಾ ಮಾಡಲೇಬೇಕಿತ್ತು, ನನ್ನ ಸ್ಟಾರ್​ಡಂ ಲೆಕ್ಕ ಹಾಕಿದ್ದರೆ ಆ ಸಿನಿಮಾ ಆಗುತ್ತಲೇ ಇರಲಿಲ್ಲ. ಪ್ರಾಫಿಟ್ ಷೇರ್ ಮಾದರಿಯಲ್ಲಿ ಕೆಲಸ ಮಾಡಿದ್ದರಿಂದಲೇ ಆ ಸಿನಿಮಾ 10-12 ಕೋಟಿಯಲ್ಲಿ ಮುಗಿಯಿತು. ಬೀದಿಯಲ್ಲಿ ಕಲಾವಿದ ತಮ್ಮ ಕಲೆ ಪ್ರದರ್ಶಿಸುತ್ತಾನೆ, ಅವನ ಕಲೆ ಇಷ್ಟವಾಯ್ತು ಎಂದರೆ ಜನ ಹಣ ಕೊಡುತ್ತಾರೆ ಇಲ್ಲವಾದರೆ ಇಲ್ಲ. ನನ್ನದೂ ಹಾಗೆಯೇ ನಾನು ಸಿನಿಮಾ ಮಾಡುತ್ತೇನೆ, ಜನ ನೋಡಿದರೆ ನನಗೆ ಹಣ ಬರುತ್ತದೆ, ನೋಡಲಿಲ್ಲವೆಂದರೆ ನನಗೆ ಹಣ ಬರುವುದಿಲ್ಲ ಎಂದಿದ್ದಾರೆ ಆಮಿರ್ ಖಾನ್.

‘3 ಇಡಿಯಟ್ಸ್’ ಸಿನಿಮಾವನ್ನು ಜನ ಮತ್ತೆ ಮತ್ತೆ ನೋಡಿದರು, ನೋಡುತ್ತಲೇ ಇದ್ದಾರೆ. ಇದರಿಂದ ನನಗೆ ಸತತವಾಗಿ ಹಣ ಬಂತು, ಹೆಚ್ಚಿಗೆ ಹಣ ಬಂತು. ಈ ರೀತಿ ಪ್ರಾಫಿಟ್ ಷೇರ್ ಮಾದರಿಯಲ್ಲಿ ಸಂಭಾವನೆ ಪಡೆಯುವುದರಿಂದ ನನಗೆ ಸ್ವಾತಂತ್ರ್ಯ ಇದೆ. ನನಗೆ ಬೇಕಾದ ಸಿನಿಮಾಗಳನ್ನು ನಾನು ಮಾಡಬಹುದು, ನಿರ್ಮಾಪಕರಿಗೆ ಅತಿಯಾದ ಹಣ ಖರ್ಚು ಮಾಡುವ ಅಗತ್ಯ ಇರುವುದಿಲ್ಲ. ಬಜೆಟ್​ಗಳು ಹೆಚ್ಚಾಗುವುದಿಲ್ಲ. ಈಗಲೂ ನನ್ನ ಸಿನಿಮಾಗಳು 20-30 ಕೋಟಿ ರೂಪಾಯಿಯಲ್ಲಿ ಮಾಡಿ ಮುಗಿಸಬಹುದು ಎಂದು ಆಮಿರ್ ಖಾನ್ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *