ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಕಾರ್ಯ ವ್ಯಾಪ್ತಿ ಜಾಗತಿಕವಾಗಿ ವಿಸ್ತರಣೆಯಾಗಲಿದೆ ಎಂಬ ವಿಶ್ವಾಸ ಹೊಂದಿರುವುದಾಗಿ ಕೆ ಎಸ್ ಬಿ ಡಿ ಬಿ ಅಧ್ಯಕ್ಷ ಎಸ್ ಈ. ಸುಧೀಂದ್ರ ಹೇಳಿದ್ದಾರೆ.
ಮೈಸೂರಿನಲ್ಲಿ ಜರುಗಿದ” ಸುಸ್ಥಿರ ತಾಂತ್ರಿಕತೆ” ಅಂತರಾಷ್ಟ್ರೀಯ ಸಮಾವೇಶದಲ್ಲಿ ಮಂಡಳಿಯ ಕಾರ್ಯಯೋಜನೆ ಗಳ ಪ್ರಾತ್ಯಕ್ಷಿಕೆ ಹಾಗೂ ಕಾರ್ಯ ಯೋಜನೆಗಳ ಕುರಿತು ವಿಚಾರ ಮಂಡಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಮುನ್ನಡೆಯುತ್ತಿದ್ದು ಜೈವಿಕ ಇಂಧನ ಕ್ಷೇತ್ರದ ಉನ್ನತೀಕರಣ ಹಾಗೂ ವಾಣಿಜ್ಯೀಕರಣಕ್ಕೆ ಸಂಬಂಧಿಸಿದಂತೆ ಮಂಡಳಿಯು ಅವರ ಮಾರ್ಗದರ್ಶನದಲ್ಲಿ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಶೀಲವಾಗಿದೆ. ಇತ್ತೀಚೆಗೆ ಜರುಗಿದ ಇನ್ವೆಸ್ಟ್ ಕರ್ನಾಟಕ – ಜಾಗತಿಕ ಹೂಡಿಕೆದಾರರ ಸಮಾವೇಶ 2025, ಯಶಸ್ವಿಯಾಗಿ ನೆರವೇರಿದ್ದು ರಾಜ್ಯದಲ್ಲಿ ಜೈವಿಕ ಇಂಧನ ಉತ್ಪಾ ದನಾ ಕಾರ್ಯ ಯೋಜನೆಗಳಲ್ಲಿ ಭಾಗಿಯಾಗಲು ಹಲವಾರು ಹೂಡಿಕೆದಾರರು ಸಿದ್ಧರಿರುವ ಬಗ್ಗೆ ಸಮಾವೇಶ ದಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳಿಗೆ ಅಧ್ಯಕ್ಷರು ಮಾಹಿತಿ ನೀಡಿದರು.
ಜೈವಿಕ ಇಂಧನ ಕಾರ್ಯ ಯೋಜನೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯ ಬೇಕೆನ್ನುವ ಚಿಂತನೆ ವ್ಯಕ್ತಪಡಿಸಿದ ಅಧ್ಯಕ್ಷರ ಧೀಮಂತ ನಾಯಕತ್ವ ಹಾಗೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಅವರ ನಡೆ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಉಂಟು ಮಾಡಿದೆ.
ಜರ್ಮನ್‌ನ ಫಚೊಷುಲೆ ಡೊರ್ಟ್‌ಮಂಡ್ ಯುನಿವರ್ಸಿಟಿ ಆಫ್ ಅಪ್ಲಯ್ಡ್ ಸೈನ್ಸಸ್ ಅಂಡ್ ಆರ್ಟ್ಸ್ (FACHHOCHSCHULE ,DORTMUND,GERMANY, UNIVERSITY, UNIVERSITY OF Applied Sciences and Arts,DORTMUND) ಪ್ರತಿನಿಧಿಗಳು ಮಂಡಳಿಯು ಪ್ರಸ್ತುತಪಡಿಸಿದ ಜೈವಿಕ ಇಂಧನ ಕಾರ್ಯ ಯೋಜನೆಗಳ ಕುರಿತು ಆಸಕ್ತಿ ತೋರಿದ್ದು, ಮಂಡಳಿಯ ಜೈವಿಕ ಇಂಧನ ಕಾರ್ಯ ಯೋಜನೆಗಳು ಜಾಗತಿಕವಾಗಿ ಪರಿಚಯಗೊಂಡಿವೆ.
ಜರ್ಮನ್ ವಿಶ್ವವಿದ್ಯಾಲಯದ ಪ್ರತಿನಿಧಿಗಳು ಮಂಡಳಿಯ ಕಾರ್ಯ ಯೋಜನೆಗಳ ಪರಿಚಯ ಮಾಡಿಕೊಳ್ಳಲು ಮಂಡ ಳಿಯ ಕಚೇರಿಗೆ ಭೇಟಿ ನೀಡಿದ್ದು ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ತಂಡದವರೊಂದಿಗೆ ವಿಚಾರ ವಿನಿಮಯ ನಡೆಸಿದ್ದು, ಕರ್ನಾಟಕ ಸರ್ಕಾರವು ರಾಷ್ಟ್ರದಲ್ಲಿ ಪ್ರಥಮವಾಗಿ ಕರ್ನಾಟಕ ರಾಜ್ಯ ಜೈವಿಕ ಇಂಧನ ನೀತಿ -2009 ರೂಪಿ ಸಿದ ಪ್ರಥಮ ರಾಜ್ಯವಾಗಿದೆ ಎಂಬುದನ್ನು ತಿಳಿದುಕೊಂಡರು.
ಜರ್ಮನ್ ಪ್ರತಿನಿಧಿಗ ಳುಜೈವಿಕ ಇಂಧನ ನೀತಿಯ ಸಮಗ್ರ ವಿವರಗಳನ್ನು ಪಡೆದುಕೊಂಡರು. ಜರ್ಮನ್ ವಿಶ್ವವಿದ್ಯಾ ಲಯದ ಪ್ರೊ. ಕ್ರಿಸ್ಟೋಫ ಹೆರ್ಚ್, ಡಾ. ಸ್ಟೀಫನ್ ವೇಯರ್ಸ್, ಪ್ರೊ. ಥ್ರೊಟೆನ್ ರುಬೆನ್, ಡಾ, ಝಿಂಗ್, ವಿನೋದ್ ರಾಜಮಣಿ, ಡಾ, ಜೊರ್ನ್ ಚ್ಯಾಫೆರ್, ಟಾ. ಟಿಮ್ ಗ್ರುಚ್ಮನ್, ಡಾ. ಸಂಜ ಕುನ್ಟ್ (Prof.Christoph Harrach,Dr.Stephan Weyers,Prof.Thorten Ruben Dipl-Betriebsw,Dr.zing.Vinod Rajmani,Dr.Bjorn Schafer,Dr.Bjorn Schafer,Dr.Tim Gruchmann,Dr.Sanja Kuhnt) ಈ ತಂಡದಲ್ಲಿದ್ದರು.
ಸಭೆಯ ನಂತರ ಮಂಡಳಿಯು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸ್ಥಾಪಿಸಿರುವ ಜೈವಿಕ ಇಂಧನ ಸಂಶೋಧನೆ ಹಾಗೂ ಗುಣಮಟ್ಟ ಖಾತ್ರಿ ಪ್ರಯೋಗ ಶಾಲೆಗೆ ತಂಡ ಭೇಟಿ ನೀಡಿತು. ಈ ಸಂದರ್ಭದಲ್ಲಿ ಸಂಯೋಜಕ ರಾದ ಡಾ. ಮುತ್ತುರಾಜ್ ಮತ್ತು ತಂಡದವರು ಪ್ರಯೋಗಾಲಯದ ಯಂತ್ರೋಪಕರಣಗಳು, ಪರೀಕ್ಷೆ, ಪ್ರಮಾಣಿಕರಣ ಹಾಗೂ ಪ್ರಯೋಗಶಾಲೆಯು ಎನ್‌ಎಬಿಎಲ್ ( NABL) ನಿಂದ ಅಕ್ರಿಡೆಶನ್ಷನ್ ಹೊಂದಿರುವುದನ್ನು ವಿವರಿಸಿದರು.
ಜರ್ಮನ್ ದೇಶದ ವಿಶ್ವವಿದ್ಯಾಲಯದ ಪ್ರತಿನಿಧಿಗಳು ರಾಜ್ಯದಲ್ಲಿ ಮಂಡಳಿ ಕೈಗೊಂಡಿರುವ ಜೈವಿಕ ಇಂಧನ ಕಾರ್ಯ ಯೋಜನೆಗಳ ಅನುಷ್ಠಾನ , ರಾಜ್ಯದಲ್ಲಿ ಹೊಂದಿರುವ ಮೂಲ ಸೌಕರ್ಯಗಳು ಹಾಗೂ ಪ್ರಯೋಗಶಾಲೆಯ ವೈಶಿಷ್ಟ್ಯ ಗಳು, ಅಧ್ಯಕ್ಷರ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಮಂಡಳಿಯ ಜೊತೆ ಕೈ ಜೋಡಿಸಲು ಉತ್ಸುಕರಾಗಿರು ವುದಾಗಿ ಜರ್ಮನ್ ಪ್ರತಿನಿಧಿಗಳು ಹೇಳಿದರು.
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಜೈವಿಕ ಇಂಧನ ಕ್ಷೇತ್ರದ ಉನ್ನತೀಕರಣ ಹಾಗೂ ವಾಣಿಜ್ಯೀಕರಣ ಕಾರ್ಯ ಚಟುವ ಟಿಕೆಗಳಲ್ಲಿ ವಿಶ್ವವಿದ್ಯಾಲಯವು ಎಲ್ಲಾ ಹಂತಗಳಲ್ಲಿ ಭಾಗಿಯಾಗಲು ಪ್ರೇರಣೆ ದೊರಕಿದ್ದು, ರಾಜ್ಯದಲ್ಲಿ ರಾಜ್ಯದಲ್ಲಿ 1 ಬಿಲಿಯನ್ ಡಾಲರ್ ಗೂ ಹೆಚ್ಚಿನ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳನ್ನು ಬಳಸಿಕೊಳ್ಳಲು ಇಚ್ಚಿಸಿರುವುದಾಗಿ ತಿಳಿಸಿದರು.
ಮಂಡಳಿಯ ಅತಿಥಿ ಸತ್ಕಾರ, ಜೈವಿಕ ಇಂಧನ ಕಾರ್ಯ ಯೋಜನೆಗಳು, ಅಧ್ಯಕ್ಷರ ಅಧ್ಯಕ್ಷ ನಾಯಕತ್ವ , ಪಾಲ್ಗೊ ಳ್ಳುವಿಕೆ ಕುರಿತು ಪ್ರಶ0ಸಿಸಿ, ಜರ್ಮನ್ ದೇಶದ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಲು ಆಹ್ವಾನಿಸಿದರು. ಮುಂದಿನ ದಿನಗಳಲ್ಲಿ ಒಡಂಬಡಿಕೆ ಏರ್ಪಟ್ಟು ಇನ್ನೂ ಹೆಚ್ಚಿನ ಕಾರ್ಯ ಯೋಜನೆಗಳ ಅನುಷ್ಠಾನದಲ್ಲಿ ಭಾಗಿಯಾಗುವ ಆಶಯ ವ್ಯಕ್ತಪಡಿಸಿದರು.