ಮೈಸೂರು: ಮೈಸೂರಿನ ಉದಯಗಿರಿ ಗಲಭೆ ಪ್ರಕರಣದಲ್ಲಿ ಪೊಲೀಸರ ಸಮಯ ಪ್ರಜ್ಞೆಯ ಕಾರ್ಯವೈಖರಿಗೆ ಅಭಿನಂದನೆ ಸಲ್ಲಿಸುವುದಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಉದಯಗಿರಿ ಪೊಲೀಸ್ ಠಾಣೆಯ ಕಲ್ಲು ತೂರಾಟ ವಿಚಾರದಲ್ಲಿ ಯಾರೇ ತಪ್ಪು ಮಾಡಿದ್ದರು ಕಠಿಣ ಕ್ರಮ ಆಗುತ್ತದೆ. ಪೊಲೀಸರು ಸಮಯ ಪ್ರಜ್ಞೆ ಮೆರೆದಿದ್ದಾರೆ, ಬೇಗನೆ ಪರಿಸ್ಥಿತಿ ನಿಯಂತ್ರಣ ತಂದಿದ್ದಾರೆ. ನಾನು ಕೂಡ ವಿಡಿಯೋ ನೋಡಿದ್ದೇನೆ. ಘಟನೆ ಬಗ್ಗೆ ಪೊಲೀಸರು, ಪತ್ರಕರ್ತರು ಹಾಗೂ ಸ್ಥಳೀಯ ಸಂಘಟನೆ ನಾಯಕರಿಂದಲೂ ಮಾಹಿತಿ ಪಡೆದಿದ್ದೇನೆ. ಎಲ್ಲರೂ ಕೂಡ ಸಣ್ಣ ಹುಡುಗುರು ಅಂತ ಹೇಳಿದ್ದರು. ಪೊಲೀಸರ ಮೇಲೆ ಹಲ್ಲೆ ಸಹಿಸಲ್ಲ. ಕ್ರಮಕ್ಕೆ ಈಗಾಗಲೇ ಸೂಚನೆ ನೀಡಿದ್ದೇವೆ ಎಂದರು.
ಉದಯಗಿರಿ ಪ್ರಕರಣದಲ್ಲಿ ಪೊಲೀಸರ ತಪ್ಪು ಎಂಬ ಸಚಿವ ರಾಜಣ್ಣ ಹೇಳಿಕೆ ವಿಚಾರ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣ ಮಾಡಿದ್ದಾರೆ. ರಾಜಣ್ಣ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಅವರು ಸಚಿವರಿದ್ದಾರೆ. ಈ ಬಗ್ಗೆ ಸಿಎಂ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.
ತ್ರಿವೇಣಿ ಸಂಗಮ ಶುದ್ದಿಗೆ ಹಣ: ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದು ಪ್ರಯಾಗ್ ರಾಜ್ ನಲ್ಲಿ ಮಾಡಿದ್ದಷ್ಟೇ ಸಂತಸವಾಗಿದೆ. ನಾನು ನಿನ್ನೆ ಪುಣ್ಯ ಸ್ನಾನ ಮಾಡಿದ್ದೇನೆ. ಸಿಎಂ ಕಾಲಿನ ನೋವು ಹಿನ್ನಲೆ ಬರಲಿಲ್ಲ. ಡಿಕೆ ನೀನು ಹೋಗು ಅಂದಿದ್ದರು. ಕಾವೇರಿ ನದಿ ಪವಿತ್ರವಾಗಿದೆ. ಸಂಗಮದ ನೀರು ಶುದ್ಧೀಕರಿಸಲು ಬಜೆಟ್ ನಲ್ಲಿ ತ್ರಿವೇಣಿ ಸಂಗಮ ಅಭಿವೃದ್ಧಿಗೆ ಹಣ ಇಡುತ್ತೇವೆಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಸಚಿವ ರಾಜಣ್ಣ ದೆಹಲಿ ಭೇಟಿ ವಿಚಾರವಾಗಿ ಪ್ರತಿಕ್ರಯಿಸಿ, ರಾಜಣ್ಣ ದೊಡ್ಡವರು ನಾನು ಅವರ ಬಗ್ಗೆ ಮಾತನಾಡಲ್ಲ. ನಾನು ಪಕ್ಷದ ಸಣ್ಣ ಕಾರ್ಯಕರ್ತ ಎಂದು ಹೇಳಿದರು.