ಚಾಕೋಲೇಟ್ ಕೊಡಿಸುವುದಾಗಿ ನಂಬಿಸಿ 43 ವರ್ಷದ ವ್ಯಕ್ತಿ 11 ವರ್ಷದ ಬಾಲಕೀಯ ಮೇಲೆ ಅತ್ಯಾಚಾರ ಎಸಗಿದ ಘಟನೆ ರಾಯಚೂರಿನಲ್ಲಿ ನಡೆದಿದೆ.
ಲಿಂಗಸುಗೂರು ತಾಲೂಕಿನ ಹಟ್ಟಿಚಿನ್ನದ ಗಣಿ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಆರೋಪಿ ಚಂದ್ರಶೇಖರ್ ಯಲ್ಲಪ್ಪ (43) ನನ್ನು ಪೊಲೀಸರು ಬಂಧಿಸಿದ್ದಾರೆ.
6ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿ ಮೇಲೆ ಸೋಮವಾರ ಮಧ್ಯಾಹ್ನ ಊಟದ ವಿರಾಮ ಬಿಟ್ಟ ಸಮಯದಲ್ಲಿ ಶಾಲೆಯ ಹೊರಗಡೆ ಇರುವ ಅಂಗಡಿಯಲ್ಲಿ ತಿಂಡಿ, ತಿನಿಸು ತೆಗೆದುಕೊಳ್ಳಲು ಬಂದಾಗ ಚಂದ್ರಶೇಖರ್ ಯಲ್ಲಪ್ಪ ಬಾಲಕಿಗೆ ಚಾಕೋಲೇಟ್ ಕೊಡಿಸಿ ತನ್ನ ಮನೆಗೆ ಕರೆದೋಯ್ದು ಅತ್ಯಾಚಾರ ಎಸಗಿದ್ದಾನೆ.
ಬಾಲಕಿ ಜೋರಾಗಿ ಕೂಗಿದ್ದರಿಂದ ಸ್ಥಳೀಯರು ಚಂದ್ರುಗೆ ಹಿಗ್ಗಾ-ಮುಗ್ಗಾ ಥಳಿಸಿ ಠಾಣೆಗೆ ಕರೆದೊಯ್ದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಎಸ್ಪಿ ಎಂ.ಪುಟ್ಟಮಾದಯ್ಯ, ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್, ಸಿಪಿಐ ಕೆ.ಹೊಸಕೇರಪ್ಪ, ಪಿಎಸೈ ಧರ್ಮಪ್ಪ, ಲಿಂಗಸುಗೂರು ಪಿಎಸೈ ರತ್ನಮ್ಮ ಅವರು ಚಂದ್ರಶೇಖರ್ ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಂದ್ರಶೇಖರ್‌ಗಾರೆ ಕೆಲಸ ಮಾಡುತ್ತಿದ್ದು, ಕೌಟುಂಬಿಕ ಕಲಹದಿಂದ ಹೆಂಡತಿ, ಇಬ್ಬರು ಮಕ್ಕಳು ಮನೆ ಬಿಟ್ಟು ಹೋಗಿದ್ದಾರೆ. ಬಾಲಕಿ ತಂದೆ, ತಾಯಿ ಇಲ್ಲದ ತಬ್ಬಲಿಯಾಗಿದ್ದು, ಅಜ್ಜಿ ಮನೆಯಲ್ಲಿ ವಾಸಿಸುತ್ತಿದ್ದಳು ಎನ್ನಲಾಗಿದೆ.