Saturday, February 22, 2025
Menu

ದೆಹಲಿಯಲ್ಲಿ ಗದ್ದುಗೆಯತ್ತ ಬಿಜೆಪಿ; ಆಪ್ ಗೆ ಆಘಾತ

ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಕ್ತಾಯ ಹಂತ ತಲುಪಿದ್ದು, ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಹ್ಯಾಟ್ತಿಕ್ ಕನಸು ಭಗ್ನಗೊಂಡಿದ್ದು, ಬಿಜೆಪಿ ಅಧಿಕಾರಕ್ಕೆ ಮರಳುವ ಸೂಚನೆ ಲಭಿಸಿದೆ.

ಫೆಬ್ರವರಿ 5 ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಶನಿವಾರ ನಡೆದಿದ್ದು, ಚುನಾವಣಾಪೂರ್ವ ಸಮೀಕ್ಷೆ ವರದಿಗಳು ನಿಜವಾಗುವ ಸೂಚನೆ ದೊರೆತಿದೆ.

70 ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನಗಳಲ್ಲಿ ಮುನ್ನಡೆ ಪಡೆದಿದ್ದು, ಬಹುತಮಕ್ಕೆ ಬೇಕಾದ ಮ್ಯಾಜಿಕ್ ನಂಬರ್ 36ಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲುವತ್ತ ದಾಪುಗಾಲಿರಿಸಿದೆ.

ಕಳೆದ ಚುನಾವಣೆಯಲ್ಲಿ 62 ಸ್ಥಾನ ಗೆದ್ದು ಅಭೂತಪೂರ್ವ ಸಾಧನೆ ಮಾಡಿದ್ದ ಆಮ್ ಆದ್ಮಿ ಪಕ್ಷ ಈ ಬಾರಿ 30 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅಲ್ಲದೇ ಬಹುತಮಕ್ಕಿಂತ ಅಲ್ಪ ಹಿನ್ನಡೆಯಲ್ಲಿದೆ. ಕಾಂಗ್ರೆಸ್ ಸತತ ಎರಡನೇ ಬಾರಿ ಖಾತೆ ತೆರೆಯಲು ವಿಫಲವಾಗಿದೆ.

Related Posts

Leave a Reply

Your email address will not be published. Required fields are marked *