Menu

15 ವರ್ಷಗಳಲ್ಲಿ 15,756 ಭಾರತೀಯ ವಲಸಿಗರು ಗಡಿಪಾರು, ಮೋದಿ ಸರ್ಕಾರದಲ್ಲೇ ಗರಿಷ್ಠ!

immigratnts

ಕಳೆದ 15 ವರ್ಷಗಳಲ್ಲಿ 15,756 ಭಾರತೀಯ ವಲಸಿಗರನ್ನು ಅಮೆರಿಕ ಗಡಿಪಾರು ಮಾಡಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಲೋಕಸಭೆಯಲ್ಲಿ ಉತ್ತರ ನೀಡಿದ್ದಾರೆ.

ಭಾರತೀಯ ವಲಸಿಗರನ್ನು ಕೈ ಹಾಗೂ ಕಾಲುಗಳಿಗೆ ಕೊಳ ಹಾಕಿ ಪಂಜಾಬ್ ನ ಅಮೃತಸರಕ್ಕೆ ಅಮೆರಿಕ ಸೇನೆ ಬಿಟ್ಟುಹೋಗಿರುವ ಘಟನೆಗೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, ಮೋದಿ ಸ್ನೇಹಿತ ಎಂದು ಹೇಳಿಕೊಳ್ಳುವ ಡೊನಾಲ್ಡ್ ಟ್ರಂಪ್ ಅವರ ನಡೆ ಆಘಾತಕಾರಿ ಎಂದು ಆರೋಪಿಸಿತು.

ಈ ವೇಳೆ ಲೋಕಸಭೆಯಲ್ಲಿ ಉತ್ತರ ನೀಡಿದ ಜೈ ಶಂಕರ್, ಅಮೆರಿಕ ಭಾರತೀಯ ವಲಸಿಗರನ್ನು ಗಡಿಪಾರು ಮಾಡಿರುವುದು ಇದೇ ಮೊದಲಲ್ಲ ಎಂದು ಸಮಜಾಯಿಷಿ ನೀಡಿದರು. ಅಲ್ಲದೇ ಕಳೆದ ೧೫ ವರ್ಷಗಳಲ್ಲಿ ಗಡಿಪಾರು ಮಾಡಲಾದ ಭಾರತೀಯ ವಲಸಿಗರ ಅಂಕಿ-ಅಂಶ ನೀಡಿದರು.

ವಿಶೇಷ ಅಂದರೆ ಕಳೆದ 15 ವರ್ಷಗಳಲ್ಲಿ 15,756 ವಲಸಿಗರನ್ನು ಗಡಿಪಾರು ಮಾಡಲಾಗಿದ್ದು, ಪ್ರಧಾನಿ ಮೋದಿ ಸರ್ಕಾರದಲ್ಲಿಯೇ ಅತಿ ಹೆಚ್ಚು ಮಂದಿ ವಲಸಿಗರನ್ನು ಗಡಿಪಾರು ಮಾಡಲಾಗಿದೆ.

ಪ್ರಧಾನಿಯಾಗಿ ಮೋದಿ ಅಧಿಕಾರ ವಹಿಸಿಕೊಂಡ ಹಿಂದಿನ ವರ್ಷ ಅಂದರೆ 2013ರಲ್ಲಿ ಅತೀ ಕಡಿಮೆ 515 ವಲಸಿಗರನ್ನು ಗಡಿಪಾರು ಮಾಡಲಾಗಿತ್ತು. 2014ರಲ್ಲಿ 591 ಅಂದರೆ ಮೋದಿ ಆಡಳಿತದಲ್ಲಿಯೇ ಅತೀ ಕಡಿಮೆ ವಲಸಿಗರನ್ನು ಗಡಿಪಾರು ಮಾಡಿರುವುದು ಅವರು ಅಧಿಕಾರ ನಡೆಸಿದ ಮೊದಲ ವರ್ಷ (2014).

2019ರಲ್ಲಿ ಅತೀ ಹೆಚ್ಚು 2012 ವಲಸಿಗರನ್ನು ಗಡಿಪಾರು ಮಾಡಲಾಗಿತ್ತು. 2020ರಲ್ಲಿ ಕೋವಿಡ್ ಆರಂಭವಾದ ವರ್ಷದಲ್ಲಿ ೧೮೮೯ ಭಾರತೀಯರನ್ನು ಗಡಿಪಾರು ಮಾಡಲಾಗಿತ್ತು ಎಂದು ಜೈಶಂಕರ್ ವಿವರಿಸಿದ್ದಾರೆ.

104 ಭಾರತೀಯ ವಲಸಿಗರನ್ನು ಭಾರತಕ್ಕೆ ಗಡಿಪಾರು ಮಾಡಲಾಗಿದ್ದು, ಇದರಲ್ಲಿ ತಲಾ 33 ಮಂದಿ ಹರಿಯಾಣ ಮತ್ತು ಗುಜರಾತ್ ರಾಜ್ಯದವರಾಗಿದ್ದಾರೆ. 30 ಮಂದಿ ಪಂಜಾಬ್, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಿಂದ ತಲಾ 3, ಚಂಡೀಗಢದಲ್ಲಿ ಇಬ್ಬರು ಇದ್ದರು.

ಅಮೆರಿಕದಿಂದ ಅಕ್ರಮ ವಲಸಿಗರು ಎಂದು ಭಾರತಕ್ಕೆ ತಂದು ಬಿಡಲಾದ ಭಾರತೀಯರ ಪೈಕಿ ಬಹುತೇಕ ಮಂದಿ ಅಮೆರಿಕದಲ್ಲಿ ಉದ್ಯೋಗ ಪಡೆಯಲು ಹಾಗೂ ನೆಲೆಸಲು ಭಾರೀ ಮೊತ್ತದ ಹಣವನ್ನು ವಿನಿಯೋಗಿಸಿದ್ದಾರೆ.

ಈಗ ಇವರನ್ನು ಕೈ ಮತ್ತು ಕಾಲುಗಳಿಗೆ ಕೋಳ ತೊಡಿಸಿ ಕರೆ ತರಲಾಗಿದ್ದು, ಸುಮಾರು 40 ಗಂಟೆಗಳ ಕಾಲ ವಿಮಾನ ಪ್ರಯಾಣದ ವೇಳೆ ಪ್ರಾಣಿಗಳಂತೆ ನೋಡಿಕೊಳ್ಳಲಾಗಿದೆ. ಅದರಲ್ಲೂ ಬಾತ್ ರೂಮ್ ಗೆ ಹೋಗುವಾಲು, ಊಟ ಮಾಡುವಾಗಲೂ ಸಹ ಕೊಳ ತೊಡಿಸಲಾಗಿತ್ತು ಎಂದು ವಲಸಿಗರು ಆರೋಪಿಸಿದ್ದಾರೆ.

15 ವರ್ಷಗಳಲ್ಲಿ ಗಡಿಪಾರು ಮಾಡಲಾದ ಭಾರತೀಯ ವಲಸಿಗರು!

2009- 734 

2010- 799

2011- 597

2012- 530

2013- 515

2014- 591

2015- 708

2016-1303

2017- 1024

2018- 1180

2019- 2042

2020- 1889

2021-805

2022- 862

2023- 617

2024- 104 [ಫೆಬ್ರವರಿ ವರೆಗೆ]

Related Posts

Leave a Reply

Your email address will not be published. Required fields are marked *