Menu

ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರನಡೆದ ಅರ್ಜೆಂಟೀನಾ

ಅಮರಿಕ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಯಿಂದ ಅರ್ಜೆಂಟೀನಾ ಕೂಡ ಹೊರ ಬಂದಿದೆ. ಈ ಮೂಲಕ ಅಮೆರಿಕ ಹಾದಿ ಹಿಡಿದಿದೆ.  ಕೋವಿಡ್ -19 ಸಾಂಕ್ರಾಮಿಕ ರೋಗದ ನಿರ್ವಹಣೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಎಡವಿದೆ ಎಂಬ ನೆಪ ನೀಡಿ ಅರ್ಜೆಂಟೀನ ಈ ನಿರ್ಧಾರ ಕೈಗೊಂಡಿದೆ.

ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುತ್ತಿರುವುದಾಗಿ ಘೋಷಿಸಿಕೊಂಡ ಎರಡು ವಾರಗಳ ನಂತರ ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೀ ಈ ವಿಷಯ ತಿಳಿಸಿದ್ದಾರೆ.

ಮಿಲೀ ಅವರ ನಿರ್ಧಾರವು ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಆರೋಗ್ಯ ನಿರ್ವಹಣೆಯನ್ನು ಆಧರಿಸಿದ್ದಾಗಿದೆ ಎಂದು ವಕ್ತಾರ ಮ್ಯಾನುಯೆಲ್ ಅಡೋರ್ನಿ ವರದಿಗಾರರಿಗೆ ತಿಳಿಸಿದರು.

ನಮ್ಮ ಸಾರ್ವಭೌಮತ್ವದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆ ಹಸ್ತಕ್ಷೇಪ ಮಾಡಲು ಅನುಮತಿಸುವುದಿಲ್ಲ ಎಂದು ಅರ್ಜೆಂಟೀನಾ ಹೇಳಿದೆ. ಈ ಕ್ರಮವು ಅರ್ಜೆಂಟೀನಾಕ್ಕೆ ಸ್ಥಳೀಯವಾಗಿ ಸಂದರ್ಭಕ್ಕೆ ಹೊಂದಿಕೊಳ್ಳುವ ನೀತಿಗಳನ್ನು ಕಾರ್ಯಗತಗೊಳಿಸಲು ಹೆಚ್ಚಿನ ಅವಕಾಶ ನೀಡುತ್ತದೆ ಮತ್ತು ಸಂಪನ್ಮೂಲಗಳ ಹೆಚ್ಚಿನ ಲಭ್ಯತೆಯನ್ನು ಖಚಿತಪಡಿಸುತ್ತದೆ ಎಂದು ಅರ್ಜೆಂಟೀನಾ ಅಧ್ಯಕ್ಷರ ವಕ್ತಾರ ಮ್ಯಾನ್ಯುಯಲ್ ಅಡೊರ್ನಿ ಹೇಳಿದ್ದಾರೆ.

ಡಬ್ಲ್ಯುಹೆಚ್‌ಒ ಅಂಕಿಅಂಶಗಳ ಪ್ರಕಾರ, ಅರ್ಜೆಂಟೀನಾ 2022 ಮತ್ತು 2023 ರಲ್ಲಿ ಸಂಸ್ಥೆಗೆ ಸದಸ್ಯತ್ವ ಶುಲ್ಕದ ರೂಪದಲ್ಲಿ ಸುಮಾರು 8.75 ದಶಲಕ್ಷ ಡಾಲರ್ ಕೊಡುಗೆ ನೀಡಿದೆ. ಇದು ಒಟ್ಟು ಬಜೆಟ್‌ನ ಶೇಕಡಾ 0.11ರಷ್ಟಿದೆ. ಅರ್ಜೆಂಟೀನಾ ವಿಶ್ವ ಆರೋಗ್ಯ ಸಂಸ್ಥೆಯಿಂದ ಹಣವನ್ನು ಪಡೆಯುವುದಿಲ್ಲ, ಆದ್ದರಿಂದ ಈ ಕ್ರಮವು ದೇಶಕ್ಕೆ ಹಣ ಸಂಗ್ರಹಣೆಯಲ್ಲಿ ಯಾವುದೇ ನಷ್ಟವಾಗುವುದಿಲ್ಲ ಎಂದಿದ್ದಾರೆ.

Related Posts

Leave a Reply

Your email address will not be published. Required fields are marked *