Monday, September 07, 2026
Menu

ಡಿಸೆಂಬರೊಳಗೆ ಮಹಾನಗರ ಪಾಲಿಕೆ, ನಗರಸಭೆ, ಸ್ಥಳೀಯ ಚುನಾವಣೆ: ಸಚಿವ ಡಾ. ಯತೀಂದ್ರ

ಮಹಾನಗರ ಪಾಲಿಕೆ, ನಗರಸಭೆ ಹಾಗೂ ಸ್ಥಳೀಯ ಚುನಾವಣೆಗಳನ್ನು ನಡೆಸಲಾಗುವುದು‌, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈಗಾಗಲೇ  ಸೂಚನೆ ನೀಡಿದ್ದಾರೆ ಎಂದು   ನಗರಾಭಿವೃದ್ಧಿ ಇಲಾಖೆ ಖಾತೆ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆಯಿಂದ ಆಯೋಜಿಸಿದ್ದ ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಇಲಾಖೆಯ ಪ್ರಗತಿಪರಿಶೀಲನೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈಗಾಗಲೇ ಡಿಸೆಂಬರೊಳಗೆ ಮಹಾನಗರ ಪಾಲಿಕೆ, ನಗರಸಭೆ ಹಾಗೂ ಸ್ಥಳೀಯ ಚುನಾವಣೆಗಳನ್ನು ನಡೆಸುವಂತೆ ಸೂಚನೆಯನ್ನು ನೀಡಿದ್ದಾರೆ. ಅದರಂತೆ ಡಿಸೆಂಬರೊಳಗೆ ಚುನಾವಣೆ ನಡೆಸುವುದಾಗಿ ತಿಳಿಸಿದರು.

ಬೆಂಗಳೂರಿನಲ್ಲಿ ಭಾನುವಾರ ನಡೆದಿರುವುದು ಅಹಿಂದ ಸಭೆ ಅಲ್ಲ. ಹಿಂದುಳಿದ ವರ್ಗಗಳ ಒಕ್ಕೂಟದಿಂದ ನಡೆದ ಸಭೆ. ಅ ಸಭೆಗೆ ತಂದೆಯವರನ್ನು ಆಹ್ವಾನಿಸಿದರು. ಒಕ್ಕೂಟದ 25 ವರ್ಷದ ಸಂಭ್ರಮ ಆಚರಣೆಯಲ್ಲಿ ಸಭೆಯನ್ನು‌ಆಯೋಜಿಸಿದ್ದರು. ಅದಕ್ಕೆ ತಂದೆಯವರ ಕರೆದಿದ್ದು, ಅವರು ತೆರಳಿದ್ದಾರೆ. ಒಕ್ಕೂಟದಿಂದ ಆಯೋಜಿಸಿರುವ ಕಾರ್ಯಕ್ರಮಕ್ಕೆ ಅವರನ್ನು, ಇವರನ್ನು ಕರೆಯಬೇಕು ಎಂದು ನಾವು ಹೇಳಲು ಬರುವುದಿಲ್ಲ. ಅದು ಅಹಿಂದ ಸಭೆಯಲ್ಲ ಎಂದು ಸ್ಪಷ್ಟನೆ ನೀಡಿದರು.

Related Posts

Leave a Reply

Your email address will not be published. Required fields are marked *