ದೇಶಾದ್ಯಂತ ಕಾರು ಮಾಲೀಕರಿಗೆ ಏಕರೂಪದ ಟೋಲ್ ಪಾಸ್ ವ್ಯವಸ್ಥೆ ಜಾರಿ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಮೂಲಕ ವಾಹನ ಚಾಲಕರಿಗೆ ಸಿಹಿಸುದ್ದಿ ನೀಡಲು ಮುಂದಾಗಿದೆ.
ನೂತನ ನಿಯಮದ ಪ್ರಕಾರ ವಾಹನ ಸವಾರರು ವಾರ್ಷಿಕ 3000 ರೂ. ಪಾವತಿಸಿದರೆ ಎಷ್ಟು ಬಾರಿ ಬೇಕಾದರೂ ಟೋಲ್ ಗಳಲ್ಲಿ ಸಂಚರಿಸಬಹುದು. 30 ಸಾವಿರ ರೂ. ಪಾವತಿಸಿದರೆ ೧೫ ವರ್ಷಗಳವರೆಗೆ ಅಂದರೆ ಕಾರಿನ ಜೀವಿತಾವಧಿ ವರೆಗೆ ದೇಶಾದ್ಯಂತ ಪ್ರಯಾಣಿಸಬಹುದಾಗಿದೆ.
ಈ ವ್ಯವಸ್ಥೆ ಅನುಷ್ಠಾನಗೋಳಿಸುವ ಪ್ರಸ್ತಾವನೆಯು ಪ್ರಗತಿಯಲ್ಲಿದೆ. ಜೊತೆಗೆ ಕಾರುಗಳಿಗೆ ಪ್ರತಿ ಕಿಮೀಗೆ ವಿಧಿಸಲಾಗುವ ಟೂಲ್ನ ಮೂಲ ಬೆಲೆಯನ್ನೂ ಮೊಟಕುಗೊಳಿಸುವ ಬಗ್ಗೆಯೂ ಸಚಿವಾಲಯ ಚಿಂತನೆ ನಡೆಸಿದೆ. ಫಾಸ್ಟ್ ಟ್ಯಾಗ್ ಹೊಂದಿರುವವರಿಗೆ ಇದು ಅಗತ್ಯವಿಲ್ಲ ಎಂದು ಸಹ ಹೇಳಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಬಳಸುವ ವಾಹನ ಸವಾರರಿಗೆ ಮಾಸಿಕ ಪಾಸ್ ನೀಡುವ ವ್ಯವಸ್ಥೆ ಚಾಲ್ತಿಯಲಿದೆ. ಇದು ಮಾಸಿಕ ಪಾಸ್‌ಗೆ 340 ರೂ. ಇದು, ವಾರ್ಷಿಕ 4,080 ರೂ.ಆಗಲಿದೆ. ವಾರ್ಷಿಕ ಪಾಸ್ ವ್ಯವಸ್ಥೆ ಜಾರಿಗೆ ಬಂದರೆ 1,080 ರೂ. ಉಳಿತಾಯವಾಗಲಿದೆ. ಇದು ಮಧ್ಯಮ ವರ್ಗದವರಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಂತಾಗುತ್ತದೆ.
ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ʻಏಕ ಟೋಲ್ʼ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ಹೇಳಿದ್ದರು. 2023-24ರ ವರ್ಷದಲ್ಲಿ ಸಂಗ್ರಹವಾದ 55,000 ಕೋಟಿ ರೂ.ಗಳ ಪೈಕಿ, ಖಾಸಗಿ ಕಾರುಗಳಿಂದ ಸಂಗ್ರಹಿತವಾದ ಟೋಲ್ ಶುಲ್ಕ 8,000 ಕೋಟಿ ರೂ. ಮಾತ್ರವೇ ಇದೆ. ಖಾಸಗಿ ಕಾರುಗಳ ವಹಿವಾಟು 53% ಇದ್ದರೂ, ಟೋಲ್ ಸಂಗ್ರಹದಲ್ಲಿ ಶೇ.21 ರಷ್ಟಿದೆ ಎಂದು ಡೇಟಾ ತೋರಿಸಿದೆ. ಹೀಗಾಗಿ ಹೊಸ ಕ್ರಮಕ್ಕೆ ಸಚಿವಾಲಯ ಮುಂದಾಗಿದೆ.