Menu
12

ಸದಾಶಿವನಗರ ಬ್ಯಾಡ್ಮಿಂಟನ್ ಲೀಗ್: ಬಿಎಂಆರ್ಜಿ ಫೈರಿ ಫಾಲ್ಕನ್ಸ್‌ಗೆ ಪ್ರಶಸ್ತಿ

ಬೆಂಗಳೂರು: ಬಿ.ಆರ್.ಶ್ರೀಧರ್ ಒಡೆತನದ ಬಿಎಂಆರ್‍ಜಿ-ಫೈರಿ ಫಾಲ್ಕನ್ಸ್ ಇತ್ತೀಚೆಗೆ ಮುಕ್ತಾಯಗೊಂಡ ಸದಾಶಿವನಗರ ಬ್ಯಾಡ್ಮಿಂಟನ್ ಲೀಗ್‍ನಲ್ಲಿ ತೀವ್ರ ಪೈಪೋಟಿಯಿಂದ ಕೂಡಿದ್ದ ಫೈನಲ್‍ನಲ್ಲಿ ಥಂಡರ್ ಡ್ರಾಗನ್ಸ್ ತಂಡವನ್ನು 3-1 ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.

ಎರಡೂ ತಂಡಗಳು ತಮ್ಮೆಲ್ಲ ಕೌಶಲಗಳನ್ನು ಒರೆಗೆ ಹೆಚ್ಚಿದ ಪಂದ್ಯ ಕೊನೆ ಕ್ಷಣದವರೆಗೂ ಪ್ರೇಕ್ಷಕರನ್ನು ತುದಿಗಾಗಲ್ಲಿ ನಿಲ್ಲುವಂತೆ ಮಾಡಿತು. ಚಾಂಪಿಯನ್‍ಶಿಪ್ ಗೆಲ್ಲಲೇಬೇಕೆಂಬ ಕೆಚ್ಚಿನಿಂದ ಹೋರಾಡಿದ ನಾಯಕ ರಿತೇಶ್ ಸುರೇಶ್ ನೇತೃತ್ವದ ತಂಡ ಅಂತಿಮವಾಗಿ ಪ್ರಾಬಲ್ಯ ಮೆರೆಯಿತು. ಆದಾಗ್ಯೂ, ನಿಶಾಂತ್ ನೇತೃತ್ವದ ಥಂಡರ್ ಡ್ರಾಗನ್ಸ್ ತಮ್ಮ ತಂಡದ ಸಾಮಥ್ರ್ಯವನ್ನು ಕೀಳಂದಾಜುಮಾಡುವಂತಿಲ್ಲ ಎಂದು ಸಾಬೀತುಪಡಿಸಿತು.

ಕತ್ತುಕತ್ತಿನ ಕಾಳಗದಲ್ಲಿ ಅಮೋಘ ಪ್ರತಿಹೋರಾಟ ಸಂಘಟಿಸಿ ಫಾಲ್ಕನ್ಸ್‌ನ ಮೊದಲ ಡಬಲ್ಸ್ ಜೋಡಿಯು ಮೂರನೇ ಸೆಟ್‍ನಲ್ಲಿ ಪಂದ್ಯವನ್ನು ಗೆಲುವಿನ ನಗೆ ಬೀರಿತು. ಈ ಆವೇಗ-ಬದಲಾಯಿಸುವ ಗೆಲುವು ಫಾಲ್ಕನ್ಸ್‍ಗೆ ಪ್ರಶಸ್ತಿ ಪಡೆಯಲು ಅಗತ್ಯ ಹುಮ್ಮಸ್ಸು ನೀಡಿತು.

ಕೊನೆಯಲ್ಲಿ, ಬಿಎಂಆರ್‍ಜಿ ಫೈರಿ ಫಾಲ್ಕನ್ಸ್ 3-1 ಅಂತರದಲ್ಲಿ ಥಂಡರ್ ಡ್ರ್ಯಾಗನ್ಸ್ ತಂಡವನ್ನು ಸೋಲಿಸಿ ವಿಜಯಶಾಲಿಯಾಯಿತು. ತಂಡದ ಅಸಾಧಾರಣ ಸಾಂಘಿಕ ಕೆಲಸ, ಚುರುಕುತನ ಮತ್ತು ದೃಢಸಂಕಲ್ಪ ಫಲ ನೀಡಿದ್ದು, ಸದಾಶಿವನಗರ ಬ್ಯಾಡ್ಮಿಂಟನ್ ಲೀಗ್‍ನ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.
ವೆಂಕಟೇಶ್, ಧಾರಿಣಿ, ವಿಜಯ್, ರಿತೇಶ್, ನಿರ್ಮಲಾ, ತನುಷ್, ಶಶಿಕಾಂತ್, ಹರ್‍ಪ್ರೀತ್, ಸತೀಶ್, ಅಶೋಕ್ ಶೆಟ್ಟಿ ಮತ್ತು ರವಿಶಂಕರ್ ಫಾಲ್ಕನ್ಸ್ ತಂಡವನ್ನು ಪ್ರತಿನಿಧಿಸಿದ್ದರು.

Related Posts

Leave a Reply

Your email address will not be published. Required fields are marked *