ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 5 ಮಂದಿ ಮೃತಪಟ್ಟ ದಾರುಣ ಘಟನೆ ಯಾದಗಿರಿ ಜಿಲ್ಲೆಯಲ್ಲಿ ಸಂಭವಿಸಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಿಂಥಣಿ ಬಳಿ ಬುಧವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದ್ದು, ಆಂಜನೇಯ (35), ಪತ್ನಿ ಗಂಗಮ್ಮ (28), ಮಕ್ಕಳಾದ ಒಂದು ವರ್ಷದ ಹನುಮಂತ, ಸಹೋದರನ ಮಕ್ಕಳಾದ ಪವಿತ್ರ (5) ಹಾಗೂ ರಾಯಪ್ಪ (3) ಮೃತಪಟ್ಟ ದುರ್ವೈವಿಗಳು.
ಮೂವರು ಮಕ್ಕಳು ಸೇರಿ ಒಂದೇ ಬೈಕ್ ನಲ್ಲಿ ಐದು ಜನ ಸುರಪುರದಿಂದ ತಿಂಥಣಿ ಕಡೆಗೆ ಹೊರಟ್ಟಿದ್ದರು. ಆ ವೇಳೆ ಹಿಂಬದಿಯಿಂದ KA 32 F 2684 ನಂಬರಿನ ಕೆಎಸ್ಆರ್ಟಿಸಿ ಬಸ್ ಬಂದು ರಭಸವಾಗಿ ಗುದ್ದಿದೆ. ಘಟನೆಯಲ್ಲಿ ಇಡೀ ಕುಟುಂಬವೇ ಬಲಿಯಾಗಿದೆ.
ಗುದ್ದಿದ ರಭಸಕ್ಕೆ ಬೈಕ್ನಲ್ಲಿದ್ದ ಮೂರು ಎರಡು ಪುಟ್ಟ ಪುಟ್ಟ ಮಕ್ಕಳು ಉಸಿರು ಚೆಲ್ಲಿವೆ. ಬೈಕ್ ನಲ್ಲಿ ಸೋದರನ ಮಕ್ಕಳನ್ನು ಕೂರಿಸಿಕೊಂಡು ಊರಿಗೆ ಹೊರಟಾಗ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಸುರಪುರ ಪೊಲೀಸರು ದೌಡಾಯಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.