Wednesday, February 05, 2025
Menu

ಗ್ರಹಗಳ ಅಪೂರ್ವ ಸಂಯೋಗ ಸಂಭ್ರಮಿಸಲು ಆರ್ಕಿಡ್ಸ್ ಬೆಂಗಳೂರು ಕ್ಯಾಂಪಸ್ ಸಜ್ಜು

ಬೆಂಗಳೂರು: ಆರ್ಕಿಡ್ಸ್ ದಿ ಇಂಟರ್‌ನ್ಯಾಶನಲ್ ಶಾಲೆಯು ಅಪರೂಪದ ಮತ್ತು ವಿಸ್ಮಯಕಾರಿ ಖಗೋಳ ಸಂಗತಿಯಾದ ಶುಕ್ರ, ಮಂಗಳ, ಗುರು, ಶನಿ, ನೆಪ್ಚೂನ್, ಯುರೇನಸ್ ಮತ್ತು ಬುಧ ಗ್ರಹಗಳ ಸಂಯೋಗದ ವಿಶಿಷ್ಟವಾದ ನಕ್ಷತ್ರ ವೀಕ್ಷಣೆಗೆ ಖಗೋಳ ವಿಜ್ಞಾನದ ಚಲನಚಿತ್ರ ಮತ್ತು ಖಗೋಳ ಚಟುವಟಿಕೆಗಳ ಮೂಲಕ ಬೆಂಗಳೂರಿನ ಕ್ಯಾಂಪಸ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ನಕ್ಷತ್ರ ವೀಕ್ಷಣೆಯ ರಾತ್ರಿಯು ಈ ಅಸಾಧಾರಣ ಖಗೋಳ ಪ್ರಕ್ರಿಯೆಯ ಕೌತುಕವನ್ನು ಕಣ್ತುಂಬಿಕೊಳ್ಳಲು ಒಟ್ಟಿಗೆ ಸೇರಲು ಇಚ್ಛಿಸುವ ಎಲ್ಲ ವಿದ್ಯಾರ್ಥಿಗಳು (ಆರ್ಕಿಡ್ಸ್ ಮತ್ತು ಬೇರೆ ಶಿ&ಣ ಸಂಸ್ಥೆಗಳ ವಿದ್ಯಾರ್ಥಿಗಳು) ಮತ್ತು ಬಾಹ್ಯಾಕಾಶ ಉತ್ಸಾಹಿಗಳಿಗೆ ಮುಕ್ತವಾಗಿರುತ್ತದೆ.
ಈ ನಕ್ಷತ್ರ ವೀಕ್ಷಣೆಯಲ್ಲಿ ಭಾಗವಹಿಸುವವರಿಗೆ ತಿಳಿವಳಿಕೆ ಮತ್ತು ಅನುಭವಜನ್ಯ ಕಲಿಕೆಯ ಅನನ್ಯವಾದ ಮೇಳದಲ್ಲಿ ಭಾಗಿಗಳಾಗುವ ಅವಕಾಶವಿರುತ್ತದೆ.

12ರಿಂದ 15 ನಿಮಿಷದ ಶೈಕ್ಷಣಿಕ ಚಲನಚಿತ್ರವೊಂದನ್ನು ಪ್ರತಿ ಕ್ಯಾಂಪಸ್‌ನಲ್ಲಿ ಪ್ರದರ್ಶಿಸುವ ಮೂಲಕ ಈ ಗ್ರಹಗಳ ಸಂಯೋಗದ ಮಹತ್ವ ಮತ್ತು ಖಗೋಳ ಕ್ಷೇತ್ರದಲ್ಲಿನ ಅದರ ಅತ್ಯಾಕರ್ಷಕ ಪಾತ್ರವನ್ನು ವಿವರಿಸಲಾಗುವುದು. ಈ ಚಲನಚಿತ್ರವು ಆಕಾಶಕಾಯಗಳ ಚಲನೆಯ ಹಿಂದಿನ ವಿಜ್ಞಾನವನ್ನು ಅನ್ವೇಷಿಸುವ ಮೂಲಕ ಬ್ರಹ್ಮಾಂಡದ ಆಳವಾದ ತಿಳಿವಳಿಕೆಯನ್ನೂ ಒದಗಿಸಲಿದೆ.

ಇದೇ ವೇಳೆಯಲ್ಲಿ ನಕ್ಷತ್ರ ವೀಕ್ಷಣೆಯಲ್ಲಿ ಭಾಗಿಗಳಾಗುವವರು ಆಕಾಶದ ಸ್ಪಷ್ಟವಾದ ಗೋಚರತೆಯನ್ನು ಅವಲಂಬಿಸಿ ಸಂಜೆ 7.00ರಿಂದ ರಾತ್ರಿ 11.00 ಗಂಟೆಯ ನಡುವೆ ಆಯೋಜಿತವಾಗುವ ನಕ್ಷತ್ರ ವೀಕ್ಷಣಾ ಚಟುವಟಿಕೆಯಲ್ಲಿ ಪಾಲ್ಗೊಂಡು ಗ್ರಹಗಳ ಸಂಯೋಗವನ್ನು ನೇರವಾಗಿ ವೀಕ್ಷಿಸಬಹುದಾಗಿದೆ. ಕ್ಯಾಂಪಸ್‌ಗಳಲ್ಲಿ ಸ್ಥಾಪಿಸಲಾಗಿರುವ ಅತ್ಯಾಧುನಿಕ ದೂರದರ್ಶಕಗಳ ಮೂಲಕ ಬಾಹ್ಯಾಕಾಶ ಉತ್ಸಾಹಿಗಳಿಗೆ ಮತ್ತು ಮೊದಲ ಬಾರಿಗೆ ನಕ್ಷತ್ರವೀಕ್ಷಣೆಗೆ ಆಗಮಿಸಿರುವವರಿಬ್ಬರಿಗೂ ತಲ್ಲೀನಗೊಳ್ಳುವ, ಮಾರ್ಗದರ್ಶಕ ಅನುಭವವನ್ನು ಆರ್ಕಿಡ್ಸ್ ಒದಗಿಸಲಿದೆ.

ಆರ್ಕಿಡ್ಸ್ ದಿ ಇಂಟರ್‌ನ್ಯಾಶನಲ್ ಶಾಲೆಯ ಖಗೋಳವಿಭಾಗದ ಮುಖ್ಯಸ್ಥರಾದ ಅಜಿತ್ ಸಿಂಗ್ ಅವರು ಈ ಸಂದರ್ಭದಲ್ಲಿ ಮಾತನಾಡುತ್ತ, ನಕ್ಷತ್ರ ವೀಕ್ಷಣೆಯು ಕೇವಲ ಒಂದು ಚಟುವಟಿಕೆ ಮಾತ್ರವಲ್ಲ, ಬದಲಿಗೆ ಅದು ಬ್ರಹ್ಮಾಂಡದ ರಹಸ್ಯಗಳ ಪ್ರಪಂಚಕ್ಕೆ ಇಣುಕಿನೋಡಲು ನಮ್ಮ ವಿದ್ಯಾರ್ಥಿಗಳು ಮತ್ತು ಸಮುದಾಯಕ್ಕೆ ಒದಗಿದ ಒಂದು ಅವಕಾಶವಾಗಿದೆ.

ಈ ಅಪರೂಪದ ಗ್ರಹಸಂಯೋಗವು ಪ್ರೇರಣೆಯ ಆಕರವಾಗಿ ಮೂಡಿ ಕುತೂಹಲ ಮತ್ತು ಕಲಿಕೆಯ ಕಿಡಿಯನ್ನು ಹೊತ್ತಿಸಲಿದೆ. ಈ ಅಪರೂಪದ ಘಟನೆಯನ್ನು ಅನುಭವಿಸಲು ಹಾಗೂ ಅದರ ಮಹತ್ವವನ್ನು ಅರಿಯಲು ಎಲ್ಲ ವಿದ್ಯಾರ್ಥಿಗಳು ಮತ್ತು ಬಾಹ್ಯಾಕಾಶ ಉತ್ಸಾಹಿಗಳಿಗೆ ಅವಕಾಶವನ್ನೊದಗಿಸಿ ವಿಜ್ಞಾನ ಮತ್ತು ಅನ್ವೇಷಣೆಯ ಕಡೆಗಿನ ಉತ್ಸಾಹವನ್ನು ಆರ್ಕಿಡ್ಸ್ ಪೋಷಿಸಲಿದೆ ಎಂದು ಹೇಳಿದರು.

2040ರ ವರೆಗ ಘಟಿಸದ ಈ ಸಂಯೋಗವು ಬ್ರಹ್ಮಾಂಡದ ರಹಸ್ಯಗಳನ್ನು ಅನ್ವೇಷಿಸುವ ದೃಷ್ಟಿಯಿಂದ ಒಟ್ಟಾಗಿ ಸೇರುವ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಅಸಾಧಾರಣವಾದ ಅವಕಾಶವಾಗಿದೆ. ಆರ್ಕಿಡ್ಸ್ ನಕ್ಷತ್ರವೀಕ್ಷಣೆಯ ಈ ಉಪಕ್ರಮವನ್ನು ಕುತೂಹಲದ ಕಿಡಿಯನ್ನು ಹೊತ್ತಿಸುವ, ವೈಜ್ಞಾನಿಕ ತಿಳುವಳಿಕೆಯನ್ನು ಆಳವಾಗಿಸುವ ಮತ್ತು ಬಾಹ್ಯಾಕಾಶ ಅನ್ವೇಷಕರ ಭವಿಷ್ಯದ ತಲೆಮಾರುಗಳನ್ನು ಪ್ರೇರಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ.

Related Posts

Leave a Reply

Your email address will not be published. Required fields are marked *