ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆ, ಮನೆ ತೊರೆಯುವುದರ ಜೊತೆಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಯೇ ಸಾಲಗಾರರನ್ನು ಮನೆಯಿಂದ ಹೊರಗಟ್ಟಿ ಬೀಗ ಜಡಿಯುತ್ತಿದೆ.
ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದ ಮೌಲಾಸಾಬ ಬೂಕಟಗಾರ ಕುಟುಂಬ ಮತ್ತು ಗದಗ ಜಿಲ್ಲೆ ರೋಣದ ಶ್ಯಾನಭೋಗರ ಬಡಾವಣೆಯ ವೃದ್ಧೆ ಉಷಾದೇವಿಯನ್ನು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮನೆಯಿಂದ ಹೊರಗಟ್ಟಿ ಮನೆಗೆ ಬೀಗ ಹಾಕಿದೆ.
ಹಿರೇನರ್ತಿ ಗ್ರಾಮದ ಮೌಲಾಸಾಬ ಬೂಕಟಗಾರ ಕುಟುಂಬವನ್ನು ರಾತ್ರಿ ಮನೆಯಿಂದ ಹೊರಗಟ್ಟಲಾಗಿದೆ. ಮೌಲಾಸಾಬ ವಿವಿಧ ಖಾಸಗಿ ಫೈನಾನ್ಸ್ ಕಂಪನಿಗಳಲ್ಲಿ 22 ಲಕ್ಷ ಸಾಲ ಮಾಡಿದ್ದು, ಸಾಲ ವಸೂಲಿಗಾರರ ಕಾಟ ತಾಳದೇ ಕಳೆದ ಕೆಲವು ದಿನಗಳ ಹಿಂದೆ ಮನೆಬಿಟ್ಟು ಹೋಗಿದ್ದಾರೆ. ರಾತ್ರಿ ನಾಲೈದು ಜನ ಬಂದು ಮೌಲಾಸಾಬನ ತಾಯಿ, ಪತ್ನಿ, ಮಕ್ಕಳನ್ನು ಹೊರಗೆ ಹಾಕಿ ಮನಗೆ ಬೀಗ ಜಡಿದು ಗೆ ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ.
ಸಹೋದರನ ಅನಾರೋಗ್ಯ ಹಿನ್ನೆಲೆಯಲ್ಲಿ ಪಡೆದಿದ್ದ 10 ಸಾವಿರ ಸಾಲ ವಾಪಸ್ ನೀಡದ ಕಾರಣ ಸಾಲ ಕೊಟ್ಟ ವ್ಯಕ್ತಿ ವೃದ್ಧೆ ಉಷಾದೇವಿಯನ್ನು ಮನೆಯಿಂದ ಹೊರಗಟ್ಟಿ ಬೀಗ ಹಾಕಿದ್ದಾರೆ. ಶ್ಯಾನ ಭೋಗರ ಬಡಾವಣೆ ನಿವಾಸಿ ಉಷಾದೇವಿ 14 ತಿಂಗಳ ಹಿಂದೆ ಲಾರಿ ಚಾಲಕ ಮೌಲಾಸಾಬ್ ಬೇಟಗೇರಿ ಬಳಿ ₹10 ಸಾವಿರ ಸಾಲ ಪಡೆದಿದ್ದರು. ಎರಡು ಕುಟುಂಬ ಮಧ್ಯೆ ಮಾತಿನ ಚಕಮಕಿ ನಡೆದು, ಮೌಲಾಸಾಬ ಬಾಂಡ್ ಬರೆದು ಕೊಡಿ, ಇಲ್ಲ ಮನೆ ಖಾಲಿ ಮಾಡಿ ಎಂದು ಮನೆಯಿಂದ ಹೊರ ಹಾಕಿ ಮನೆಗೆ ಬೀಗ ಹಾಕಿದ್ದಾರೆ. ಪೊಲೀಸರು ಮನೆಗೆ ಹಾಕಿದ್ದ ಬೀಗ ತೆಗೆಸಿ ಮನೆಯಲ್ಲಿ ವಾಸಿಸಲು ಉಷಾದೇವಿಗೆ ವ್ಯವಸ್ಥೆ ಕಲ್ಪಿಸಿದ್ದಾರೆ.