10 ಕೋಟಿ ನಕಲಿ ಮತದಾರರನ್ನು ಹೊರಹಾಕಲಾಗಿದ್ದು, ಅರ್ಹ ಭಾರತೀಯರಿಗೆ ನೇರವಾಗಿ ಸರ್ಕಾರಿ ಸೌಲಭ್ಯಗಳು ತಲುಪಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಗಳವಾರ ರಾಷ್ಟ್ರಪತಿ ಭಾಷಣದ ಮೇಲೆ ಅಭಿನಂದನಾ ಭಾಷಣ ಮಾಡಿದ ಅವರು, ದೇಶದಲ್ಲಿ 10 ಕೋಟಿ ನಕಲಿ ಮತದಾರರನ್ನು ಪಟ್ಟಿಯಿಂದ ಹೊರಹಾಕಲಾಗಿದೆ. ಇದರಿಂದ 3 ಲಕ್ಷ ಕೋಟಿ ರೂ. ಅಕ್ರಮವಾಗಿ ಅನರ್ಹರ ಪಾಲಾಗುತ್ತಿದ್ದ ಹಣ ರಕ್ಷಿಸಲಾಗಿದೆ ಎಂದರು.
ಬಡವರ ಬಗ್ಗೆ ಮಾತನಾಡುತ್ತಿದ್ದರೆ ಕೆಲವರಿಗೆ ಬೋರಿಂಗ್ ಆಗಿ ಕಾಣುತ್ತದೆ. ಕೆಲವರಿಗೆ ಶಿಷ್ಟಾಚಾರದ ಕೊರತೆ ಇದೆ ಎಂದು ಅವರು ಪರೋಕ್ಷವಾಗಿ ರಾಹುಲ್ ಗಾಂಧಿ ಮತ್ತು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ತಿರುಗೇಟು ನೀಡಿದರು.
ಜನರ ಜನರಿಗೆ ಎಂಬುದು ನಮ್ಮ ನಿಲುವು. ಈ ಹಿನ್ನೆಲೆಯಲ್ಲಿ ನೇರವಾಗಿ ಜನರಿಗೆ ಸರ್ಕಾರದ ಹಣ ತಲುಪುತ್ತಿದೆ. ಹಿಂದೆ ಮಾಜಿ ಪ್ರಧಾನಿಯೊಬ್ಬರು 1 ರೂ. ಬಿಡುಗಡೆ ಮಾಡಿದರೆ ಜನರಿಗೆ 15 ಪೈಸೆ ತಲುಪುತ್ತದೆ ಎಂದು ಹೇಳಿದ್ದರು. ಆದರೆ ನಾವು ಪೂರ್ಣ 1 ರೂ. ತಲುಪಿಸುತ್ತಿದ್ದೇವೆ ಎಂದು ಹೇಳಿದರು.
ಇದುವರೆಗೆ ದೇಶದಲ್ಲಿ 4 ಕೋಟಿ ಜನರಿಗೆ ವಸತಿ ನೀಡಲಾಗಿದೆ. ಸೂರ್ಯಘರ್ ಯೋಜನೆಯಿಂದ 35 ಸಾವಿರಿಂದ 40 ಸಾವಿರ ಜನರಿಗೆ ಉಳಿತಾಯ ಮಾಡಿಕೊಡಲಿದ್ದೇವೆ ಎಂದು ಅವರು ಹೇಳಿದರು.