Tuesday, February 04, 2025
Menu

ಜಿಎಸ್ ಎಂಎ ಮಂಡಳಿಯ ಪ್ರಭಾರ ಚೇರ್ಮನ್ ಆಗಿ ಗೋಪಾಲ್ ವಿಠಲ್ ನೇಮಕ!

ನವದೆಹಲಿ: ಭಾರ್ತಿ ಏರ್‌ಟೆಲ್ನ ವೈಸ್ ಚೇರ್ಮನ್ ಹಾಗೂ ಎಮ್‌ಡಿ ಮತ್ತು ಜಿಎಸ್ ಎಂಎ ಡೆಪ್ಯುಟಿ ಚೇರ್ಮನ್ ಆಗಿರುವ ಗೋಪಾಲ್ ವಿಠಲ್ ಅವರನ್ನು, ಜಿಎಸ್ ಎಂಎ ಪ್ರಭಾರ ಚೇರ್ಮನ್ ಆಗಿ ನೇಮಕ ಮಾಡಲಾಗಿದೆ.

ಜೋಸ್ ಮಾರಿಯಾ ಅಲ್ವರಿಸ್-ಪಲ್ಲೆಟ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅವರು ಜಿಎಸ್ ಎಂಎ ಜಿಎಸ್ ಎಂಎ ಪ್ರಭಾರ ಚೇರ್ಮನ್ ಆಗಿ ಗೋಪಾಲ್ ವಿಠಲ್ ಅವರನ್ನು ನೇಮಿಸಲಾಗಿದೆ.

ಗೋಪಾಲ್ ಇತ್ತೀಚೆಗೆ GSMA ಮಂಡಳಿಯ ಡೆಪ್ಯುಟಿ ಚೇರ್ಮನ್ ಆಗಿ ಮರುಚುನಾಯಿತರಾಗಿದ್ದರು. ಅವರು 2019-2020 ಅವಧಿಗಾಗಿ ಮಂಡಳಿಯ ಪ್ರಮುಖ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಟೆಲಿಕಾಮ್ ಸರ್ವಿಸ್ ಪ್ರೊವೈಡರ್ಸ್, ಹ್ಯಾಂಡ್‌ಸೆಟ್ ಮತ್ತು ಸಾಧನ ತಯಾರಕರು, ಸಾಫ್ಟ್‌ವೇರ್ ಸಂಸ್ಥೆಗಳು, ಪರಿಕರ ಪ್ರೊವೈಡರ್‌ಗಳು ಮತ್ತು ಇಂಟರ್‌ನೆಟ್ ಸಂಸ್ಥೆಗಳಲ್ಲದೆ ಅದಕ್ಕೆ ಹೊಂದಿಕೊಂಡ ಉದ್ದಿಮೆ ಕ್ಷೇತ್ರಗಳ ಸಂಸ್ಥೆಗಳೂ ಒಳಗೊಂಡಂತೆ, ಜಗತ್ತಿನಾದ್ಯಂತ ಇರುವ ದೂರಸಂಪರ್ಕ(ಟೆಲಿಕಾಮ್) ಪರಿಸರವ್ಯವಸ್ಥೆಯ 1100 ಹೆಚ್ಚಿನ ಸಂಸ್ಥೆಗಳಿರುವ ಜಾಗತಿಕ ದೂರಸಂವಹ ಉದ್ದಿಮೆಯನ್ನು GSMA ಪ್ರತಿನಿಧಿಸುತ್ತದೆ.

Related Posts

Leave a Reply

Your email address will not be published. Required fields are marked *