ಅಕ್ರಮವಾಗಿ ಅಮೆರಿಕಕ್ಕೆ ವಲಸೆ ಹೋಗಿದ್ದ 205 ಭಾರತೀಯರನ್ನು ಸೇನಾ ವಿಮಾನದ ಮೂಲಕ ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ.
ಟೆಕ್ಸಾಸ್ ನಿಂದ ಸೋಮವಾರ ರಾತ್ರಿ ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ವಿಮಾನ ಭಾರತದ ಕಡೆ ಹೊರಟಿದೆ. ಅಕ್ರಮ ವಲಸಿಗರ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದು, ಇವರ ವಲಸೆ ಹಿಂದೆ ದೆಹಲಿ ಕೈವಾಡವಿದೆ ಎಂದು ಹೇಳಿದೆ.
ಅಕ್ರಮ ವಲಸಿಗರನ್ನು ಸ್ವದೇಶಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಭಾರತೀಯರನ್ನು ಸ್ವದೇಶಕ್ಕೆ ಕಳುಹಿಸಲಾಗುತ್ತಿದೆ. ಮೊದಲ ಹಂತದಲ್ಲಿ 205 ಭಾರತೀಯರನ್ನು ಭಾರತಕ್ಕೆ ಕಳುಹಿಸಿಕೊಡಲಾಗುತ್ತಿದೆ.
ಅಕ್ರಮ ವಲಸಿಗರನ್ನು ಹೊತ್ತ ವಾಯುಪಡೆಯ ಎಸಿ 17 ವಿಮಾನ ಸೋಮವಾರ ರಾತ್ರಿ ಹೊರಟಿದ್ದು, ಮಂಗಳವಾರ ಸಂಜೆ ಅಥವಾ ರಾತ್ರಿ ಭಾರತಕ್ಕೆ ಮರಳುವ ಸಾಧ್ಯತೆ ಇದೆ.