ಶೇಷಾದ್ರಿಪುರಂ ಠಾಣೆ ಕಾನ್‌ಸ್ಟೇಬಲ್ ಮನೋಜ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ. ವಿಧವೆಯಾಗಿದ್ದ ಸಂತ್ರಸ್ತೆಯನ್ನು ಮನೋಜ್ 2024ರ ನ.28 ರಂದು ಮದುವೆ ಆಗಿದ್ದರು.
ಮದುವೆಯಾಗಿ ಕ್ವಾಟ್ರಸ್‌ಗೆ ಆಕೆಯನ್ನು ಕರೆ ತಂದಾಗ ಕುಟುಂಬಸ್ಥರು ಅವಾಚ್ಯವಾಗಿ ನಿಂದಿಸಿದ್ದರು. ಬೇರೆಯವರನ್ನು ಮದುವೆಯಾಗಿದ್ದರೆ ವರದಕ್ಷಿಣೆ ಸಿಗುತ್ತಿತ್ತು. ನೀನು ಎರಡು ಮಕ್ಕಳ ತಾಯಿ ಎಂದು ಗಲಾಟೆ ಮಾಡಿದ್ದಾರೆ ಎಂದೂ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಕೆಲವು ದಿನದ ನಂತರ ಯಾವಾಗಲೂ ಮೊಬೈಲ್‌ನಲ್ಲಿ ಪತಿ ಮನೋಜ್ ಬ್ಯುಸಿಯಾಗಿರ್ತಿದ್ದ. ಕೇಳಿದ್ದಕ್ಕೆ ಪತ್ನಿ ಮೇಲೆ ಹಲ್ಲೆ ಮಾಡಿದ್ದ. ಆಕೆ ಮನೋಜ್ ಅವರ ಮೊಬೈಲ್ ಚೆಕ್ ಮಾಡಿದಾಗ ಬೇರೆ ಮಹಿಳೆಯರ ಜೊತೆ ಗಿದ್ದ ವೀಡಿಯೊ, ಫೋಟೊಗಳು ಪತ್ತೆಯಾಗಿವೆ. ಪ್ರಶ್ನಿಸಿದಾಗ ಮತ್ತೆ ಹಲ್ಲೆ ಮಾಡಿ ಪತ್ನಿಯ ಕೈ ಮುರಿದಿದ್ದು, ಪತಿ ಮನೋಜ್ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದಾರೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
2016 ರಲ್ಲಿ ಆಕೆಯ ಪತಿ ಕೊಲೆಯಾಗಿದ್ದು, ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಪ್ರಕರಣ ಸಂಬಂಧ ಠಾಣೆಗೆ ಸಂತ್ರಸ್ತೆ ಭೇಟಿ ನೀಡಿದ್ದಾಗ ಕಾನ್ಸ್ಟೇಬಲ್ ಮನೋಜ್ ನಂಬರ್ ಕೇಳಿ ಪಡೆದು ನಂತರ ಮದುವೆಯಾಗಿದ್ದರು.