ರಾಷ್ಟ್ರಪತಿ ಭವನ ಇದೇ ಮೊದಲ ಬಾರಿ ಮದುವೆ ಸಮಾರಂಭಕ್ಕೆ ಸಜ್ಜುಗೊಂಡು ಸುದ್ದಿಯಾಗುತ್ತಿದೆ. ರಾಷ್ಟ್ರಪತಿ ಭವನದ ಪಿಎಸ್‌ಒ ಆಗಿರುವ ಸಿಆರ್‌ಪಿಎಫ್ ಅಸಿಸ್ಟಂಟ್ ಕಮಾಂಡೆಂಟ್ ಪೂನಂ ಗುಪ್ತಾ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಮದುವೆಯಾಗುವ ಅಪರೂಪದ ಅದೃಷ್ಟ ಒಲಿದುಬಂದಿದೆ.
ರಾಷ್ಟ್ರಪತಿ ಭವನದಲ್ಲಿರುವ ಮದರ್ ಥೆರೆಸಾ ಕ್ರೌನ್ ಕಾಂಪ್ಲೆಕ್ಸ್‌ನಲ್ಲಿ ಫೆಬ್ರವರಿ 12ರಂದು ಮದುವೆಯಾಗುವುದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪೂನಂಗೆ ವಿಶೇಷ ಅನುಮತಿ ನೀಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಅವನೀಶ್ ಜೊತೆ ಪೂನಂ ಗುಪ್ತಾ ಮದುವೆ ನಡೆಯಲಿದೆ.
ರಾಷ್ಟ್ರಪತಿ ಭವನದಲ್ಲಿ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ (ಪಿಎಸ್‌ಒ) ಸೇವೆ ಸಲ್ಲಿಸುತ್ತಿರುವ ಪೂನಂ ಗುಪ್ತಾ 74ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸಂಪೂರ್ಣ ಮಹಿಳಾ ತುಕಡಿಯನ್ನು ನಿರ್ವಹಿಸಿದ್ದರು. ಗಣಿತ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಪೂನಂ ಗ್ವಾಲಿಯರ್‌ನ ಜಿವಾಜಿ ವಿಶ್ವವಿದ್ಯಾಲಯದಿಂದ ಬಿಎಡ್ ಪದವಿ ಪಡೆದುಕೊಂಡಿದ್ದಾರೆ. 2018ರ ಯುಪಿಎಸ್‌ಸಿ ಸಿಆರ್‌ಪಿಎಫ್ ಪರೀಕ್ಷೆಯಲ್ಲಿ 81ನೇ ರ‍್ಯಾಂಕ್ ಗಳಿಸಿದ್ದಾರೆ.
ಬಿಹಾರದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದ ಪೂನಂ.ಸೋಷಿಯಲ್ ಮೀಡಿಯಾದಲ್ಲೂ ಅಭಿಮಾನಿ ಬಳಗ ಹೊಂದಿದ್ದಾರೆ.