ದೂರದೃಷ್ಟಿ ರಹಿತ, ನಿರಾಶಾದಾಯಕ ಬಜೆಟ್ ಆಗಿದ್ದು, ಇದು ಕರ್ನಾಟಕ ವಿರೋಧಿ ಬಜೆಟ್ ಆಗಿದೆ. ಕರ್ನಾಟಕಕ್ಕೆ ಚೊಂಬು ಕೊಡುವುದನ್ನು ಮುಂದುವರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸಲ್ಲಿಸಿದ ಬೇಡಿಕೆ ಪಟ್ಟಿಯಲ್ಲಿ ಒಂದೂ ಈಡೇರಿಸಿಲ್ಲ. ಕೇಂದ್ರಕ್ಕೆ ತೆರಿಗೆ ಅತೀ ಹೆಚ್ಚು ತೆರಿಗೆಪಾವತಿಸುವ ರಾಜ್ಯವಾದ ಕರ್ನಾಟಕಕ್ಕೆ ಒಂದೂ ಯೋಜನೆ ಕೊಟ್ಟಿಲ್ಲ ಎಂದರು.
ಮೇಕೆದಾಟು, ತುಂಗಭದ್ರ, ಮಹದಾಯಿ, ಕೃಷ್ಣ ಯೋಜನೆ ಸೇರಿದಂತೆ ಯಾವುದೇ ಯೋಜನೆ ಪರಿಗಣಿಸಿಲ್ಲ. ಕೃಷ್ಣ ಮೇಲ್ದಂಡೆ ಯೋಜನೆಗೆ 5300 ಕಳೆದ ಬಜೆಟ್ ನಲ್ಲಿ ಘೋಷಿಸಿದ್ದರೂ ಇದುವರೆಗೂ ಒಂದೂ ರೂಪಾಯಿ ಬಂದಿಲ್ಲ. ಈ ಬಜೆಟ್ ನಲ್ಲೂ ಪ್ರಸ್ತಾಪವಾಗಿಲ್ಲ ಎಂದು ವರು ಹೇಳಿದರು.
ರಾಜಸ್ಥಾನ ನಂತರ ಅತೀ ಹೆಚ್ಚು ಒಣಭೂಮಿ ಇರುವ ಕರ್ನಾಟಕ ರಾಜ್ಯದಲ್ಲಿ ನೀರಾವರಿ ಯೋಜನೆಗೆ ಹೆಚ್ಚು ಹಣ ನೀಡಬೇಕಿತ್ತು. ಬಸವರಾಜ ಬೊಮ್ಮಾಯಿ ಕಾಲದಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಹಾಗೂ ಮಹದಾಯಿ ಯೋಜನೆ ರಾಷ್ಟ್ರೀಯ ಯೋಜನೆ ಪ್ರಕಟಿಸುತ್ತೇವೆ ಎಂದು ಹೇಳಿದ್ದರು. ಆದರೆ ಯಾವುದೇ ಯೋಜನೆಗೆ ನಯಾ ಪೈಸೆ ನೀಡಿಲ್ಲ ಎಂದು ಸಿದ್ದರಾಮಯ್ಯ ವಿವರಿಸಿದರು.
ಬಜೆಟ್ ಗಾತ್ರ 57.56 ಲಕ್ಷ ಕೋಟಿ ಇದ್ದಿದ್ದು, 50.56 ಲಕ್ಷ ಸಾವಿರ ಕೋಟಿಗೆ ಇಳಿಕೆಯಾಗಿದೆ. ಕೇಂದ್ರ ಈ ಬಾರಿ 15,68,936 ಕೋಟಿ ರೂ. ಸಾಲ ತೋರಿಸಿದೆ. ಇದು ಒಟ್ಟಾರೆ ಬಜೆಟ್ ನ ಶೇ.30ರಷ್ಟು ಆಗಿದೆ. ಸಾಲದ ಮೇಲಿನ ಬಡ್ಡಿ ಕಟ್ಟಲು 12,700 ಕೋಟಿ ರೂ. ಪಾವತಿಸಲಿದೆ. ಇದು ಶೇ.12.7ರಷ್ಟು ಆಗಿದೆ ಎಂದು ಅವರು ಹೇಳಿದರು.
ಮೋದಿ ಸರ್ಕಾರ ಬಂದ ಮೇಲೆ ಇದುವರೆಗಿನ ಒಟ್ಟಾರೆ ಸಾಲ 202 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ವಿತ್ತ ಕೊರತೆ 4.4 ಆದಾಯ ಕೊರತೆ ಶೇ. 1.5 ಆಗಿದೆ. ಇದು