ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2025-26ನೇ ಸಾಲಿನ ಬಜೆಟ್ ಜನತಾ ಜನಾರ್ದನ ಪರ ಬಜೆಟ್ ಆಗಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
ಶನಿವಾರ ಬಜೆಟ್ ಮಂಡನೆ ನಂತರ ಮಾಧ್ಯಮ ಪ್ರತಿಕ್ರಿಯೆ ಬಿಡುಗಡೆ ಮಾಡಿದ ಅವರು, ಈ ಬಾರಿಯ ಬಜೆಟ್ ದೇಶದ ಅಭಿವೃದ್ಧಿ ವೇಗವನ್ನು ಹೆಚ್ಚಿಸಲಿದೆ ಎಂದು ಹೇಳಿದ್ದಾರೆ.
ದೇಶಾದ್ಯಂತ ಪ್ರವಾಸಿ ತಾಣಗಳ ಅಭಿವೃದ್ಧಿಯಿಂದ ಸಾಕಷ್ಟು ಸಂಖ್ಯೆಯಲ್ಲಿ ಹೋಟೆಲ್, ಮೂಲಸೌಕರ್ಯ ಅಭಿವೃದ್ಧಿಗಳಿಂದ ಉದ್ಯೋಗ ಸೃಷ್ಟಿ ಆಗಲಿದೆ. ಅಲ್ಲದೇ ಸ್ಥಳೀಯ ಮಟ್ಟದಲ್ಲಿ ಅಭಿವೃದ್ಧಿ ಆಗಲಿವೆ ಎಂದರು.
ದೇಶದ ಜನರ ಜೇಬು ಹೇಗೆ ತುಂಬಿಸುವುದು. ಹೇಗೆ? ಉಳಿತಾಯ ಹೇಗೆ? ದೇಶದ ವಿಕಾಸದಲ್ಲಿ ಜನರು ಭಾಗಿ ಹೇಗೆ ಆಗುತ್ತಾರೆ ಎಂಬುದಕ್ಕೆ ಈ ಬಜೆಟ್ ಉತ್ತಮ ಉದಾಹರಣೆ ಆಗಿದೆ ಎಂದು ಅವರು ಹೇಳಿದರು.