Saturday, February 01, 2025
Menu

ಬಜೆಟ್‌ನಲ್ಲಿ ಯಾವುದು ಅಗ್ಗ, ಯಾವುದು ತುಟ್ಟಿ

ಸಂಸತ್ತಿನಲ್ಲಿ ವಿಪಕ್ಷಗಳ ಗದ್ದಲದ ಮಧ್ಯೆಯೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 2025-26 ನೇ ಕೇಂದ್ರ ಬಜೆಟ್‌ ಮಂಡಿಸಿದ್ದು, 2047ಕ್ಕೆ ಬಡತನ ಮುಕ್ತ ಭಾರತ ನಿರ್ಮಾಣದ ಗುರಿ ಇದೆ ಎಂದು ಹೇಳಿದ್ದಾರೆ.

ಕೃಷಿ ಮತ್ತು ರೈತರ ಕಲ್ಯಾಣಕ್ಕೆ ಒತ್ತು ನೀಡುವುದಾಗಿ ಹೇಳಿದ ಅವರು ಬಡತವನ್ನು ನಿರ್ಮೂಲನೆಗೊಳಿಸಿ, ಗುಣಮಟ್ಟದ ಜೀವನಶೈಲಿಗೆ ಆದ್ಯತೆ, ಕೌಶಲ್ಯಾಭಿವೃದ್ಧಿ, ಉದ್ಯೋಗ ಸೃಷ್ಟಿ, ಮಹಿಳಾ, ಮಕ್ಕಳ ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಗಮನ ಹರಿಸಿ ಬಜೆಟ್‌ ಮಂಡಿಸುತ್ತಿರುವುದಾಗಿ ಹೇಳಿದ್ದಾರೆ.

ಈ ಬಾರಿ ಬಜೆಟ್‌ನಲ್ಲಿ ಯಾವ ವಸ್ತುಗಳ ಸರಕು, ಸೇವೆಗಳ ದರ ತಗ್ಗಿದೆ; ಮೊಬೈಲ್‌, ಎಲೆಕ್ಟ್ರಿಕ್‌ ವಾಹನಗಳು, ಕ್ಯಾನ್ಸರ್‌ ಔಷಧಿ, ಸ್ವದೇಶಿ ಬಟ್ಟೆಗಳು, ಎಲ್‌ಇಡಿ ಟಿವಿ.

ದರ ಹೆಚ್ಚಳಗೊಂಡಿರುವ ಸೇವೆ ಮತ್ತು ಸರಕುಗಳು; ಪ್ಯಾನಲ್‌ ಡಿಸ್‌ಪಲೇ ಮೇಲಿನ ಕಸ್ಟಮ್ಸ್‌ ಸುಂಕ ಶೇ10ರಿಂದ ಶೇ20 ಹೆಚ್ಚಳ, ಪ್ಲಾಸ್ಟಿಕ್‌ ಉಪಕರಣಗಳ ಕಸ್ಟಮ್ಸ್‌ ಸುಂಕ ಶೇ 25ರಷ್ಟು ಏರಿಕೆ, ಟೆಲಿಕಾಂ ಉಪಕರಣಗಳ ಕಸ್ಟಮ್ಸ್‌ ಸುಂಕ ಶೇ 10ರಿಂದ ಶೇ 15ರಷ್ಟು ಹೆಚ್ಚಾಗಿದೆ.

Related Posts

Leave a Reply

Your email address will not be published. Required fields are marked *