2023ರಲ್ಲಿ ಪೆರು ಸೇರಿದಂತೆ ಆಫ್ರಿಕಾ ದೇಶಗಳಲ್ಲಿ ಕಾಣಿಸಿಕೊಂಡಿದ್ದ ಗುಲ್ಲೆನ್ ಬಾರ್ ಸಿಂಡ್ರೋಮ್ ಎಂಬ ಮಾರಣಾಂತಿಕ ರೋಗ ಇದೀಗ ಭಾರತದಲ್ಲಿ ಹೆಚ್ಚಾಗುತ್ತಿದ್ದು, ಆತಂಕ ತಂದೊಡ್ಡಿದೆ.
ಸೋಲಾಪುರದ ವ್ಯಕ್ತಿ ಪುಣೆಯಲ್ಲಿ ಗುಲ್ಲೆನ್ ಬಾರ್ ಸಿಂಡ್ರೋಮ್ ಆರೋಗ್ಯ ಸಮಸ್ಯೆಗೆ ಬಲಿಯಾದ ಮೊದಲಿಗರು. ಪುಣೆಯಲ್ಲಿ ಗುಲ್ಲೆನ್ ಬಾರ್ ಸಿಂಡ್ರೋಮ್ ಪ್ರಕರಣ ಸಂಖ್ಯೆ 101ಕ್ಕೆ ಏರಿಕೆಯಾಗಿದೆ. 28 ಪ್ರಕರಣಗಳು ಖಚಿತಗೊಂಡಿದೆ.
ಇವರಲ್ಲಿ 16 ರೋಗಿಗಳು ವೆಂಟಿಲೇಟರ್ ಸಹಾಯದಲ್ಲಿದ್ದಾರೆ. 19 ಪ್ರಕರಣಗಳು 9 ವರ್ಷಕ್ಕಿಂತ ಕೆಳಗಿನವರಲ್ಲಿ , 23 ಪ್ರಕರಣ 50 ರಿಂದ 80 ವರ್ಷದವರಲ್ಲಿ ಪತ್ತೆಯಾಗಿದೆ. ಜನವರಿ 9 ರಂದು ಪುಣೆಯಲ್ಲಿ ಗುಲ್ಲೆನ್ ಬಾರ್ ಸಿಂಡ್ರೋಮ್ ರೋಗದ ಪ್ರಕರಣ ಬೆಳಕಿಗೆ ಬಂದಿತ್ತು.
ಗುಲ್ಲೆನ್ ಬಾರ್ ಸಿಂಡ್ರೋಮ್ ಪ್ರಮುಖವಾಗಿ ಮೆದುಳು ಹಾಗೂ ಬೆನ್ನು ಹುರಿ ನರಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ರೋಗ ಕಾಣಿಸಿಕೊಂಡವರಲ್ಲಿ ರೋಗ ಪ್ರತಿರೋಧ ಶಕ್ತಿ ಕುಂದಲಿದೆ. ಪ್ರಮುಖವಾಗಿ ಮೆದುಳು ಹಾಗೂ ಬೆನ್ನು ಹುರಿ ನರಗಳು ಶಕ್ತಿಹೀನವಾಗಲಿದೆ. ತೀವ್ರ ಅಸ್ವಸ್ಥತೆ ಕಾಣಿಸಿಕೊಂಡು, ತಾತ್ಕಾ ಲಿಕ ಪಾರ್ಶ್ವವಾಯು ಅಥವಾ ದೌರ್ಬಲ್ಯಕ್ಕೆ ದಾರಿ ಮಾಡಿ ಕೊಡುತ್ತದೆ. ಎದೆಯ ಸ್ನಾಯುಗಳ ಮೇಲೆ ಈ ಸಮಸ್ಯೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಎದೆ ಸ್ನಾಯು ಸಮಸ್ಯೆಯಿಂದ ಉಸಿರಾಟದ ಸಮಸ್ಯೆಗಳು ಕಾಣಿಸುವುದು.
ಇದು ಅ ಮಾರಣಾಂತಿಕವಾಗಿದ್ದರೂ ಸೂಕ್ತ ಚಿಕಿತ್ಸೆ ಮೂಲಕ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಸ್ನಾಯು ದೌರ್ಬಲ್ಯ, ತಾತ್ಕಾಲಿಕ ಪಾರ್ಶ್ವವಾಯು ಸೇರಿದಂತೆ ಇತರ ಕೆಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ. ಗುಲ್ಲೆನ್ ಬಾರ್ ಸಿಂಡ್ರೋಮ್‌ನಿಂದ ಆಗುವ ಪಾರ್ಶ್ವವಾಯು ಸಮಸ್ಯೆಗಳು ನಿಧಾನವಾಗಿ ಚಿಕಿತ್ಸೆ ಯಿಂದ ಗುಣಪಡಿಸಲು ಸಾಧ್ಯವಿದೆ. ಮಕ್ಕಳಲ್ಲಿ ಈ ಗುಲ್ಲೆನ್ ಬಾರ್ ಸಿಂಡ್ರೋಮ್ ನಿಂದ ಉಸಿರಾಟ ಸಮಸ್ಯೆ, ನಡೆಯಲು ಸಾಧ್ಯವಾಗದ ಪರಿಸ್ಥಿತಿ, ಕೈ ಕಾಲು ನೋವು, ಮುಖ, ಕುತ್ತಿಗೆ ಭಾಗದ ನೌರಗಳ ದೌ್ಬರ್ಲ್ಯ ಸೇರಿದಂತೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.


