ದಾವಣಗೆರೆ: ಹಾರರ್, ಸಸ್ಪೆನ್ಸ್, ಥಿಲ್ಲರ್, ಆಕ್ಷನ್, ಅಡ್ವೆಂಚರಸ್ ಡ್ರಾಮಾ, ಹೀಗೆ ಎಲ್ಲಾ ರೀತಿಯ ಮನರಂಜನಾತ್ಮಕ ಅಂಶಗಳನ್ನು ಒಳಗೊಂಡಿರುವ ‘ಘಾರ್ಗಾ’ ಸಿನಿಮಾ ಫೆಬ್ರವರಿ 6 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದು ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎ.ಆರ್.ಸಿ. ಮ್ಯೂಸಿಕ್ ಪ್ರವೈಟ್ ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾದ ಚಲನಚಿತ್ರದ ನಿರ್ದೇಶಕರಾಗಿ ಎಂ.ಶಶಿಧರ್ ಕಾರ್ಯ ನಿರ್ವಹಣೆ ಮಾಡಿದ್ದು, ಗುರುಕಿರಣ್ ಮತ್ತು ಆರ್.ಪಿ.ಪಟ್ನಾಯಕ್ ಸಂಗೀತ ನೀಡಿದ್ದು, ಥ್ರಿಲ್ಲರ್ ಮಂಜು ಮತ್ತು ಜಾಲಿ ಬಾಸ್ಟೀನ್ ಸಾಹಸ ನಿರ್ದೇಶನ ಮಾಡಿದ್ದಾರೆ.
ಸಾಹಿತ್ಯವನ್ನು ವಿ.ನಾಗೇಂದ್ರ ಪ್ರಸಾದ್ ಮತ್ತು ಎ.ಪಿ.ಅರ್ಜುನ್ ಬರೆದಿದ್ದಾರೆ. ನಾಯಕ ನಟ ಅರುಣ್ ರಾಮ್ ಪ್ರಸಾದ್ ಮಾತನಾಡಿ, ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ ಮೊದಲಾದ ಚಿತ್ರಗಳ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ನಿರ್ಮಾಣದ ಬಹು ನಿರೀಕ್ಷಿತ ಚಿತ್ರ ಘಾರ್ಗಾ. ಅವರ ಪುತ್ರನಾದ ನಾನು ಅರುಣ್ ರಾಮ್ ಪ್ರಸಾದ್ ಈ ಚಿತ್ರದ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದೇನೆ.
ಫಾರ್ಗಾ ಒಂದು ಊರಿನ ಹೆಸರಾಗಿದ್ದು, ದ ಲ್ಯಾಂಡ್ ಆಫ್ ಶಾಡೋ ಎಂಬ ಅಡಿಬರಹ ಚಿತ್ರಕ್ಕಿದೆ ಎಂದು ಹೇಳಿದರು. ಪ್ರಮುಖ ಪಾತ್ರದಲ್ಲಿ ಸಾಯಿಕುಮಾರ್ ಹಾಗೂ ನಾಯಕಿ ಪಾತ್ರದಲ್ಲಿ ರಿಹಾನ ಅಭಿನಯಿಸಿದ್ದಾರೆ. ಎಂ. ಶಶಿಧರ್ ಈ ಚಿತ್ರದ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಮಂಗಳೂರು, ಚಿಕ್ಕಮಗಳೂರು, ದಾಂಡೇಲಿ, ಆಗುಂಬೆ ಗಳಲ್ಲಿ ನ್ಯಾಚುರಲ್ ಚಿತ್ರೀಕರಣ ಮಾಡಿದ್ದು ಬೆಂಗಳೂರಲ್ಲಿ ಮಾತ್ರ ಸೆಟ್ನಲ್ಲಿ ಚಿತ್ರೀಕರಿಸಲಾಗಿದೆ.
ಮೋಹನ್ ಮತ್ತು ವರುಣ್ ಅವರ ನೃತ್ಯ, ವಿ.ನಾಗೇಂದ್ರ ಪ್ರಸಾದ್, ಶಂಕರ್, ಚೇತನ್ ಕುಮಾರ್ ಅವರ ಸಂಭಾಷಣೆ ಈ ಚಿತ್ರಕ್ಕೆ ಇದೆ. ಗುರು ಪ್ರಸಾದ್ ನರ್ನಾದ್ ಕ್ಯಾಮೆರಾ ಹಿಡಿದು ಛಾಯಾಗ್ರಹಣ ಮಾಡಿದ್ದಾರೆ ತಾರಾಂಗಣದಲ್ಲಿ ಅರುಣ್ ಸಾಗರ್, ರಾಮ್ ಪ್ರಸಾದ್, ರಿಹಾನ, ಸಾಯಿಕುಮಾರ್, ರಾಹುಲ್ ದೇವ್, ದೇವ್ಗಿಲ್, ಶರವಣ್ ರಾಘವೇಂದ್ರ, ಅರುಣ್ ಸಾಗರ್, ಮಿತ್ರ, ಮುಂತಾದವರು ನಟಿಸಿದ್ದಾರೆ.


