ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿದೆ. ರಾಜಶೇಖರಪ್ಪ ಚಿರತೆ ದಾಳಿಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ದಾಳಿಯಿಂದ ಅವರ ಮುಖ ಹಾಗೂ ಕತ್ತಿನ ಭಾಗಕ್ಕೆ ಗಾಯಗಳಾಗಿವೆ. ಧೈರ್ಯದಿಂದ ಚಿರತೆ ದಾಳಿಯನ್ನು ಎದುರಿಸಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಿದ್ದು, ಸೆರೆಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಬಳಿ ಚಿರತೆ ಮೇಕೆಯನ್ನು ಹೊತ್ತೊಯ್ದ ಸ್ಥಳದಲ್ಲಿ ಕೂಂಬಿಂಗ್ ನಡೆಸುವಾಗ ಅರಣ್ಯ ಇಲಾಖೆಯ ಆನೆ ಕಾವಲುಪಡೆ ಸಿಬ್ಬಂದಿ ಬಂಗಾರ್ ಎಂಬವವರ ಮೇಲೆ ಚಿರತೆ ದಾಳಿ ನಡೆಸಿದ್ದು ಕತ್ತು, ತಲೆ, ಕೈ ಗಳನ್ನು ಗಾಯಗೊಳಿಸಿದೆ.
ಮೇಕೆಯನ್ನು ಹೊತ್ತೊಯ್ದ ಸಂದರ್ಭದಲ್ಲಿ ರೈತರು ಅರಣ್ಯಾದಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಅನೆ ಕಾವಲು ಪಡೆಯ ಸಿಬ್ಬಂದಿ ತೆರಳಿ ಮೇಕೆಯನ್ನು ಹೊತ್ತೊಯ್ದ ಸ್ಥಳದಲ್ಲಿ ಕೂಗಾಡಿ ಪಟಾಕಿ ಹೊಡೆದು ಕೂಗಿಕೊಂಡಾಗ ಚಿರತೆ ಓಡಿ ಹೋಗಿದೆ.
ಚಿರತೆ ದಾಳಿಗೆ ಒಳಗಾದ ಅನೆ ಕಾವಲುಪಡೆ ಸಿಬ್ಬಂದಿ ಬಂಗಾರ್ ಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುರುಬರಹುಂಡಿ ಬಳಿ ಗ್ರಾಮದ ಮಹೇಶ್ ಎಂಬವವರು ತೋಟದ ಮನೆಯಿಂದ ಹಾಲು ಕರೆದುಕೊಂಡು ಗ್ರಾಮದ ಕಡೆ ಬರುವಾಗ ಹುಲಿ ರಸ್ತೆಯಲ್ಲಿ ನಿಂತಿತ್ತು. ಇದನ್ನು ನೋಡಿದ ಮಹೇಶ್ ಮತ್ತೆ ತೋಟದ ಮನೆ ಕಡೆ ಓಡಿ ಹೋಗಿದ್ದರು.


