ಮಹಾರಾಷ್ಟ್ರದ ರಾಜಕಾರಣದಲ್ಲಿ ಶರತ್ ಪವಾರ್ ಬಳಿಕ ಎನ್‌ಸಿಪಿಯಲ್ಲಿ ಬಹುದೊಡ್ಡ ಹೆಸರಾಗಿರುವ ಅಜಿತ್ ಅವರನ್ನು ಅಕಾಲಿಕ ಮೃತ್ಯು ಆವರಿಸಿದ್ದು ವಿಧಿಯಾಟ. ದೇಶದಲ್ಲಿ ಇದುವರೆಗೆ ಸಂಭವಿಸಿದ ಹೆಲಿಕಾಪ್ಟರ್ ದುರಂತಗಳನ್ನು ಕಂಡಾಗ ಗಂಭೀರವಾಗಿ ಆಲೋಚಿಸುವಂತಾಗುತ್ತೆ.
ಇಂದಿರಾಗಾಂಧಿ ಅವರ ಬಳಿಕ ದೇಶದ ಮುಂಚೂಣಿ ನಾಯ ಎಂದೇ ಪರಿಗಣಿತವಾಗಿದ್ದ ಸಂಜಯ ಗಾಂಧಿ, ಮಧ್ಯಪ್ರದೇಶದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಧವರಾವ್ ಸಿಂಧಿಯಾ, ಅವಿಭಜಿತ ಆಂಧ್ರದಲ್ಲಿ ಕಾಂಗ್ರೆಸ್‌ಗೆ ಬಲವಾದ ನೆಲೆಯೊದಗಿಸಿದ್ದ ಡಾ. ವೈ ಎಸ್ ರಾಜಶೇಖರರೆಡ್ಡಿ ಮತ್ತು ದೇಶದ ಸಿಡಿಎಸ್ ಹುದ್ದೆಯನ್ನು ಅತಿ ಸಮರ್ಥವಾಗಿ ನಿರ್ವಹಿಸಿದ ಬಿಪಿನ್ ರಾವತ್ ಮೊದಲಾದವರು ಇಂತಹ ಅಪಘಾತಗಳಿಗೆ ತುತ್ತಾಗಿ ಅಕಾಲಿಕ ಮೃತ್ಯುವಿನ ಪಾಶಕ್ಕೆ ಸಿಲುಕಿದಾಗ ಕಾಲಯಮ ಅದೆಷ್ಟು ಕ್ರೂರಿ ಎಂದೆನಿಸುತ್ತೆ.
ವರ್ಷದ ಆರಂಭದಲ್ಲಿಯೇ ಇದೊಂದು ಘೋರ ದುರಂತ ! ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ಪವಾರ್ ಇನ್ನಿಲ್ಲ . ಬುಧವಾರದಂದು ಪೂರ್ವಾಹ್ನ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಪವಾರ್ ಸೇರಿದಂತೆ ಐವರು ಸಾವಿಗೀಡಾಗಿರುವುದು ಎಲ್ಲರ ಮನಕಲಕುವಂತಿದೆ. ಮಹಾರಾಷ್ಟ್ರ ಸ್ಥಳೀಯ ಚುನಾವಣೆಗಳ ನಿಮಿತ್ತ ಅಜಿತ್ ಬಾರಾಮತಿ ಕಡೆಗೆ ಹೊರಟಿದ್ದ ಹೆಲಿಕಾಪ್ಟರ್ ಮಾರ್ಗದ ಮಧ್ಯೆಯೇ ಅಪಘಾತಕ್ಕೀಡಾಗಿ ಬೆಂಕಿಗಾಹುತಿಯಾಗಿದ್ದು ದುರ್ದೈವ. ಮಹಾರಾಷ್ಟ್ರದ ರಾಜಕಾರಣದಲ್ಲಿ ಶರತ್ ಪವಾರ್ ಬಳಿಕ ಎನ್‌ಸಿಪಿಯಲ್ಲಿ ಬಹುದೊಡ್ಡ ಹೆಸರಾಗಿರುವ ಅಜಿತ್ ಅವರನ್ನು ಅಕಾಲಿಕ ಮೃತ್ಯು ಆವರಿಸಿದ್ದು ವಿಧಿಯಾಟ.
ಈ ಹೆಲಿಕಾಪ್ಟರ್ ದುರಂತಕ್ಕೆ ಕಾರಣಗಳು ಏನೆ ಇರಲಿ. ಮಹಾರಾಷ್ಡ್ರ ರಾಜಕಾರಣದಲ್ಲಿ ಸಾಕಷ್ಟು ಭವಿಷ್ಯವನ್ನು ಕಂಡಿದ್ದ ದೇಶದ ಓರ್ವ ಮುಂಚೂಣಿ ನಾಯಕನ ಅಂತ್ಯದಿಂದ ಎನ್‌ಸಿಪಿ ಪಾರ್ಟಿಯ ನಾಯಕತ್ವದ ಮೇಲೆ ಕೆಲವು ಗಂಭೀರ ಪರಿಣಾಮಗಳು ಬೀರುವುದು ಖಂಡಿತ. ಶರತ್ಪವಾರ್ ಅವರು ಎನ್‌ಸಿಪಿ ಮೇಲೆ ಹೊಂದಿದ್ದ ಯಾಜಮಾನ್ಯವನ್ನು ಮೊದಲು ಪ್ರಶ್ನಿಸಿದ್ದೇ ಅಜಿತ್ ಪವಾರ್. ರಾಜಕೀಯವಾಗಿ ಶರತ್ ಜೊತೆ ಭಿನ್ನಭಿಪ್ರಾಯವನ್ನು ಹೊಂದಿದ್ದ ಇವರು, ಪಕ್ಷದಿಂದ ಸಿಡಿದು ಬರಲು ಹಿಂದು ಮುಂದು ನೋಡಲಿಲ್ಲ ! ಮಿಗಿಲಾಗಿ ಇವರು ಪವರ್ಶೇರ್ ವಿಚಾರದಲ್ಲಿ ಶರತ್ ರಾಜಕೀಯ ತೀರ್ಮಾನಗಳಿಗೆ ವಿರುದ್ಧವಾಗಿ ಸೆಟೆದು ನಿಂತವರು. ಮಿಗಿಲಾಗಿ ಬಿಜೆಪಿ ಜೊತೆ ಉತ್ತಮ ಸಂಬಂಧಗಳನ್ನು ಸಾಧಿಸಿ ರಾಜ್ಯಕ್ಕೆ ಉಪಮುಖ್ಯಮಂತ್ರಿಯಾಗಲು ಯಶಸ್ವಿಯಾದವರು. ಇನ್ನೇನು ಕೆಲವೇ ದಿನಗಳಲ್ಲಿ ಇಲ್ಲಿ ನಡೆಯಬೇಕಿರುವ ಸ್ಥಳಿಯ ಸಂಸ್ಥೆಗಳ ಚುನಾವಣೆ ನಿಮಿತ್ತ ಪಕ್ಷದ ಕೆಲ ಪ್ರಮುಖ ಕಾರ್ಯಕರ್ತರ ಜೊತೆ ಬುಧವಾರದಂದು ಅವರು ಮಾತುಕತೆಯನ್ನಿಟ್ಟುಕೊಂಡಿದ್ದರು. ಅದರೆ ಪವಾರ್ ವಿಧಿಯಾಟವೇ ಇಂದು ಬೇರೆಯಾಯಿತು.
ಮಹಾರಾಷ್ಟ್ರ ರಾಜಕಾರಣದಲ್ಲಿ ಠಾಕರೆ ಮತ್ತು ಪವಾರ್ ಕುಟುಂಬಗಳ ರಾಜಕಾರಣ ಅತಿಮುಖ್ಯ. ಕೇಂದ್ರದಲ್ಲಿ ಯಾವುದೇ ಪಕ್ಷವು ಅಧಿಕಾರಕ್ಕೆ ಬರಲಿ. ಈ ಎರಡು ಬಣಗಳನ್ನು ಬದಿಗಿತ್ತು ರಾಷ್ಟ್ರೀಯ ಪಕ್ಷಗಳು ತಮ್ಮ ಸ್ವಂತ ರಾಜಕೀಯ ತಳಹದಿಯ ಮೇಲೆ ಗಟ್ಟಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗದು. ಯಾವಾಗ ಉದ್ಶವ್ ಠಾಕರೆ ನೇತೃತ್ವದ ಶಿವಸೇನೆ ಮತ್ತು ಕಾಂಗ್ರೆಸ್ ಜೊತೆ ಶರತ್ ಪವಾರ್ ರಾಜಕೀಯ ನಂಟು ಗಟ್ಟಿಮಾಡಿಕೊಳ್ಳಲೆತ್ನಿಸಿದರೋ, ಅಲ್ಲಿಂದ ಅಜಿತ್, ತಮ್ಮ ಮಾವ ಹುಟ್ಟುಹಾಕಿದ ಎನ್‌ಸಿಪಿಯನ್ನು ತಮ್ಮ ರಾಜಕೀಯ ಬೇಕು ಬೇಡಗಳಿಗೆ ಅನುಗುಣವಾಗಿ ತಿರುಗಿಸಿಕೊಂಡು ಮಹಾರಾಷ್ಟ್ರ ರಾಜಕಾರಣದಲ್ಲಿ ತಮ್ಮ ಅನಿವಾರ್ಯ ಮತ್ತು ಅಸ್ತಿತ್ವವನ್ನು ಸಾಬೀತು ಮಾಡಿದವರು.
ದೇಶದಲ್ಲಿ ಇದುವರೆಗೆ ಸಂಭವಿಸಿದ ಕೆಲವೊಂದು ಹೆಲಿಕಾಪ್ಡರ್ ದುರಂತಗಳನ್ನು ಕಂಡಾಗ ಇದರ ಬಗ್ಗೆ ಗಂಭೀರವಾಗಿ ಆಲೋಚಿಸುವಂತಾಗುತ್ತೆ. ಇಂದಿರಾಗಾಂಧಿ ಅವರ ಬಳಿಕ ದೇಶದ ಮುಂಚೂಣಿ ನಾಯ ಎಂದೇ ಪರಿಗಣಿತವಾಗಿದ್ದ ಸಂಜಯ ಗಾಂಧಿ, ಮಧ್ಯಪ್ರದೇಶದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಧವರಾವ್ ಸಿಂಧಿಯಾ, ಅವಿಭಜಿತ ಆಂಧ್ರದಲ್ಲಿ ಕಾಂಗ್ರೆಸ್‌ಗೆ ಬಲವಾದ ನೆಲೆಯೊದಗಿಸಿದ್ದ ಡಾ. ವೈ ಎಸ್ ರಾಜಶೇಖರರೆಡ್ಡಿ ಮತ್ತು ದೇಶದ ಸಿಡಿಎಸ್ ಹುದ್ದೆಯನ್ನು ಅತಿ ಸಮರ್ಥವಾಗಿ ನಿರ್ವಹಿಸಿದ ಬಿಪಿನ್ ರಾವತ್ ಮೊದಲಾದವರು ಇಂತಹ ಅಪಘಾತಗಳಿಗೆ ತುತ್ತಾಗಿ ಅಕಾಲಿಕ ಮೃತ್ಯವಿನ ಪಾಶಕ್ಕೆ ಸಿಲುಕಿದಾಗ ಕಾಲಯಮ ಅದೆಷ್ಟು ಕ್ರೂರಿ ಎಂದೆನಿಸುತ್ತೆ.


