ಬಳ್ಳಾರಿ: ಬೀದಿ ನಠಯಿ ದಾಳಿ ನಡೆಸಿದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಐದು ಜನರು ಗಾಯಗೊಂಡಿರುವ ಬಳ್ಳಾರಿ ಸಮೀಪದ ಹಲಕುಂದಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ವರಲಕ್ಷ್ಮೀ (8), ಸಿಬ್ಬು (5), ಬುಡೇನ್ ಸಾಬ್ (50), ನವದೀಪ್ (10), ತರುಣ್ (18), ತೇಜು(6) ಸುರೇಶ್ (22) ಗಾಯಗೊಂಡವರು.
ಗಾಯಾಳುಗಳನ್ನು ಚಿಕಿತ್ಸೆಗಾಗಿ ನಾಲ್ವರನ್ನು ಬಳ್ಳಾರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ ಮೂವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಲಕುಂದಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕಮ್ಯುನಿಟಿ ಹೆಲ್ತ್ ಆಫೀಸರ್ ವಿಜಯಕುಮಾರ್ ಅವರು ತಿಳಿಸಿದ್ದಾರೆ.
ಗ್ರಾಮದಲ್ಲಿರುವ ಬೀದಿ ನಾಯಿ ಈಗ್ಗೆ ಕಳೆದ 15 ದಿನಗಳ ಹಿಂದೆ ಮರಿಗಳನ್ನು ಹಾಕಿದ್ದು, ಆ ನಾಯಿಗೆ ಪಕ್ಕದಲ್ಲಿನ ಮನೆಯವರು ಊಟ ಸಹ ಹಾಕುತ್ತಾ ಬಂದಿದ್ದಾರೆ. ಬುಧವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ತಾನು ಹಾಕಿದ್ದ ಮರಿಗಳನ್ನು ಕಚ್ಚಿ ಕೊಂದು ಹಾಕಿ ದಾರಿ ಹೋಗುತ್ತಿದ್ದ ಶಾಲೆ ವಿದ್ಯಾರ್ಥಿಗಳಾದ ವರಲಕ್ಷ್ಮೀ ಮತ್ತು ನವದೀಪ್ ಅವರ ಮೇಲೆ ದಾಳಿ ಕಚ್ಚಿದೆ. ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲು ಹೋದ ಬುಡೇನ್ ಸಾಬ್, ತರುಣ್ ಮತ್ತು ಸುರೇಶ್ ಅವರ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಮರಿಯಂಬಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವಿಜಯಕುಮಾರ್, ಹಲಕುಂದಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಹನುಮಂತಪ್ಪ ಸೇರಿದಂತೆ ಇತರರು ಇದ್ದರು.


