ಶಿವಮೊಗ್ಗ : ಭದ್ರಾವತಿ ತಾಲೂಕಿನ ಅರಳಹಳ್ಳಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ವಾಂತಿ ಬೇದಿಯಾಗಿ ಅಸ್ವಸ್ಥರಾದ ಹಿನ್ನೆಲೆ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಊಟ ಆದ ಮೇಲೆ ನೀಡಿದ ರಕ್ತ ಅಭಿವೃದ್ಧಿಗೆ ನೀಡುವ ಟಾನಿಕ್ ನಿಂದ ಮಕ್ಕಳು ಅಸ್ವಸ್ಥವಾಗಿರುವುದಾಗಿ ಹೇಳಲಾಗುತ್ತಿದ್ದು, 6ನೇ ತರಗತಿ ಮಕ್ಕಳೇ ಹೆಚ್ಚು ಅಸ್ವಸ್ಥರಾಗಿದ್ದಾರೆ. 20 ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಊಟದ ಮೇಲೆ ಮಕ್ಕಳಿಗೆ ರಕ್ತ ಅಭಿವೃದ್ಧಿಗಾಗಿ ಎಫ್ ಎಕ್ಸ್ ಟಾನಿಕ್ ನೀಡಬೇಕೆಂದು ಸರ್ಕಾರದ ಆದೇಶವಿದೆ.
ಸರ್ಕಾರಿ ಆದೇಶದ ಹಿನ್ನಲೆಯಲ್ಲಿ ಟಾನಿಕ್ ನೀಡಿದ ಮೇಲೆ ಈ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಅಸ್ವಸ್ಥಗೊಂಡ ಮಕ್ಕಳನ್ನ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.


