Menu

ವಿಜಯಪುರದಲ್ಲಿ ಜ್ಯುವೆಲ್ಲರಿ ಶಾಪ್‌ ದರೋಡೆ, ವೀಡಿಯೊ ಮಾಡಲು ಹೋದಾತನಿಗೆ ಫೈರಿಂಗ್‌

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಚಿನ್ನದಂಗಡಿ ದರೋಡೆ ನಡೆದಿದೆ. ಈ ವೇಳೆ ವೀಡಿಯೊ ಸೆರೆ ಹಿಡಿಯಲು ಹೋದವನ ಮೇಲೆ ದರೋಡೆಕೋರರು ಫೈರಿಂಗ್‌ ಮಾಡಿದ್ದಾರೆ.

ದರೋಡೆ ನಡೆಯುವಾಗ ಅನಿಲ್‌ ಎಂಬಾತ ವೀಡಿಯೊ ಸೆರೆ ಹಿಡಿಯಲು ಹೋದಾಗ ಆತನ ಮೇಲೆ ಗುಂಡು ಹಾರಿಸಲಾಗಿದೆ, ಅನಿಲ್‌ ಜೊತೆಗಿದ್ದ ಆತ್ಮಲಿಂಗ ಹೂಗಾರ ಎನ್ನುವವನ ಕಾಲಿಗೆ ಗುಂಡು ತಾಗಿದೆ. ಫೈರಿಂಗ್‌ ಆದಾಗ ನನಗೆ ತುಂಬಾ ಭಯವಾಯಿತು. ದರೋಡೆಕೋರರು ಕನ್ನಡದಲ್ಲಿಯೇ ಮಾತನಾಡುತ್ತಿದ್ದರು ಎಂದು ಅನಿಲ್‌ ತಿಳಿಸಿದ್ದಾರೆ. ಆತ್ಮಲಿಂಗ ಅವರನ್ನು ಬಿಎಲ್ಡಿಇ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.

ಹಲಸಂಗಿ ಗ್ರಾಮದ ಭೂಮಿಕಾ ಜ್ಯುವೆಲ್ಲರಿ ಶಾಪ್‌ನಲ್ಲಿ ದರೋಡೆ ನಡೆದಿದ್ದು, ಇಬ್ಬರು ಅಪರಿಚಿತರು ಕಪ್ಪು ಬಣ್ಣದ ಜಾಕೆಟ್ , ಕಪ್ಪು ಬಣ್ಣದ ಹೆಲ್ಮೆಟ್ ಧರಿಸಿದ್ದರು ಎನ್ನಲಾಗಿದೆ. ಕಪ್ಪು ಬಣ್ಣದ ಹೋಂಡಾ ಯೂನಿಕಾರ್ನ್ ಬೈಕ್‌ನಲ್ಲಿ ಬಂದು ಮಾಲೀಕ ಮಹಾರುದ್ರ ಎನ್ನುವವರಿಗೆ ಗನ್ ತೋರಿಸಿ ಬೆದರಿಸಿ 205 ಗ್ರಾಂ ಬಂಗಾರದ ಆಭರಣ ಮತ್ತು 1 ಕೆಜಿ ಬೆಳ್ಳಿ ದರೋಡೆ ಮಾಡಿದ್ದಾರೆ.

Related Posts

Leave a Reply

Your email address will not be published. Required fields are marked *