ವಯನಾಡಿನ ಕೇರಳ-ಕರ್ನಾಟಕ ಗಡಿಯ ತೋಲ್ಪೆಟ್ಟಿಯಲ್ಲಿ 30.93 ಲಕ್ಷ ರೂಪಾಯಿ ಸಾಗಿಸುತ್ತಿದ್ದ ಯುವಕನನ್ನು ಅಬಕಾರಿ ಇಲಾಖೆ ಬಂಧಿಸಿದೆ. ಕೋಯಿಕ್ಕೋಡ್‌ನ ಕೊಡುವಳ್ಳಿಯ ಮೊಹಮ್ಮದ್ ಸಾಮಿರ್ ಬಂಧಿತ ಯುವಕ.
30,93,900 ರೂಪಾಯಿಯೊಂದಿಗೆ ಬೆಂಗಳೂರಿನಿಂದ ಕೋಯಿಕ್ಕೋಡ್‌ಗೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಯುವಕ ಪ್ರಯಾಣಿಸುತ್ತಿದ್ದ. ಚೆಕ್‌ಪೋಸ್ಟ್‌ಗೆ ಬಂದಾಗ ಅಬಕಾರಿ ಇಲಾಖೆ ಮಾದಕವಸ್ತು ಸಾಗಣೆ ಬಗ್ಗೆ ತಪಾಸಣೆ ನಡೆಸುತ್ತಿದ್ದಾಗ ಯುವಕ ಗಾಬರಿಯಾಗಿದ್ದ, ಇದರಿಂದ ಅನುಮಾನಗೊಂಡ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ನೋಟಿನ ಕಂತೆಗಳು ಸಿಕ್ಕಿವೆ.
ಹಣವನ್ನು ಯಾರಿಗೆ, ಎಲ್ಲಿಗೆ ಕೊಂಡೊಯ್ಯಲಾಗುತ್ತಿದೆ ಎಂಬುದಕ್ಕೆ ದಾಖಲೆಗಳನ್ನು ತೋರಿಸಲು ಕೇಳಿದಾಗ ಯಾವುದೇ ದಾಖಲೆ ಇರಲಿಲ್ಲ. ಅಧಿಕಾರಿಗಳು ಹಣ ಮತ್ತು ಯುವಕನನ್ನು ವಶಕ್ಕೆ ಪಡೆದಿದ್ದಾರೆ. ವಲಯ ಇನ್ಸ್‌ಪೆಕ್ಟರ್ ಕೆ. ಶಶಿ, ಪ್ರಿವೆಂಟಿವ್ ಅಧಿಕಾರಿಗಳಾದ ಕೆ. ಜಾನಿ, ವಿ. ಬಾಬು, ಸಿಕೆ. ರಂಜಿತ್, ಮತ್ತು ಸಿವಿಲ್ ಎಕ್ಸೈಸ್ ಅಧಿಕಾರಿಗಳಾದ ಪಿಎಸ್. ಸುಶಾದ್, ಕೆ. ರಶೀದ್ ತಪಾಸಣೆ ನಡೆ ವಶಪಡಿಸಿಕೊಂಡ ಹಣವನ್ನುಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ.


