ಆನೇಕಲ್‌ನ ಅತ್ತಿಬೆಲೆಯಲ್ಲಿ ನವವಿವಾಹಿತ ಅಂಬರೀಶ್ ಮತ್ತು ನಂದಿನಿ ಪರಸ್ಪರ ಗಂಭೀರ ಆರೋಪ-ಪ್ರತ್ಯಾರೋಪ ಮಾಡಿ ಪೊಲೀ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪತ್ನಿಯ ಸಂಬಂಧಿಕರು ತನ್ನ ಮೇಲೆ ಹಲ್ಲೆ ಮಾಡಿರುವುದಾಗಿ ಪತಿ ಆರೋಪಿಸಿದ್ದರೆ, ಪತಿಗೆ ಅನೈತಿಕ ಸಂಬಂಧವಿದ್ದು, ಕಿರುಕುಳ ಮತ್ತು ಜಾತಿ ನಿಂದನೆ ಮಾಡುತ್ತಾನೆಂದು ಪತ್ನಿ ಆರೋಪಿಸಿದ್ದಾಳೆ.
ವೈವಾಹಿಕ ಕಲಹ ತೀವ್ರ ಸ್ವರೂಪ ಪಡೆದುಕೊಂಡಿದೆ. ಪತ್ನಿಯ ಕುಟುಂಬಸ್ಥರಿಂದ ಪತಿ ಹಲ್ಲೆಗೆ ಒಳಗಾಗಿದ್ದು, ಪತಿಯ ಅನೈತಿಕ ಸಂಬಂಧಕ್ಕೆ ಆತನ ತಾಯಿಯೂ ಸಹಕರಿಸಿರುವುದಾಗಿ ಪತ್ನಿ ಹೇಳಿದ್ದಾಳೆ. ಅಂತರ್ಜಾತಿ ವಿವಾಹವಾಗಿದ್ದ ಅಂಬರೀಶ್ ಮತ್ತು ನಂದಿನಿ ನಡುವೆ ಮದುವೆಯಾಗಿ ತಿಂಗಳೊಳಗೆ ವೈಮನಸ್ಸು ಉಂಟಾಗಿದೆ. ನಂದಿನಿಯ ಮಾವ ಸಂಪಂಗಿ, ಅಂಬರೀಶ್ ಮೇಲೆ ಹಲ್ಲೆ ನಡೆಸಿದ್ದ. ಆತನ ಬಳಿಯಿದ್ದ ಮೊಬೈಲ್, ಚೈನ್, ರಿಂಗ್ ಕಸಿದುಕೊಂಡು 4 ಲಕ್ಷ ರೂ.ಗೆ ಬೇಡಿಕೆ ಇಟ್ಟು, 15 ಸಾವಿರ ರೂ. ಕಿತ್ತುಕೊಂಡು ಕೊಲೆ ಬೆದರಿಕೆ ಹಾಕಿದ್ದಾರೆಂದು ಆತ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ.
ತನ್ನ ಪತಿ ಮತ್ತು ಅತ್ತೆ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾಳೆ. ಮದುವೆಗೆ ಮೊದಲು ಹಾಗೂ ಮದುವೆಯ ನಂತರವೂ ಪತಿ ಮತ್ತೊಬ್ಬ ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದು, ತನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಎಂದು ದೂರಿದ್ದಾಳೆ.
ಪತಿ ಕುಡಿದು ಮನೆಗೆ ಬಂದು ನಿತ್ಯ ಹಲ್ಲೆ ನಡೆಸುತ್ತಿದ್ದ, ಅತ್ತೆಯೂ ಆತನೊಂದಿಗೆ ಸೇರಿ ಕಿರುಕುಳ ನೀಡುತ್ತಿದ್ದರೆಂದು ನಂದಿನಿ ಹೇಳಿದ್ದಾಳೆ. ತನ್ನ ಎಂಗೇಜ್ಮೆಂಟ್ ವೇಳೆ ಧರಿಸಿದ್ದ ಸೀರೆಯನ್ನು ಪತಿಯ ತಾಯಿಯೇ ಐರನ್ ಮಾಡಿ ಮಗನ ಮೂಲಕ ಅವನ ಪ್ರೇಯಸಿಗೆ ಗಿಫ್ಟ್ ಕೊಟ್ಟಿದ್ದಾರೆಂದು ಹೇಳಿದ್ದಾಳೆ.
ಮದುವೆಗೆ ಮೊದಲೇ ತನ್ನ ಜಾತಿ ಕುರಿತು ಪತಿ ಮತ್ತು ಅತ್ತೆಗೆ ಸಂಪೂರ್ಣವಾಗಿ ತಿಳಿದಿದ್ದರೂ ಮದುವೆ ಬಳಿಕ ಜಾತಿ ನಿಂದನೆ ಮಾಡಿ ಕಿರುಕುಳ ನೀಡಲಾಗುತ್ತಿತ್ತು ಎಂದು ನಂದಿನಿ ದೂರಿದ್ದಾಳೆ.


