ನವದೆಹಲಿ: ಭಾರತದಲ್ಲಿ ಟಿ-20 ವಿಶ್ವಕಪ್ ಟೂರ್ನಿ ಆಡಲು ನಿರಾಕರಿಸಿದ ಬಾಂಗ್ಲಾದೇಶ ತಂಡವನ್ನು ಕೈಬಿಟ್ಟ ಐಸಿಸಿ ಸ್ಕಾಟ್ಲೆಂಡ್ ತಂಡಕ್ಕೆ ವಿಶ್ವಕಪ್ ನಲ್ಲಿ ಆಡಲು ಅವಕಾಶ ನೀಡಿದೆ.
ಶನಿವಾರ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಬಾಂಗ್ಲಾದೇಶ ತನ್ನ ನಿಲುವು ಬದಲಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ವಿಶ್ವಕಪ್ ನಲ್ಲಿ ಬಾಂಗ್ಲಾ ಬದಲು ಸ್ಕಾಟ್ಲೆಂಡ್ ಗೆ ಆಡಲು ಅವಕಾಶ ನೀಡಿದೆ.
ಭಾರತದಲ್ಲಿ ಭದ್ರತಾ ಕಾರಣಗಳನ್ನು ನೀಡಿ ಬಾಂಗ್ಲಾದೇಶ ವಿಶ್ವಕಪ್ ನಲ್ಲಿ ಆಡಲು ನಿರಾಕರಿಸಿತ್ತು. ಅಲ್ಲದೇ ಭಾರತದ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸಲು ಪಟ್ಟು ಹಿಡಿದಿತ್ತು. ಈ ಬಗ್ಗೆ ಮೂರು ವಾರಗಳ ನಡೆದ ಮನವೊಲಿಕೆ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಐಸಿಸಿ ಈ ನಿರ್ಧಾರ ಕೈಗೊಂಡಿದೆ.
ಐಸಿಸಿ ಬುಧವಾರ ಕರೆದಿದ್ದ ತುರ್ತು ಸಭೆಯಲ್ಲಿ ಬಾಂಗ್ಲಾದೇಶ ಬದಲು ಯಾವ ತಂಡ ಆಡಿಸಬೇಕು ಎಂದು ಮತದಾನ ನಡೆಸಿತ್ತು. ಮತದಾನದಲ್ಲಿ ಸ್ಕಾಟ್ಲೆಂಡ್ ಪರ ಅತೀ ಹೆಚ್ಚು ಮತಗಳು ಬಿದ್ದಿದ್ದವು.


