Menu

ನಾಳೆಯಿಂದ ಜ.27ರವರೆಗೆ ಬ್ಯಾಂಕ್‌ಗಳಿಗೆ ರಜೆ

ಜನವರಿ 24 ಶನಿವಾರದಿಂದ 27 ಮಂಗಳವಾರದವರೆಗೆ ಸತತ 4 ದಿನ ಬ್ಯಾಂಕುಗಳಿಗೆ ರಜೆ ಇದೆ. ಜನವರಿ 26ರಂದು ಗಣರಾಜ್ಯೋತ್ಸವ ರಜೆ ಇರುತ್ತದೆ. 27ರಂದು ಬ್ಯಾಂಕ್ ನೌಕರರ ಮುಷ್ಕರ ನಿಗದಿಯಾಗಿದೆ.

ಎಲ್ಲಾ ಶನಿವಾರ ಮತ್ತು ಭಾನುವಾರಗಳನ್ನು ವಾರದ ರಜೆಗಳನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ಬ್ಯಾಂಕ್ ನೌಕರರು 27ರಂದು ಮುಷ್ಕರಕ್ಕೆ ಸಿದ್ಧತೆ ನಡೆಸಿದ್ದಾರೆ.  ಮುಷ್ಕರ ನಡೆಸದಂತೆ ಬ್ಯಾಂಕ್ ನೌಕರರ ಮನವೊಲಿಸಲು ಸರ್ಕಾರ ಪ್ರಯತ್ನಿಸು ತ್ತಿದೆ. ಗುರುವಾರವೂ ದೆಹಲಿಯಲ್ಲಿ ಸಂಧಾನ ಸಭೆ ನಡೆಯಿತು. ಆದರೆ ಸಮಸ್ಯೆ ಪರಿಹಾರ ಆಗಿಲ್ಲ. ಶುಕ್ರವಾರವೂ ಮಾತುಕತೆ ನಡೆಯಲಿದೆ, ಸಂಜೆ ವೇಳೆಗೆ ಈ ಸಂಧಾನ ಯಶಸ್ವಿಯಾದರೆ ನೌಕರರು 27ರಂದು ಮುಷ್ಕರ ಕೈಬಿಡಬಹುದು.

ಕೆಲವು ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಇರುವಂತೆ ಬ್ಯಾಂಕುಗಳಲ್ಲೂ ವಾರಕ್ಕೆ ಐದು ದಿನ ಕೆಲಸದ ನಿಯಮ ತರಬೇಕೆಂಬುದು ನೌಕರರ ಪ್ರಮುಖ ಆಗ್ರಹವಾಗಿದೆ. ಒತ್ತಾಯವಾಗಿದೆ. ಭಾನುವಾರ ರಜೆ ಜೊತೆ ಎರಡನೇ ಮತ್ತು ನಾಲ್ಕನೇ ಶನಿವಾರ ಗಳಂದು ರಜೆ ಇದೆ. ಎಲ್ಲಾ ಶನಿವಾರ ಮತ್ತು ಭಾನುವಾರ ರಜೆ ನೀಡಬೇಕು ಎಂಬುದು ಬ್ಯಾಂಕ್ ಉದ್ಯೋಗಿಗಳ ಬೇಡಿಕೆಯಾಗಿದೆ.

Related Posts

Leave a Reply

Your email address will not be published. Required fields are marked *