ಮನೆಯವರ ವಿರೋಧದ ನಡುವೆಯೇ ಮದುವೆಯಾಗಿದ್ದ ಯುವ ಜೋಡಿಯನ್ನು ಯುವತಿಯ ಸಹೋದರರು ಕೊಂದು ಹೊಲದಲ್ಲಿ ಹೂತು ಹಾಕಿರು ಭಯಾನಕ ಘಟನೆಯೊಂದು ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ ನಡೆದಿದೆ. ಈ ಜೋಡಿ ಕೊಲೆಗೆ ಸಂಬಂಧಿಸಿದಂತೆ ಯುವತಿಯ ಸೋದರರನ್ನು ಬಂಧಿಸಲಾಗಿದೆ.
ಕಾಜಲ್ ಮತ್ತು ಆಕೆಯ ಸಂಗಾತಿ ಅರ್ಮಾನ್ ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ನೀಮ್ ಕರೋಲಿ ಬಾಬಾ ದೇವಸ್ಥಾನದ ಸಮೀಪದ ಹೊಲದ ಬಳಿಕ ಗುಂಡಿಯಲ್ಲಿ ಹೂತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಪೊಲೀಸರು ಯುವತಿ ಮನೆಯವರ ವಿಚಾರಣೆ ನಡೆಸಿದಾಗ ಕೊಲೆಯ ವಿಚಾರ ಬಹಿರಂಗಗೊಂಡಿದೆ.
ಇಬ್ಬರೂ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು, ಆದರೆ ಯುವತಿ ಕಾಜಲ್ ಪೋಷಕರು ಒಪ್ಪಿರಲಿಲ್ಲ. ಆದರೂ ಅವರಿಬ್ಬರು ಮದುವೆಯಾಗಿ ಜೀವನ ನಡೆಸುತ್ತಿದ್ದರು. ದಂಪತಿಯಿದ್ದ ಮನೆಗೆ ಬಂದ ಯುವತಿಯ ಪೋಷಕರು ಕೋಪದಲ್ಲಿ ಇಬ್ಬರನ್ನೂ ಕೊಲೆ ಮಾಡಿದ್ದಾರೆ. ಸಾಕ್ಷ್ಯ ನಾಶಕ್ಕಾಗಿ ಹೂತಿರುವುದಾಗಿ ಇಬ್ಬರು ಸಹೋದರರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ, ಪೊಲೀಸರು ಕಾಜಲ್‌ನ ಇಬ್ಬರು ಸಹೋದರರ ಬಂಧಿಸಿದ್ದಾರೆ.


