ಸ್ಕೀಡ್ ಆದ ವಾಹನ ಪ್ರಪಾತಕ್ಕೆ ಬಿದ್ದ ಪರಿಣಾಮ 10 ಮಂದಿ ಯೋಧರು ಮೃತಪಟ್ಟಿದ್ದು, 10 ಮಂದಿ ಗಾಯಗೊಂಡ ಘಟನೆ ಜಮ್ಮು ಕಾಶ್ಮೀರದಲ್ಲಿ ಸಂಭವಿಸಿದೆ.
ಕಾರ್ಯಾಚರಣೆಗಾಗಿ ಹೊರಟ್ಟಿದ್ದ ಬುಲೆಟ್ ಪ್ರೂಫ್ ವಾಹನ ದೋಡಾದ ತಿರುವಿನಲ್ಲಿ ಸ್ಕಿಡ್ ಆಗಿ ಪ್ರಪಾತಕ್ಕೆ ಉರುಳಿ ಬಿದ್ದಿದೆ.
ಗಾಯಗೊಂಡ 10 ಮಂದಿ ಯೋಧರನ್ನು ಏರ್ ಲಿಫ್ಟ್ ಮೂಲಕ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುರ್ಘಟನೆಗೆ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ ಶೋಕ ವ್ಯಕ್ತಪಡಿಸಿದ್ದು, ಹುತಾತ್ಮರಾದ ಯೋಧರ ಕುಟುಂಬದ ಜೊತೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.


