Thursday, January 22, 2026
Menu

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 2 ತಿಂಗಳಲ್ಲಿ 14 ಕೋಟಿ ಆದಾಯ!

kukke temple

ದಕ್ಷಿಣ ಕನ್ನಡದ ಖ್ಯಾತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವರ್ಷದ ಕೊನೆಯ 2 ತಿಂಗಳಲ್ಲಿ 14.78 ಕೋಟಿ ರೂ. ಆದಾಯ ಹರಿದು ಬಂದಿದ್ದು, ಹೊಸ ದಾಖಲೆ ಬರೆದಿದೆ.

2025ರ ನವೆಂಬರ್​​​ ಹಾಗೂ ಡಿಸೆಂಬರ್​​ ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಭಕ್ತರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹರಿದು ಬಂದಿದ್ದು, ಈ ಅವಧಿಯಲ್ಲಿ 14 ಕೋಟಿ 77 ಲಕ್ಷ 80 ಸಾವಿರ ರೂ. ಆದಾಯ ಸಂಗ್ರಹವಾಗಿದೆ.

ನಾಗರಪಂಚಮಿ, ಕಾರ್ತಿಕ ಮಾಸ, ಡಿಸೆಂಬರ್ ತಿಂಗಳ ರಜಾಕಾಲ ಹಾಗೂ ವಿಶೇಷ ಪೂಜಾ ದಿನಗಳಲ್ಲಿ ಭಕ್ತರ ಹರಿವು ಗಣನೀಯವಾಗಿ ಹೆಚ್ಚಿರುವುದು ಆದಾಯ ವೃದ್ಧಿಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗಿದೆ.

ನವೆಂಬರ್ ಆದಾಯ:

ನವೆಂಬರ್‌ನಲ್ಲಿ ದೇವಸ್ಥಾನವು ವಿವಿಧ ಪೂಜಾ ಸೇವೆಗಳಿಂದ 4 ಕೋಟಿ 56 ಲಕ್ಷ 21 ಸಾವಿರ 739 ಆದಾಯ ಗಳಿಸಿದೆ. ಇದೇ ಅವಧಿಯಲ್ಲಿ ಹುಂಡಿಯಿಂದ 1 ಕೋಟಿ 9 ಲಕ್ಷ 76 ಸಾವಿರ 957 ಸಂಗ್ರಹವಾಗಿದ್ದು, ಅನ್ನದಾನ ನಿಧಿಯಿಂದ 83 ಲಕ್ಷ 57 ಸಾವಿರ 769 ಆದಾಯ ಬಂದಿದೆ.

ಡಿಸೆಂಬರ್ ಆದಾಯ:

ಡಿಸೆಂಬರ್‌ನಲ್ಲಿ​ಭಕ್ತರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳ ಕಂಡುಬಂದಿದ್ದು, ವಿವಿಧ ಸೇವೆಗಳಿಂದ 5 ಕೋಟಿ 30 ಲಕ್ಷ 18 ಸಾವಿರ 923 ಆದಾಯ ಲಭಿಸಿದೆ. ಹುಂಡಿ ಸಂಗ್ರಹವಾಗಿ 1 ಕೋಟಿ 90 ಲಕ್ಷ 63 ಸಾವಿರ 518 ರೂಪಾಯಿ ಬಂದಿದ್ದು, ಅನ್ನದಾನ ನಿಧಿಯಿಂದ 1 ಕೋಟಿ 7 ಲಕ್ಷ 41 ಸಾವಿರ 594 ಆದಾಯ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *