ನಟ ಕಿಚ್ಚ ಸುದೀಪ್ ವಿರುದ್ಧ ವಂಚನೆ ಆರೋಪದಡಿ ಪ್ರಕರಣ ದಾಖಲಾಗಿದೆ. ನಿರ್ಮಾಪಕ ಸುದೀಪ್ ಮತ್ತು ಚಕ್ರವರ್ತಿ ಚಂದ್ರಚೂಡ್ ವಿರುದ್ಧ 10 ವರ್ಷಗಳ ಹಿಂದಿನ ‘ವಾರಸ್ದಾರ’ ಧಾರಾವಾಹಿ ಪ್ರಕರಣಕ್ಕೆ ಸಂಬಂಧಿಸಿದ ವಂಚನೆ ಆರೋಪ ಮತ್ತೆ ಸದ್ದು ಮಾಡಿದೆ. ಹಣ ನೀಡುವ ಭರವಸೆ ನೀಡಿ ಪ್ರಕರಣ ಹಿಂಪಡೆದು ಬಳಿಕ ವಂಚಿಸಿದ್ದಾರೆ ಎಂದು ಮನೆ ಮಾಲೀಕ ದೀಪಕ್ ಮಯೂರ್ ಬೆಂಗಳೂರು ಕಮಿಷನರ್ ಕಚೇರಿಗೆ ದೂರು ಸಲ್ಲಿಸಿದ್ದಾರೆ.
2016ರಲ್ಲಿ ‘ವಾರಸ್ದಾರ’ ಧಾರಾವಾಹಿ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಧಾರಾವಾಹಿ ಶೂಟಿಂಗ್ಗೆ ದೀಪಕ್ ಮಯೂರ್ ಎಂಬವರ ಮನೆಯನ್ನು ಬಾಡಿಗೆಗೆ ಪಡೆಯಲಾಗಿತ್ತು. ಆದರೆ ಧಾರಾವಾಹಿ ಶೂಟಿಂಗ್ ವೇಳೆ ತಮ್ಮ ಕಾಫಿ ತೋಟಕ್ಕೆ ಹಾನಿ ಆಗಿದೆ, ತೋಟದಲ್ಲಿದ್ದ ಮರ, ಗಿಡಗಳನ್ನು ಕಡಿಯಲಾಗಿದೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಮನೆಗೆ ಬಾಡಿಗೆ ನೀಡುವುದಾಗಿ ಹೇಳಿದ್ದ ಸುದೀಪ್ ಬಾಡಿಗೆ ಹಣದಲ್ಲಿ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಮನೆ ಮಾಲೀಕ ದೀಪಕ್ ಆರೋಪಿಸಿ ಎರಡು ವರ್ಷದ ಬಳಿಕ ಕೋರ್ಟ್ ಮೊಎ ಹೋಗಿದ್ದರು.
95 ಲಕ್ಷ ರೂ. ಪರಿಹಾರ ನೀಡುವಂತೆ ದೀಪಕ್ ಕೇಸ್ ಹಾಕಿದ್ದರು. 2023ರಲ್ಲಿ ಎನ್ ಕುಮಾರ್ ಎಂಬ ವ್ಯಕ್ತಿ ದೀಪಕ್ಗೆ ಕರೆ ಮಾಡಿ ನಮಗೂ ಹಣ ನೀಡದೆ ಸುದೀಪ್ ಅವರಿಂದ ವಂಚನೆ ಆಗಿದೆ ಎಂದಿದ್ದರು. ಬಳಿಕ ದೀಪಕ್ ಚಕ್ರವರ್ತಿ ಚಂದ್ರಚೂಡ್ಗೆ ಕರೆ ಮಾಡಿದ್ದರು. ಈ ವೇಳೆ ಚೆನ್ನೈಗೆ ಬರುವಂತೆ ಚಕ್ರವರ್ತಿ ಚಂದ್ರಚೂಡ್ ಹೇಳಿದ್ದರು ಎನ್ನಲಾಗಿದೆ.
ಕೇಸ್ ವಾಪಸ್ ಪಡೆದರೆ 60 ಲಕ್ಷ ನೀಡುವುದಾಗಿ ಸುದೀಪ್ ಭರವಸೆ ನೀಡಿದ್ದರು ಎಂಬುದು ದೀಪಕ್ ಅವರ ಆರೋಪ. ಕೇಸ್ ವಾಪಸ್ ಪಡೆಯುವ ಮುನ್ನ ಚಕ್ರವರ್ತಿ 10 ಲಕ್ಷದ ರೂಪಾಯಿ ಚೆಕ್ ನೀಡಿದ್ದ ಕಾರಣ ನಂಬಿ ಲ್ಲಿ ದೀಪಕ್ ತಾನು ಕೇಸ್ ಹಿಂಪಡೆದಿದದಾಗಿ ಹೇಳಿಕೊಂಡಿದ್ದಾರೆ. ಕೇಸ್ ವಾಪಸ್ ಪಡೆಯುತ್ತಿದ್ದಂತೆ ಚಕ್ರವರ್ತಿ ಅವರು ದೀಪಕ್ ನಂಬರ್ನ ಬ್ಲಾಕ್ ಮಾಡಿದ್ದಾರೆ ಎನ್ನಲಾಗಿದೆ.


