ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಮನೆಯಲ್ಲಿ ವೃದ್ಧ ದಂಪತಿಗಳು ಅನುಮಾನಸ್ಪದ ರಿತಿಯಲ್ಲಿ ಸಾವಿಗೀಡಾಗಿದ್ದಾರೆ.
ಭದ್ರಾವತಿಯ ಭೂತನಗುಡಿಯಲ್ಲಿ ಚಂದ್ರಪ್ಪ (80) ಮತ್ತು ಪತ್ನಿ ಜಯಮ್ಮ (70) ಸಾವನ್ನಪ್ಪಿರುವುದು ಅನುಮಾನಸ್ಪದಕ್ಕೆ ಕಾರಣವಾಗಿದೆ.
ಇಬ್ಬರು ಅನೂನ್ಯವಾಗಿದ್ದು, ಇಬ್ಬರಿಗೆ ಮೂವರು ಗಂಡು ಮಕ್ಕಳ್ಳಿದ್ದಾರೆ. ಗಂಡು ಮಕ್ಕಳಲ್ಲಿ ಒಬ್ಬರು ಶಿಕ್ಷಕರಾಗಿದ್ದರೆ, ಮತ್ತೋರ್ವರು ದಾವಣಗೆರೆಯ ಶಿವಶಂಕರ್ ಅವರ ಸಂಸ್ಥೆಯಲ್ಲಿ ನೌಕರರಾಗಿದ್ದಾರೆ.
ನಿನ್ನೆ ಊಟ ಮುಗಿಸಿ ಮಲಗಿದ್ದ ದಂಪತಿಗಳು ಇಂದು ಬೆಳಿಗ್ಗೆ ಮಕ್ಕಳು ಕರೆ ಮಾಡಿದಾಗ ದಂಪತಿಗಳಿಬ್ಬರು ಕರೆ ಸ್ವೀಕರಿಸಲಿಲ್ಲ ಎಂಬುದು ತಿಳಿದು ಬಂದಿದೆ. ಸ್ಥಳೀಯರು ಮನೆಗೆ ಹೋದಾಗ ದಂಪತಿ ಸಾವು ಧೃಢಪಟ್ಟಿದೆ.
ಪ್ರತಿದಿನ ಬಂದು ಶುಗರ್, ಬಿಪಿ ಕಾಯಿಲೆಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ನಿನ್ನೆ ವೈದ್ಯರು ಬಂದು ಇಂಜೆಕ್ಟ್ ಮಾಡಿ ಹೋದ ನಂತರ ಮಧ್ಯಾಹ್ನದಿಂದ ದಂಪತಿಗಳು ಏಳಲಿಲ್ಲ. ಇದುವರೆಗೂ ವೈದ್ಯರು ಬಂದು ಹೋಗದ ಹಿನ್ನಲೆಯಲ್ಲಿ ಸ್ಥಳೀಯರು ವೈದ್ಯರ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಮನೆಯ ರೂಮಿನಲ್ಲಿ ಚಂದ್ರಪ್ಪ ಶವವಾಗಿ ಪತ್ತೆಯಾದರೆ, ಪತ್ನಿ ಜಯಮ್ಮ ಹಾಲ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪ್ರಕರಣವನ್ನ ಭದ್ರಾವತಿ ಓಲ್ಡ್ ಟೌನ್ ಪೊಲೀಸರು ಅನುಮಾನಸ್ಪದ ಸಾವೆಂದು ಯುಡಿಆರ್ ಮಾಡಿಕೊಂಡಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.


